ಬಿಜೆಪಿ ಬೆಂಬಲಿಸಿದಕ್ಕೆ ಮಸೀದಿ ಪ್ರವೇಶಕ್ಕೆ ನಿಷೇಧ, ಪ್ರತ್ಯೇಕ ಮಸೀದಿ ನಿರ್ಮಿಸಿ ನಮಾಜ್
ಅಗರ್ತಾಲ್: ಭಾರತದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ, ನಮ್ಮ ಮೂಲ ಭೂತ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ, ಸ್ವಾತಂತ್ರ್ಯ ನೀಡುತ್ತಿಲ್ಲ ಎಂದು ಬೊಗಳೆ ಬಿಟ್ಟವರಿಗೆ 16 ತಿಂಗಳಿಂದ 25 ಕುಟುಂಬಗಳ ಸದಸ್ಯರಿಗೆ ನಿಷೇಧ ಹೇರಿರುವ ಘಟನೆ ಕಾಣುತ್ತಿಲ್ಲ. ಬಿಜೆಪಿ ಸೇರಿದ್ದಾರೆ ಎಂಬ ಕಾರಣಕ್ಕೆ ದಕ್ಷಿಣ ತ್ರಿಪುರಾದ 25 ಮುಸ್ಲಿಂ ಕುಟುಂಬಗಳಿಗೆ ಮಸೀದಿ ಪ್ರವೇಶವನ್ನೇ ನಿಷೇಧಿಸಲಾಗಿತ್ತು. ಇದರಿಂದ ಕಂಗಾಲಾಗಿದ್ದ ಕುಟುಂಬ ನಮಾಜ್ ಮಾಡಲು ಶೆಡ್ ನಂತೆ ಪ್ರತ್ಯೇಕ ಮಸೀದಿ ನಿರ್ಮಿಸಿ ನಿತ್ಯ ನಮಾಜ್ ಮಾಡುತ್ತಿದ್ದಾರೆ.
ಬಿಜೆಪಿ ಸೇರ್ಪಡೆಯಾಗಿರುವುದರಿಂದ ‘ಆ ಮುಸ್ಲಿಂ ಕುಟುಂಬಗಳು ಹಿಂದೂವಾದಿ ಪಕ್ಷಕ್ಕೆ ಬೆಂಬಲಿಸಿವೆ. ಆದ್ದರಿಂದ ಅವರಿಗೆ ಮಸೀದಿ ಪ್ರವೇಶ ನಿರ್ಭಂಧಿಸಲಾಗಿದೆ. ಅವರು ಮಸೀದಿಗೆ ಬರುವ ಅಗತ್ಯವಿಲ್ಲ. ಹಿಂದೂಗಳೊಂದಿಗೆ ಹೋಗಲಿ ಎಂದು ಮಸೀದಿಯವರು ಸಮರ್ಥಿಸಿಕೊಂಡಿದ್ದಾರೆ.
ಈ ಗ್ರಾಮದಲ್ಲಿ ಸುಮಾರು 100 ಕೃಷಿ ಕುಟುಂಬಗಳು ಇವೆ. ಅದರಲ್ಲಿ 83 ಮುಸ್ಲಿಂ ಕುಟುಂಬಗಳು ಇವೆ. ಅದರಲ್ಲಿ 25 ಮುಸ್ಲಿಂ ಕುಟುಂಬಗಳು ಕೆಲ ದಿನಗಳ ಹಿಂದೆ ಬಿಜೆಪಿ ಬೆಂಬಲಿಸುವುದಾಗಿ ಘೋಷಿಸಿಕೊಂಡಿದ್ದವು. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಇತರೆ ಮುಸ್ಲಿಂ ಕುಟುಂಬಗಳು ಮಸೀದಿ ಪ್ರವೇಶವನ್ನು ನಿಷೇಧಿಸಿವೆ.
ಇದರಿಂದ ಇದೀಗ ಗ್ರಾಮದಲ್ಲಿ ಹಳೇ ಮಸೀದಿಯಿದ್ದು ಅಲ್ಲಿ ಬಿಜೆಪಿ ವಿರೋಧಿ ಗುಂಪಿನ ಮುಸ್ಲಿಮರು ನಮಾಜ್ ಮಾಡುತ್ತಾರೆ. ಬಿಜೆಪಿಗೆ ಬೆಂಬಲ ಘೋಷಿಸಿ ನಿಷೇಧಕ್ಕೆ ಒಳಗಾಗಿರುವ ಕುಟುಂಬಗಳ ಸದಸ್ಯರು ಪ್ರತ್ಯೇಕವಾಗಿ ತಾತ್ಕಾಲಿಕ ಮಸೀದಿ ನಿರ್ಮಿಸಿಕೊಂಡು ನಮಾಜ್ ಮಾಡುತ್ತಿದ್ದಾರೆ.
Leave A Reply