ಕಣ್ಸನ್ನೆ ಮೂಲಕ ವಿಶ್ವದ ಗಮನ ಸೆಳೆದ ಬೆಡಗಿ ವಿರುದ್ಧವೂ ಮೂಲಭೂತವಾದಿ ಮುಸ್ಲಿಂ ಯುವಕನ ದೂರು
ಹೈದರಾಬಾದ್: ಕಣ್ಸನ್ನೆಯನ್ನೇ ಕೇಂದ್ರವಾಗಿಟ್ಟು ನಿರ್ಮಿಸಲಾದ ಗೀತೆಯ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಗೀತೆಯನ್ನು ನಾಯಕಿ, ಕಣ್ಸನ್ನೆ ಮೂಲಕ ವಿಶ್ವದ ಗಮನ ಸೆಳೆದ ಪ್ರಿಯಾ ವಾರಿಯರ್ ವಿರುದ್ಧವೂ ಮೂಲಭೂತವಾದಿ ಮುಸ್ಲಿಂ ಯುವಕನೊಬ್ಬ ದೂರು ನೀಡಿದ್ದಾನೆ.
ಮಲೆಯಾಳಂನ ಆರು ಅಡಾರ್ ಲವ್ ಚಿತ್ರದ ಮಾಣಿಕ್ಯ ಮಾಲಾರಾಯ್ ಪೂವಿ ಹಾಡಿನಲ್ಲಿ ನಟಿಸಿರುವ ಪ್ರಿಯಾ ವಾರಿಯರ್ ಮತ್ತು ಗೀತೆ ಸಂಯೋಜಕನ ವಿರುದ್ಧವೂ ಹೈದರಾಬಾದ್ ನಲ ಫಲಕ್ಕುನ್ನಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ದೂರು ನೀಡಿರುವ ಮುಖಿತ್ ಖಾನ್ ‘ಹಾಡಿನಲ್ಲಿ ಪ್ರವಾದಿ ಮಹಮ್ಮದರ ಬಗ್ಗೆ ಅವಹೇಳನ ಮಾಡಲಾಗಿದೆ. ಮಲೆಯಾಳಂನಲ್ಲಿ ಹಾಡು ಅರ್ಥವಾಗದೇ ಇರುವಾಗ ಗೂಗಲ್ ಟ್ರಾನ್ಸಲೆಟ್ ಗೆ ಹಾಕಿದಾಗ ಹಾಡಿನ ಕುರಿತು ಇಂಗ್ಲಿಷ್ ನಲ್ಲಿ ಪ್ರವಾದಿ ಮಹಮ್ಮದರ ಬಗ್ಗೆ ಅವಮಾನ ಮಾಡುವ ಅಂಶಗಳು ಕಂಡು ಬಂದಿವೆ ಎಂದು ದೂರು ನೀಡಿದ್ದೇನೆ ಎಂದು ತಿಳಿಸಿದ್ದಾನೆ. ಅಲ್ಲದೇ ಟಿವಿಯೊಂದರಲ್ಲಿ ಮಾತನಾಡಿದ ದೂರುದಾರ ಮುಖಿತ್ ಖಾನ್ ‘ನನಗೆ ದೂರು ನೀಡುವ ಸ್ವಾತಂತ್ರ್ಯವಿಲ್ಲವೇ ಎಂದು ಹೇಳುವ ಮೂಲಕ ನಗೆಪಾಟಲಿಗೆ ಈಡಾಗಿದ್ದಾನೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಒರು ಆಡಾರ್ ಲವ್ ಚಿತ್ರ ನಿರ್ದೇಶಕ ‘ಹಾಡಿನಲ್ಲಿ ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಅಂಶಗಳಿಲ್ಲ. ಹಾಡಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘನೆ, ಮೆಚ್ಚುಗೆ ವ್ಯಕ್ತವಾಗಿದೆ. ಇಂತಹ ಅಂಶಗಳು ಇದ್ದರೇ ವಿಶ್ವಾದ್ಯಂತ ಗಮನ ಸೆಳೆಯಲು ಆಗುತ್ತಿತ್ತಾ ಎಂದು ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ದಾಖಲೆ ಬರೆದ ಪ್ರಿಯಾ
ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಅದ್ಭುತ ನಟನೆಯ ಮೂಲಕ ಗಮನ ಸೆಳೆದಿದ್ದು, ಹಾಡು ವಿಶ್ವಾದ್ಯಂತ ಭಾರಿ ಅಭಿಮಾನಿಗಳನ್ನು ಸೃಷ್ಟಿಸಿದೆ. ಇನ್ಸಸ್ಟಾಗ್ರಾಂನಲ್ಲಿ ಒಂದೇ ದಿನದಲ್ಲೇ 6 ಲಕ್ಷಕ್ಕೂ ಹೆಚ್ಚಿನ ಹಿಂಬಾಲಕರನ್ನು ಪಡೆಯುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. ಪ್ರಸ್ತುತ 17 ಲಕ್ಷ ಫಾಲೋವರ್ ಗಳನ್ನು ಹೊಂದುವ ಮೂಲಕ ಬ್ಲೂಟಿಕ್ ಮಾರ್ಕ್ ಪ್ರಿಯಾ ಅಕೌಂಟ್ ಪಡೆದಿದೆ.
Leave A Reply