ಮುಗ್ದರ ವಿರುದ್ಧದ ಕೇಸ್ ಹಿಂಪಡೆದ ರಾಜ್ಯ ಸರ್ಕಾರದಿಂದಲೇ ರೈತರ ಮೇಲೆ ಹೊಸ ಕೇಸ್
ಧಾರವಾಡ: ಮಹದಾಯಿ ನೀರಿಗಾಗಿ ಹೋರಾಟ ಮಾಡಿದ ರೈತರಿಗೆ ಹಿಗ್ಗಾಮುಗ್ಗಾ ತಳಿಸಿ, ರೈತರ ಮನೆ, ಮನೆಗೆ ಹೊಕ್ಕು ಗರ್ಭೀಣಿಯರು, ವೃದ್ಧರು, ಮಹಿಳೆಯರೆನ್ನದೇ ಬಾಸುಂಡೆ ಬರುವ ಹಾಗೆ ಬಾರಿಸಿ ಧರ್ಪ ಮೆರೆದ ಸರ್ಕಾರ ಇದೀಗ ರೈತರ ವಿರುದ್ಧದ ಕೇಸ್ ಗಳನ್ನು ಹಿಂಪಡೆಯದೇ ನಾಟಕವಾಡುತ್ತಿದೆ.
ಕೋಮು ಆಧಾರಿತ, ಮುಗ್ದರು ಎಂದು ಪ್ರಕರಣಗಳನ್ನು ಕೇಸ್ ಹಿಂಪಡೆಯುವ ಸರ್ಕಾರ, ರೈತರ ವಿರುದ್ಧದ ಪ್ರಕರಣಗಳನ್ನು ವಾಪಸ್ಸ್ ಪಡೆಯದೇ ಸತಾಯಿಸುತ್ತಿದೆ. ಮಹದಾಯಿ ಹೋರಾಟಗಾರರ ಮೇಲೆ ಹಾಕಿರುವ ಕೇಸ್ ಗಳನ್ನು ವಾಪಸ್ ಪಡೆಯುವುದಾಗಿ ಭರವಸೆ ನೀಡಿದ್ದ ರಾಜ್ಯ ಸರ್ಕಾರ ಈಗ ಮಾತು ತಪ್ಪಿದ್ದು, ಹೊಸ ಕೇಸ್ ದಾಖಲಿಸಿದೆ.
ಸರ್ಕಾರಿ ಆಸ್ತಿ ಪಾಸ್ತಿ ಹಾನಿ ಹಿನ್ನೆಲೆಯಲ್ಲಿ ಮಹದಾಯಿ ಹೋರಾಟಗಾರರ ಮೇಲೆ ನವಲುಗುಂದ ನ್ಯಾಯಾಲಯದಲ್ಲಿ ಸ್ಥಳೀಯ ಆಡಳಿತದಿಂದ ಕೇಸು ದಾಖಲಾಗಿದೆ. ಪ್ರಕರಣ ಸಂಬಂಧ ನವಲಗುಂದ ಜೆಎಂಎಫ್‌ಸಿ ನ್ಯಾಯಾಲಯದಿಂದ ಮಹದಾಯಿ ಹೋರಾಟದ ಮುಂಚೂಣಿಯಲ್ಲಿರುವ ಲೋಕನಾಥ್ ಹೆಬಸೂರ ಸೇರಿ 13 ಮಂದಿಗೆ ಸಮನ್ಸ್ ಜಾರಿಯಾಗಿದೆ. ಫೆ.17 ರಂದು 13 ಜನರೂ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ.
Leave A Reply