ಉಗ್ರರಲ್ಲಿ ಮುಸ್ಲಿಮರ ಸಂಖ್ಯೆ ಎಷ್ಟು ಗೊತ್ತೆ ಓವೈಸಿ?: ಸುಬ್ರಮಣಿಯನ್ ಸ್ವಾಮಿ
ದೆಹಲಿ: ದೇಶಕ್ಕಾಗಿ ಜಾತಿ, ಧರ್ಮ ಮೀರಿ ಜೀವನ್ಮರಣದ ಮಧ್ಯೆ ಹೋರಾಡುವ ಯೋಧರಲ್ಲೂ ಧರ್ಮದ ವಿಷ ಬೀಜ ಬಿತ್ತಲು ಪ್ರಯತ್ನಿಸಿದ ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿಗೆ ನಿನ್ನೆ ಸೇನೆಯ ಹಿರಿಯ ಅಧಿಕಾರಿಗಳು ಖಡಕ್ ಉತ್ತರ ನೀಡಿದ್ದರು. ಇದೀಗ ಬಿಜೆಪಿ ಪೈರ್ ಬ್ರ್ಯಾಂಡ್ ನಾಯಕ ಸುಬ್ರಮಣಿಯನ್ ಸ್ವಾಮಿ ಓವೈಸಿಯ ಬುಡಕ್ಕೆ ಕೈ ಹಾಕಿದ್ದು ‘ಸೈನಿಕರಲ್ಲಿ ಧರ್ಮ ಹುಡುಕುವ ಓವೈಸಿಗೆ ಉಗ್ರರಲ್ಲಿ ಎಷ್ಟು ಜನ ಮುಸ್ಲಿಮರು ಇದ್ದಾರೆ ಎಂಬುದು ಗೊತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಸುಂಜ್ವಾನಾ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಹುತಾತ್ಮರಾದ ಏಳು ಜನರಲ್ಲಿ ಐವರು ಕಾಶ್ಮೀರದ ಮುಸ್ಲಿಮರು ಎಂದು ಹೇಳುವ ಮೂಲಕ ಹುತಾತ್ಮರ ವಿಚಾರದಲ್ಲೂ ಧರ್ಮ ಸೇರಿಸಿದ ಎಐಎಂಐಎಂ ಮುಖ್ಯಸ್ಥ ಅಸಾವುದ್ದಿನ್ ಓವೈಸಿಗೆ ತಕ್ಕ ಉತ್ತರದೊಂದಿಗೆ ಖಡಕ್ ಪ್ರಶ್ನೆಯನ್ನು ಕೇಳಿದ್ದಾರೆ.
ಟ್ವೀಟ್ ಮೂಲಕ ಓವೈಸಿಗೆ ಪ್ರಶ್ನಿಸಿರುವ ಸುಬ್ರಮಣಿಯನ್ ಸ್ವಾಮಿ ‘ ದೇಶಕ್ಕಾಗಿ ಅದೆಷ್ಟು ಮುಸ್ಲಿಂ ಯೋಧರು ಪ್ರಾಣತ್ಯಾಗ ಮಾಡಿದ್ದಾರೆ. ಅದರಂತೆ, ಅದೆಷ್ಟು ಮುಸ್ಲಿಮರು ಭಯೋತ್ಪಾದಕ ಸಂಘಟನೆ ಸೇರುವ ಮೂಲಕ ಭಾರತೀಯ ಸೇನೆ ಮೇಲೆ ದಾಳಿ ನಡೆಸುತ್ತಿದ್ದಾರೆ ಎನ್ನುವುದನ್ನು ಓವೈಸಿ ಸ್ಪಷ್ಟಪಡಿಸಲಿ’ ಎಂದು ಕೇಳಿದ್ದಾರೆ.
ಓವೈಸಿಯ ಹೇಳಿಕೆಯಿಂದ ಕೆಂಡಾಮಂಡಲರಾಗಿರುವ ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ದೇವರಾಜ್ ಅನ್ಬು ಅವರು, ಹುತಾತ್ಮ ಯೋಧರನ್ನು ನಾವು ಕೋಮುವಾದೀಕರಣ ಗೊಳಿಸುವುದಿಲ್ಲ. ಈ ರೀತಿ ಅಸಂಬದ್ಧ ಹೇಳಿಕೆ ನೀಡುವವರಿಗೆ ಸೇನೆಯ ಬಗ್ಗೆ ಸರಿಯಾಗಿ ಗೊತ್ತಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
Owaisi can count Muslims army men killed. But can he also count how many Muslims are in terrorists organisation attacking the army?
— Subramanian Swamy (@Swamy39) February 15, 2018
Leave A Reply