ಕೇಂದ್ರದ ಆರೋಗ್ಯ ಭದ್ರತಾ ಯೋಜನೆಗೂ ಮಮತಾ ಬ್ಯಾನರ್ಜಿ ವಿರೋಧ, ಮೋದಿ ವಿರುದ್ಧದ ವಿನಾಕಾರಣ ದ್ವೇಷವೇ ಕಾರಣವೇ?
ಕೋಲ್ಕತ್ತಾ: ಈ ಮಮತಾ ಬ್ಯಾನರ್ಜಿಯವರಿಗೆ ಏನಾಗಿದೆ? ಸಿಪಿಎಂ ದುರಾಡಳಿತದ ವಿರುದ್ಧ ಹೋರಾಡಿ ಸಿಎಂ ಆದ ಇವರು, ಮುಖ್ಯಮಂತ್ರಿಯಾದ ಬಳಿಕ ಅಭಿವೃದ್ಧಿ ಯಾವುದು, ಉತ್ತಮ ಆಡಳಿತ ಯಾವುದು ಎಂಬುದನ್ನು ಸಹ ಅರಿಯಲು ಮರೆತುಬಿಟ್ಟರೇ ಎಂಬ ಪ್ರಶ್ನೆ ಕಾಡುತ್ತಿದೆ.
ಅದಕ್ಕೆ ಸಾಕ್ಷಿಯಾಗಿ ಕೇಂದ್ರ ಸರ್ಕಾರ ಜಾರಿಗೆ ತಂದ, ವಿಶ್ವದ ಗಮನ ಸೆಳೆದ ನೋಟು ನಿಷೇದ, ಸರಕು ಮತ್ತು ಸೇವಾ ತೆರಿಗೆಗೂ ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದರು. ಇಡೀ ದೇಶದ ಜನರೇ ಈ ಯೋಜನೆ ಬೆಂಬಲಿಸಿದರೂ, ಮೋದಿ ವಿರುದ್ಧ ತಾವು ಹೊಂದಿರುವ ಆಕ್ರೋಶ, ವಿನಾಕಾರಣ ದ್ವೇಷವೇ ಮಮತಾ ಬ್ಯಾನರ್ಜಿ ಅವರಿಗೆ ಹೀಗೆ ಮಾಡಿಸಿರಬೇಕು.
ಈಗ ಮತ್ತದೇ ರಾಗ ಹಾಡಿರುವ ಮಮತಾ ಬ್ಯಾನರ್ಜಿಯವರು, ಕೇಂದ್ರ ಸರ್ಕಾರ ಕಳೆದ ಬಜೆಟ್ಟಿನಲ್ಲಿ ಘೋಷಿಸಿರುವ, ವಿಶ್ವದ ಬೃಹತ್ ಆರೋಗ್ಯ ಭದ್ರತಾ ಯೋಜನೆ ಎಂದೇ ಖ್ಯಾತಿಯಾಗಿರುವ ರಾಷ್ಟ್ರೀಯ ಆರೋಗ್ಯ ಭದ್ರತಾ ಯೋಜನೆಗೆ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದಾರೆ.
ದೇಶದ ಸುಮಾರು 10 ಕೋಟಿ ಕುಟುಂಬಗಳು ಕೆಳ ಹಾಗೂ ಮಧ್ಯಮ ದರ್ಜೆಯ ಆಸ್ಪತ್ರೆಗಳಲ್ಲಿ ವಾರ್ಷಿಕ 5 ಲಕ್ಷ ರೂಪಾಯಿವರೆಗೆ ಚಿಕಿತ್ಸೆ ಪಡೆಯುವ ಸೌಲಭ್ಯವಿರುವ, ಸುಮಾರು 50 ಕೋಟಿ ಜನರಿಗೆ ಅನುಕೂಲ ಇರುವ ಯೋಜನೆಯನ್ನೇ ಮಮತಾ ವಿರೋಧಿಸುತ್ತಾರೆ, ಎಂದರೆ ಮಮತಾ ಎಷ್ಟರಮಟ್ಟಿಗೆ ಅಭಿವೃದ್ಧಿ ಹಾಗೂ ಜನಕಲ್ಯಾಣದ ಪರ ಇದ್ದಾರೆ ಎಂಬುದು ಸಾಬೀತಾಗುತ್ತದೆ.
ನಮಗೆ ಕೇಂದ್ರ ಸರ್ಕಾರದ ಯಾವುದೇ ಯೋಜನೆ, ನೆರವು ಬೇಕಾಗಿಲ್ಲ. ನಾವು ಈಗಾಗಲೇ ರಾಜ್ಯದಲ್ಲಿ ಜನರಿಗೆ ಆರೋಗ್ಯ ಸುಧಾರಣೆಗಾಗಿ ಯೋಜನೆ ಜಾರಿಗೊಳಿಸಿವೆ. ರಾಷ್ಟ್ರೀಯ ಆರೋಗ್ಯ ಭದ್ರತಾ ಯೋಜನೆಯಲ್ಲಿ ಯಾವುದೇ ಹೊಸತನವಿಲ್ಲ ಎಂದು ಮಮತಾ ಉದ್ಧಟತನದ ಹೇಳಿಕೆ ಸಹ ನೀಡಿದ್ದಾರೆ.
Leave A Reply