ಪ್ರಿಯಾಗೂ ಆರ್ ಎಸ್ ಎಸ್ ಗೂ ಏನು ಸಂಬಂಧ ಜಿಗ್ನೇಶ್!!
ಒಂದು ವಾರದ ಅಂತರದಲ್ಲಿ ಜಮ್ಮು-ಕಾಶ್ಮೀರದಲ್ಲಿ ಕನಿಷ್ಟ 12 ಯೋಧರನ್ನು ನಮ್ಮ ದೇಶ ಕಳೆದುಕೊಂಡಿದೆ. ಮೊದಲ ಬಾರಿಗೆ ಲೋಕಸಭೆಯಲ್ಲಿ ಕಿರಾತಕ ಸಂಸದನೊಬ್ಬ ಆ 12 ಯೋಧರಲ್ಲಿ ಐದು ಜನ ಮುಸ್ಲಿಮರು ಎಂದು ಹೇಳುವ ಮೂಲಕ ಸೈನ್ಯದಲ್ಲಿ ಇಲ್ಲದ ಜಾತಿ, ಧರ್ಮದ ವಿಷಬೀಜವನ್ನು ಅಲ್ಲಿ ಕೂಡ ಬಿತ್ತುವ ಕೆಲಸ ಮಾಡಿದ್ದಾನೆ. ಜಾತಿ ಅಥವಾ ಧರ್ಮಗಳ ವಿಷಯದಲ್ಲಿ ರಾಜಕಾರಣಿಗಳು ಮಾತನಾಡುವುದು ಸಾಮಾನ್ಯ. ಆದರೆ ಇಲ್ಲಿಯ ತನಕ ಯಾವ ರಾಜಕಾರಣಿಯೇ ಆಗಲಿ ಸೈನ್ಯದ ವಿಷಯದಲ್ಲಿ ಹೀಗೆ ಮಾತನಾಡಿರಲಿಲ್ಲ. ಸೈನ್ಯದಲ್ಲಿ ಸೇವೆ ಸಲ್ಲಿಸುವಾಗಲೇ ಹುತಾತ್ಮರಾದ ಯೋಧರ ಹೆಸರು ನೋಡುವಾಗಲೇ ಆ ಪುಣ್ಯಾತ್ಮ ಯಾವ ಧರ್ಮದವನು ಎಂದು ಗೊತ್ತಾಗುತ್ತದೆ. ಹಾಗಿದ್ದ ಮೇಲೆಯೂ ಅಲ್ಲಿ ಯಾವುದೇ ಧರ್ಮದ ಪರ, ವಿರೋಧ ಕಂಡುಬಂದಿರಲಿಲ್ಲ. ಆದರೆ ಮೊದಲ ಬಾರಿಗೆ ಓವೈಸಿ ನಮ್ಮ ಧರ್ಮದ ಐದು ಜನ ಯೋಧರು ಸತ್ತರೂ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಏನೂ ಮಾತನಾಡುತ್ತಿಲ್ಲ ಎಂದು ಜರೆದಿದ್ದಾನೆ. ಇದು ಒಂದು ರೀತಿಯಲ್ಲಿ ಮೋದಿಯವರ ಬಾಯಿಗೆ ಕೋಲು ಹಾಕಿ ತಾನೇ ಪೆಟ್ಟು ತಿನ್ನುವ ಓವೈಸಿ ಪ್ರಯತ್ನ. ಮೋದಿಯವರು ಈ ಬಗ್ಗೆ ಏನು ಹೇಳಿದರೂ ವಿವಾದ ಆಗಲಿ ಎನ್ನುವುದೇ ಓವೈಸಿ ಪ್ರಯತ್ನ.
ಓವೈಸಿ ಹೀಗೆ ಮಾತನಾಡಿದರೆ ಮುಸ್ಲಿಮರು ಖುಷ್??
ಮೋದಿಯವರಿಗೆ ಅಂತಲ್ಲ ನಮಗೆಲ್ಲರಿಗೂ ಹುತಾತ್ಮರಾದ ಯೋಧರ ಬಗ್ಗೆ ಅಪರಿಮಿತ ಗೌರವವಿದೆ. ಅವರನ್ನು ಕಳೆದುಕೊಂಡಿರುವುದಕ್ಕೆ ಸಾಕಷ್ಟು ನೋವಿದೆ. ಪಾಕಿಸ್ತಾನ ಕಳುಹಿಸುತ್ತಿರುವ ಉಗ್ರರ ಮೇಲೆ ಅಗಾಧ ಸಿಟ್ಟಿದೆ. ಜಮ್ಮು-ಕಾಶ್ಮೀರದಲ್ಲಿ ವಿಪರೀತ ಚಳಿ, ವಾತಾವರಣದ ವೈಪರಿತ್ಯದ ನಡುವೆ ನಮ್ಮ ಸೈನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಮಗೆ ಟಿವಿಯಲ್ಲಿ ನೋಡಿಯಾದರೂ ಒಂದಿಷ್ಟು ಗೊತ್ತಾಗುತ್ತಿದೆ. ನಮ್ಮದೇ ದೇಶದ ಗಾಳಿ, ನೀರು, ಆಹಾರ ಸೇವಿಸುವ ಮತ್ತು ಪಾಕಿಸ್ತಾನದ ಬೂಟು ನೆಕ್ಕುವ ಕೆಲವರು ನಮ್ಮ ಯೋಧರ ಮೇಲೆ ಕಲ್ಲು ಬಿಸಾಡಿದಾಗ ಅಂತವರನ್ನು ಅಲ್ಲಿಯೇ ಗುಂಡಿಕ್ಕಿ ಸಾಯಿಸಬಾರದಾ ಎಂದು ನಮ್ಮ ಯೋಧರಿಗೆ ಹೇಳೋಣ ಎಂದು ಅನಿಸುತ್ತದೆ. ಆದರೆ ನಾವು ಯಾವತ್ತೂ ನಮ್ಮ ಯೋಧರ ಧರ್ಮದ ಬಗ್ಗೆ ಮಾತನಾಡಿಲ್ಲ. ಯಾಕೆಂದರೆ ಅಷ್ಟು ನಿಕೃಷ್ಟ ಸ್ಥಿತಿಗೆ ನಾವು ಯೋಚಿಸಿಲ್ಲ. ಆದರೆ ಓವೈಸಿಯಂತವರನ್ನು ಇಲ್ಲಿ ಲೋಕಸಭೆಗೆ ನಿಲ್ಲಿಸಿ ಅವರು ಸಂಸತ್ತಿನಲ್ಲಿ ಹೀಗೆ ಮಾತನಾಡಲಿ ಎಂದು ಯಾರಾದರೂ ಫಂಡ್ ಮಾಡಿಯೇ ಕಳುಹಿಸಿರುತ್ತಾರೆ. ಅಂತವರು ಯೋಧರ ಧರ್ಮದ ಬಗ್ಗೆ ಬೇಕಾದರೂ ಮಾತನಾಡುತ್ತಾರೆ, ಪಾಕಿಸ್ತಾನದ ಪರ ಕೂಡ ಮಾತನಾಡುತ್ತಾರೆ, ಯಾಕೆಂದರೆ ಅವರಿಗೆ ಕಳೆದುಕೊಳ್ಳುವಂತದ್ದು ಏನೂ ಇಲ್ಲ. ಇವರ ಇಂತಹ ಹೇಳಿಕೆಯಿಂದಾಗಿ ಮುಸ್ಲಿಮರು ಖುಷಿಗೊಂಡು ಕರ್ನಾಟಕದಲ್ಲಿಯೂ ನಾಲ್ಕು ಸೀಟು ಬರಲಿ ಎನ್ನುವುದು ಇವರ ಆಶಯ.
ಮೋದಿ ಹುತಾತ್ಮರಾದ 12 ಯೋಧರಲ್ಲಿ 5 ಜನ ಮುಸ್ಲಿಮರು ಎನ್ನುವ ಕಾರಣಕ್ಕೆ ಪ್ರತ್ಯೇಕವಾಗಿ ಅವರನ್ನು ಹೊಗಳಲು ಆಗುತ್ತಾ, ಆ ಯೋಧರಿಗೆ ವಿಶೇಷ ಸೌಲಭ್ಯ ಕೊಡಲು ಆಗುತ್ತಾ. ಓವೈಸಿ ಒಂದು ವೇಳೆ ಮೋದಿ ಹುತಾತ್ಮ ಮುಸ್ಲಿಂ ಯೋಧರ ಬಗ್ಗೆ ಮಾತ್ರ ತೀವ್ರ ಶೋಕ ವ್ಯಕ್ತಪಡಿಸಲಿ ಎಂದು ಕಾಯುವುದಾದರೆ ಅದಕ್ಕಿಂತ ಅಸಹ್ಯತನ ಓವೈಸಿ ಬೇರೆ ಮಾಡಲಿಕ್ಕಿಲ್ಲ. ನಮ್ಮ ಯೋಧರ ಮೇಲೆ ಕಲ್ಲು ಬಿಸಾಡಬೇಡ್ರೋ ಎಂದು ಇವತ್ತಿನ ತನಕ ತನ್ನ ಒರಗೆಯವರಿಗೆ ಹೇಳದ ಓವೈಸಿ ಅದೇ ಸೈನಿಕರು ಪಾಕಿಗಳು ಕಳುಹಿಸಿದ ಉಗ್ರರ ಗುಂಡಿಗೆ ಬಲಿಯಾದಾಗ ಪಾಕಿಸ್ತಾನಿಗಳನ್ನು ಬೈಯುವುದು ಬಿಟ್ಟು ನಮ್ಮ ಧರ್ಮದ ಐದು ಸೈನಿಕರನ್ನು ಕಳೆದುಕೊಂಡ್ವಿ, ಮೋದಿ ಮಾತನಾಡುತ್ತಿಲ್ಲ ಎನ್ನುತ್ತಿದ್ದಾನೆ. ಇದನ್ನು ದೇಶಭಕ್ತಿ ಎಂದು ಯಾವ ಕಿವುಡ ಕೂಡ ಹೇಳಲು ಸಾಧ್ಯವಿಲ್ಲ.
ಇನ್ನು ಓವೈಸಿಯ ಸಾಲಿಗೆ ಸೇರುವ ಮತ್ತೊಬ್ಬ ಮಹಾನುಭಾವನ ಕಥೆ ಕೇಳಿ. ಅವನ ಹೆಸರು ಮೌಲಾನಾ ಆತೀಫ್ ಖಾದ್ರಿ ಎನ್ನುವ ಮನುಷ್ಯ. ಆತ ಪ್ರಿಯಾ ವಾರಿಯರ್ ವಿರುದ್ಧ ಫತ್ವಾ ಹೊರಡಿಸಿದ್ದಾನೆ. ತಾವು ಮತ್ತು ತಮ್ಮ ಮುಸ್ಲಿಂ ಭಾಂದವರು ನಮಾಜ್ ಮಾಡಲು ಕಣ್ಣು ಮುಚ್ಚಿದಾಗ ಆಕೆಯ ಮುಖವೇ ಕಣ್ಣ ಎದುರಿಗೆ ಬರುತ್ತದೆ ಎಂದು ಹೇಳಿದ್ದಾನೆ. ಅದರಿಂದ ನಮಾಜ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾನೆ. ನಮಾಜ್ ಮಾಡುವಾಗ ತಮ್ಮ ಧರ್ಮದ ಭಗವಂತನೆಡೆ ಅವರು ಎಷ್ಟು ಏಕಾಗ್ರತೆ ಹೊಂದಿರಬೇಕೆಂದರೆ ಅವರಿಗೆ ಹೊರಪ್ರಪಂಚದ ಅರಿವೇ ಆ ಹೊತ್ತು ಆಗಬಾರದಿತ್ತು. ಆದರೆ ರಾತ್ರಿ ಬೆಳಗಾಗುವುದರ ಒಳಗೆ ಸಾಮಾಜಿಕ ತಾಣಗಳ ಮೂಲಕ ಸ್ಟಾರ್ ಆಗಿರುವ ಮಲಯಾಳಂ ಭಾಷೆಯ ಸಿನೆಮಾದಲ್ಲಿ ನಟಿಸಿರುವ ಪ್ರಿಯಾ ಪ್ರಕಾಶ್ ವಾರಿಯರ್ ನಮ್ಮ ಕಣ್ಣ ಮುಂದೆ ಬರುತ್ತಾರೆ ಎಂದು ಇವರು ಹೇಳುತ್ತಾರೆ ಮತ್ತು ಅದಕ್ಕೋಸ್ಕರ ಫತ್ವಾ ಹೊರಡಿಸುತ್ತಾರೆ ಎಂದರೆ ಇವರನ್ನು ಏನೆಂದು ಕರೆಯುವುದು. ಇದಕ್ಕೆ ಪ್ರಿಯಾ ಕ್ಯಾರ್ ಮಾಡುವುದಿಲ್ಲ ಎಂದು ಗೊತ್ತಿರುವುದರಿಂದ ಆಕೆಯ ವಿರುದ್ಧ ಪ್ರಕರಣ ದಾಖಲಿಸುವ ಕೆಲಸ ಕೆಲವು ಕಡೆ ನಡೆಯುತ್ತಿದೆ. ಕಾರಣ ಅವಳು ಅಭಿನಯಿಸಿದ ಆ ಹಾಡಿನಿಂದ ಮುಸ್ಲಿಮರ ಸೆಂಟಿಮೆಂಟ್ ದಕ್ಕೆಯಾಗುತ್ತಿದೆ ಎನ್ನುತ್ತಿದ್ದಾರೆ. ಅದು ಕೂಡ ಕೇಸ್ ದಾಖಲಾಗುತ್ತಿರುವುದು ಎಲ್ಲಿ ಗೊತ್ತಾ, ಅದೇ ಹೈದ್ರಾಬಾದಿನಲ್ಲಿ. ಅದೇ ಒವೈಸಿ ಲೋಕಸಭಾ ಕ್ಷೇತ್ರದಲ್ಲಿ. ಇನ್ನು ಮುಂದೆ ಹೆಣ್ಣುಮಕ್ಕಳು ಸಿನೆಮಾದಲ್ಲಿ ಅಭಿನಯಿಸುವಾಗ ಓವೈಸಿಯನ್ನು ಮತ್ತು ಈ ಮೌಲ್ವಿಗಳನ್ನು ಕೇಳಬೇಕು. ನಾವು ನಿಮ್ಮ ಕನಸಿನಲ್ಲಿ ಬರುವ ಸಾಧ್ಯತೆ ಇದೆ. ಆದ್ದರಿಂದ ಒಂದೋ ನಿಮ್ಮ ಕನಸನ್ನು ಮನಸ್ಸಿನಿಂದ ಹೊರಗೆ ಹಾಕಿ ಅಥವಾ ಈ ದೇಶದಿಂದ ಹೊರಗೆ ಹೋಗಿ. ಹೀಗೆ ಹೇಳುವುದು ಕೂಡ ಡೇಂಜರ್. ಒವೈಸಿ ಮತ್ತೆ ಎದ್ದು ನಿಲ್ಲುತ್ತಾನೆ, ನಮಗೆ ನೋವಾಗಿದೆ ಎನ್ನುತ್ತಾನೆ. ಈ ನಡುವೆ ಗುಜರಾತ್ ಶಾಸಕ, ರಾಹುಲ್ ಮಾನಸ ಪುತ್ರ ಜಿಗ್ನೇಶ್ ತನ್ನ ಟ್ವೀಟರ್ ನಲ್ಲಿ ಪ್ರಿಯಾ ನಟಿಸಿದ ದೃಶ್ಯ ಪ್ರೇಮಿಗಳ ದಿನ ವಿರೋಧಿಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಕೊಟ್ಟ ಸೂಕ್ತ ಉತ್ತರ ಎಂದು ಬರೆದುಕೊಂಡಿದ್ದಾನೆ. ಈ ಒವೈಸಿ, ಜಿಗ್ನೇಶ್, ಹಾರ್ದೀಕ್ ಪಟೇಲ್, ಪ್ರಕಾಶ್ ರೈ ತರಹದ ಜನ ಭಾರತದಲ್ಲಿ ಏನೇ ನಡೆಯಲಿ ಅದರಲ್ಲಿ ಮೋದಿ ಮತ್ತು ಆರ್ ಎಸ್ ಎಸ್ ಅನ್ನು ಎಳೆದು ತರದೇ ಮಲಗಲ್ಲ. ಒಂದು ವೇಳೆ ಹಾಗೆ ಮಾಡದಿದ್ದರೆ ಅವರಿಗೆ ನಿದ್ರೆ ಬರಲ್ಲ!
Leave A Reply