ಪಾಕಿಸ್ತಾನದಲ್ಲಿ ಹಿಂದೂ ಮಹಿಳೆ ಸೆನೆಟರ್ ಆಯ್ಕೆ ಸಂಭವ
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ನಿತ್ಯ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ ಸುದ್ದಿಗಳ ಮಧ್ಯೆಯೇ ಪಾಕಿಸ್ತಾನದಿಂದ ಶುಭ ಸುದ್ದಿಯೊಂದು ಬಂದಿದ್ದು, ಮಾರ್ಚ್ ನಲ್ಲಿ ನಡೆಯಲಿರುವ ಸೆನೆಟರ್ ಆಯ್ಕೆ ಚುನಾವಣೆಗೆ ಹಿಂದೂ ಮಹಿಳೆಯೊಬ್ಬರು ನಾಮಪತ್ರ ಸಲ್ಲಿಸಿದ್ದಾರೆ.
ಪಾಕಿಸ್ತಾನದ ಸಿಂಧ ಪ್ರಾಂತ್ಯದ 38 ವರ್ಷದ ಹಿಂದೂ ಮಹಿಳೆ ಕೃಷ್ಣ ಕುಮಾರಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯಿಂದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಮಾರ್ಚನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕೃಷ್ಣಕುಮಾರಿ ಸೆನೆಟರ್ ಆಗಿ ನೇಮಕವಾಗುವ ಸಾಧ್ಯತೆಗಳು ಹೆಚ್ಚಿವೆ.
ಪಾಕಿಸ್ತಾನ ಪೀಪಲ್ಸ್ ಪಕ್ಷದ ಎಲ್ಲ ಸದಸ್ಯರು ಕೃಷ್ಣಕುಮಾರಿಗೆ ಮತ ನೀಡಬೇಕು ಎಂದು ಪಕ್ಷ ಸೂಚನೆ ನೀಡಿದೆ. ಈ ಮೂಲಕ ಕೃಷ್ಣಕುಮಾರಿ 1947ರಿಂದ ಇದುವರೆಗೆ ಹಿಂದೂ ಮಹಿಳೆ ಸೆನೆಟರ್ ಆಯ್ಕೆಯಾದವರಲ್ಲಿ ಎರಡನೆಯವರಾಗಲಿದ್ದಾರೆ.
ಸಿಂಧ ಪ್ರದೇಶದ ಥಾರ್ ನವರಾದ ಕೃಷ್ಣಕುಮಾರಿ ಕಡು ಬಡತನದ ಕುಟುಂಬದಿಂದ ಬಂದವರು. ಪಾಕಿಸ್ತಾನ ಪೀಪಲ್ ಪಾರ್ಟಿ ಕೃಷ್ಣಕುಮಾರಿ ಹೆಸರನ್ನು ಘೋಷಿಸಿದೆ. ಪಾಕಿಸ್ತಾನದ ಪೀಪಲ್ ಪಾರ್ಟಿಯನ್ನು ಸೇರ್ಪಡೆಯಾಗಿರುವ ಅವರ ಸಹೋದರ ಬೆರೆನೋ ಯುನಿಯನ್ ಕೌನ್ಸಿಲ್ ಅಧ್ಯಕ್ಷರಾಗಿದ್ದಾರೆ. ಕಷ್ಟದಲ್ಲೇ ಬೆಳೆದಿರುವ ಕೃಷ್ಣಕುಮಾರಿ ಅವರ ಕುಟುಂಬ ಜಮಿನ್ದಾರ್ ಬಳಿ ಕೆಲಸ ಮಾಡಿದ್ದರು.
16ನೇ ವಯಸ್ಸಿನಲ್ಲಿ ಮದುವೆಯಾದ ಕುಮಾರಿ, ಆಗ 9ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದರು. ಆದರೆ ಪತ್ನಿ ಲಾಲಚಂದ್ ಸಹಾಯದಿಂದ 2013ರಲ್ಲಿ ಸಿಂಧ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಸಾಮಾಜಿಕ ಕಾರ್ಯಕರ್ತೆಯಾಗಿ ಥಾರ್ ಪ್ರದೇಶದಲ್ಲಿ ಹಲವು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಅಲ್ಲದೇ ಸಮಾಜ ಸೇವೆಯಲ್ಲಿ ಕುಮಾರಿ ತೊಡಗಿದ್ದಾರೆ.
Leave A Reply