ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಚಿಂದಿ ಉಡಾಯಿಸಿದ ಯೋಧರಲ್ಲಿ ಒಬ್ಬರು ನಮ್ಮ ಕರಾವಳಿಯವರು ಎಂಬುದೇ ಹೆಮ್ಮೆ.
ಕೇವಲ ಮೂರು ದಿನಗಳ ಹಿಂದೆ ಜಮ್ಮು ಕಾಶ್ಮೀರದ ಕರಣ್ ನಗರಕ್ಕೆ ರಣ ಹೇಡಿಗಳಂತೆ ನುಗ್ಗಿದ ಲಷ್ಕರ್-ಎ-ತೋಯ್ಬಾ ಭಯೋತ್ಪಾದಕರು ಕಟ್ಟಡವೊಂದರಲ್ಲಿ ಅವಿತು ಕುಳಿತು ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಇಂತಹ ಅಪಾಯಕಾರಿ ಹಾಗೂ ಅನಿರೀಕ್ಷಿತ ದಾಳಿಯಿಂದ ಕಂಗೆಡದ ಭಾರತದ ಸಿ.ಆರ್.ಪಿ.ಎಫ್ ಯೋಧರು ತಕ್ಕ ಉತ್ತರ ನೀಡಿ ಭಯೋತ್ಪಾದಕರನ್ನು ಮುಲಾಜಿಲ್ಲದೇ ಹೊಡೆದುರುಳಿಸಿದ್ದಾರೆ.
ಇಂತಹ ವೀರ ಯೋಧರು ಭಾರತೀಯರು ಎಂದು ಹೇಳಿಕೊಳ್ಳುವುದೇ ಹೆಮ್ಮೆ. ಅವರು ನಮ್ಮ ರಾಜ್ಯದವರಾಗಿದ್ದರೆ ಇನ್ನೂ ಹೆಚ್ಚು ಖುಷಿ. ಅಕಸ್ಮಾತ್ ನಮ್ಮ ಜಿಲ್ಲೆಯವರೇ ಆಗಿ ಬಿಟ್ಟರೆ?
ನಾವೇ ಭಯೋತ್ಪಾದಕರ ವಿರುದ್ಧ ಹೋರಾಡಿ ಗೆದ್ದಷ್ಟು ಸಂತಸ ಪಡುತ್ತೇವೆ. ಈಗ ಆಗಿದ್ದೂ ಅದೇ.
ಭಯೋತ್ಪಾದಕರನ್ನು ಯಮಲೋಕಕ್ಕೆ ಅಟ್ಟುವಲ್ಲಿ ಯಶಸ್ವಿಯಾಗಿರುವ ವೀರ ಯೋಧರ ಪೈಕಿ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಯೋಧರೊಬ್ಬರು ಇದ್ದಾರೆ. ಅವರೇ ಜುಬೇರ್. ಪುತ್ತೂರು ತಾಲೂಕಿನ ನೇರೆಂಕಿ ಎಂಬ ಪುಟ್ಟ ಊರಿನವರು.
ತಮ್ಮೂರಿನ ಯೋಧ ದೇಶ ಕಾಯುತ್ತಾ ಭಯೋತ್ಪಾದಕರನ್ನು ಹೆಡೆಮುರಿ ಕಟ್ಟಿ ಭಾರತಾಂಬೆಯ ಸೇವೆ ಮಾಡುತ್ತಿರುವುದನ್ನು ನೆನೆದು ಭಾರತ ಮಾತೆ ಇಂತಹ ಯೋಧರಿಗೆ ಇನ್ನೂ ಹೆಚ್ಚಿನ ಧೈರ್ಯ ಹಾಗೂ ಶಕ್ತಿ ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತಿದ್ದಾರೆ.
Leave A Reply