ಹುತಾತ್ಮ ಯೋಧರಲ್ಲಿ ಕೋಮುವಾದ ಹುಡುಕಿದ ಓವೈಸಿಗೆ ಸೈನ್ಯದ ಖಡಕ್ ಉತ್ತರ
ದೆಹಲಿ: ಸುಂಜನ್ವಾ ಸೈನಿಕ ಶಿಬಿರದ ಮೇಲೆ ಪಾಕಿಸ್ತಾನ ಪೋಷಿತ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಮೃತಪಟ್ಟ ಯೋಧರಲ್ಲೂ ಧರ್ಮವನ್ನು ಉಲ್ಲೇಖಿಸಿ, ಮುಸ್ಲಿಂ ಧರ್ಮದ ಐವರು ಮುಸ್ಲಿಮರು ಮೃತಪಟ್ಟಿದ್ದಾರೆ ಎಂದು ಹೇಳಿಕೆ ನೀಡಿ, ಸೈನ್ಯದಲ್ಲೂ ಧರ್ಮವನ್ನು ಹುಡುಕಿದ್ದ ಎಐಎಂಐಎಂ ಮುಖಂಡ ಅಸಾದುದ್ದಿನ್ ಓವೈಸಿಗೆ ಸೈನ್ಯದ ಹಿರಿಯ ಅಧಿಕಾರಿಗಳು ಖಡಕ್ ಉತ್ತರ ನೀಡಿದ್ದಾರೆ.
‘ ದೇಶಕ್ಕಾಗಿ ಹುತಾತ್ಮರಾಗಿರುವ ಯೋಧರಲ್ಲಿ ನಾವು ಕೋಮುವಾದವನ್ನು ಹುಡುಕುವುದಿಲ್ಲ. ಕಾಶ್ಮೀರದ ಸುಜ್ವಾನ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಕುರಿತು ಪ್ರತಿಕ್ರಿಯೆ ನೀಡಿದ ಅಸಾದುದ್ದಿನ್ ಓವೈಸಿ, ‘ಮುಸ್ಲಿಮರನ್ನು ಪಾಕಿಸ್ತಾನಿಗಳು ಎನ್ನುವವರು ಒಮ್ಮೆ ಇಲ್ಲಿ ನೋಡಿ, ಸುಜ್ವಾನ್ ನಲ್ಲಿ ನಡೆದ ದಾಳಿಯಲ್ಲಿ ಮೃತರಾದ ಏಳು ಸೈನಿಕರಲ್ಲಿ ಐವರು ಮುಸ್ಲಿಮರು’ ಎಂದು ವಿಷ ಬೀಜ ಬಿತ್ತುವ ಹೇಳಿಕೆ ನೀಡಿದ್ದ.
ಓವೈಸಿ ಹೇಳಿಕೆ ಖಡಕ್ ಪ್ರತಿಕ್ರಿಯೆ ನೀಡಿರುವ ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ದೇವ್ರಾಜ್ ಅಂಬು, ಹುತಾತ್ಮರ ಜಾತಿ, ಮತ ಯಾವುದು ಎಂದು ಹುಡುಕುತ್ತ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದವರಲ್ಲೂ ಕೋಮುವಾದ ಹುಡುಕುವುದಿಲ್ಲ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ದೇಶಕ್ಕಾಗಿ ಜಾತಿ, ಮತ, ಧರ್ಮವನ್ನು ಮೀರಿಯೂ ತಮ್ಮ ಪ್ರಾಣವನ್ನು ಪಣಕ್ಕಿಟ್ಟು, ಕುಟುಂಬವನ್ನು ಮರೆತು ನಿತ್ಯ ಜೀವನ್ಮರಣದ ಮಧ್ಯೆ ಹೋರಾಡುವ ಸೈನಿಕರ ಸಾವಿನಲ್ಲೂ ರಾಜಕೀಯ ಬೆರೆಸಿದ ಓವೈಸಿ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿತ್ತು. ಆದ್ದರಿಂದ ಓವೈಸಿ ಮುಖಕ್ಕೆ ಹೊಡೆದಂತೆ ಸೈನ್ಯದ ಹಿರಿಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ಸೈನಿಕರ ಸಾವಿನಲ್ಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅವಕಾಶ ನೀಡಿಲ್ಲ.
Leave A Reply