ಎಪ್ರಿಲ್ ಒಳಗಡೆ PFI ಬ್ಯಾನ್ ಮಾಡಲಿದೆ ಮೋದಿ ಸರಕಾರ!
ಹೌದು PFI ಸಂಘಟನೆ ಬ್ಯಾನ್ ಆಗುವ ಲಕ್ಷಣಗಳು ಗೋಚರಿಸುತ್ತಿವೆ.ಇತ್ತಿಚೆಗೆ ದೇಶದಲ್ಲಿ ಅದರಲ್ಲೂ ಮುಖ್ಯವಾಗಿ ಕೇರಳ ಹಾಗೂ ಕರ್ನಾಟಕದಲ್ಲಿ ಹಲವಾರು ಹಿಂದೂ ಸಂಘಟನೆ ಕಾರ್ಯಕರ್ತರ ಕೊಲೆ,ಮತಾಂತರ,ದೌರ್ಜನ್ಯ ಹಾಗೂ ಇನ್ನಿತರ ದುಷ್ಕೃತ್ಯಗಳಲ್ಲಿ PFI ಸಂಘಟನೆ ಹೆಸರು ಬಲವಾಗಿ ಕೇಳಿಬರುತ್ತಿತ್ತು.ಆದರೂ ಪ್ರಸ್ತುತ ರಾಜ್ಯ ಸರಕಾರಗಳು ಕೇಂದ್ರ ಸರಕಾರಕ್ಕೆ ಸಂಘಟನೆ ನಿಷೇಧ ಮಾಡಲು ಸೂಕ್ತ ಪುರಾವೆ ಒದಗಿಸಿರಲಿಲ್ಲ.
ಆಂತರಿಕ ಸರಕ್ಷತೆಗೆ ತೊಂದರೆ ಬಂದರೂ ಓಲೈಕೆ ರಾಹಕಾರಣ ಮಾಡುತ್ತಿರುವ ರಾಜ್ಯ ಸರಕಾರದ ವಿರುದ್ಧ ಕೇಂದ್ರ ಗರಂಇದೇ ಜನವರಿಯಲ್ಲಿ ಮಧ್ಯಪ್ರದೇಶದ ತೆಕಾನಪುರದಲ್ಲಿ ದೇಶದ ಆಂತರಿಕ ಸುರಕ್ಷತೆ ಕುರಿತು DGP ಮಟ್ಟದ ಸಭೆ ನಡೆದಿತ್ತು.ಸಭೆಯ ಅಧ್ಯಕ್ಷತೆಯನ್ನು ಸ್ವತಃ ಮೋದಿ ವಹಿಸಿದ್ದರು.ಗೃಹ ಮಂತ್ರಿ ರಾಜನಾಥ ಸಿಂಗ್,ಗೃಹ ವ್ಯವಹಾರ ಮಂತ್ರಿ ಕಿರಣ್ ರಿಜ್ಹು ಸೇರಿದಂತೆ ಗುಪ್ತ ಚರ ಇಲಾಖೆಯ ಉನ್ನತ ಅಧಿಕಾರಿಗಳು,ರಾಷ್ಟ್ರೀಯ ತನಿಖಾದಳದ ಅಧಿಕಾರಿಗಳು ಹಾಗೂ ರಾಜ್ಯಗಳ ಉನ್ನತ ಪೋಲಿಸ್ ಅಧಿಕಾರಿಗಳು ಭಾಗಿಯಾಗಿದ್ದರು.ಈ ಸಂಧರ್ಭದಲ್ಲಿ ಕೇರಳ ಪೋಲಿಸ್ ಉನ್ನತ ಅಧಿಕಾರಿ ಲೋಕನಾಥ ಬೆಹ್ರಾ ಬಳಿ ಕೇರಳದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಕೃತ್ಯಗಳ ಬಗ್ಗೆ ವಿವರಣೆ ನೀಡುವಂತೆ ತಿಳಿಸಲಾಗಿದ್ದು ಬಹುತೇಕ ಘಟನೆಗಳ ಹಿಂದೆ PFI ಸಂಘಟನೆಗಳ ಕೈವಾಡ ಇದ್ದು ಈಗಾಗಲೇ ಕೆಲವು ಕೇಸ್ ಗಳಲ್ಲಿ ಇದು ಸಾಬೀತು ಕೂಡ ಆಗಿದೆ ಎಂದು ಸ್ವತಃ ಬೆಹ್ರಾ ಒಪ್ಪಿಕೊಂಡರು.
ಪ್ರೊ.ಜೋಸೆಫ್ ಕೈ ಕಡಿಯಲಾಗಿತ್ತು
2010 ರಲ್ಲಿ ಎರ್ನಾಕುಲಂ ಜಿಲ್ಲೆಯ ಕಾಲೇಜು ಒಂದರ ಪ್ರೊಫೆಸರ್ ಜೋಸೆಫ್ ಎಂಬುವವರು ಪ್ರಶ್ನೆ ಪತ್ರಿಕೆಯಲ್ಲಿ ಪ್ರವಾದಿ ಮಹಮ್ಮದರಿಗೆ ಅವಮಾನ ಆಗುವಂತಹ ಪ್ರಶ್ನೆ ಮುದ್ರಿಸಿದ್ದಕ್ಕೆ ಅವರ ಕೈಯನ್ನೇ ಕಡಿಯಲಾಗಿತ್ತು.ಈ ಸಂಬಂಧ ಕಳೆದ ಮೇ ನಲ್ಲಿ 13 ಮಂದಿ PFI ಕಾರ್ಯಕರ್ತರಿಗೆ ನ್ಯಾಯಾಲಯ ಶಿಕ್ಷೆಯನ್ನೂ ವಿಧಿಸಿತ್ತು.
ಇಸ್ಲಾಂ ಗೆ ಮತಾಂತರ!
ರಾಷ್ಟ್ರೀಯ ತನಿಖಾ ದಳ ಕಳೆದ ವರ್ಷ ತನಿಖೆ ಮಾಡಿದ 9 ಮತಾಂತರ ಪ್ರಕರಣಗಳಲ್ಲಿ ಕನಿಷ್ಟ 4 ಪ್ರಕರಣಗಳಲ್ಲಿ PFI ಸಂಘಟನೆ ಪಾತ್ರ ಇರುವುದು ತಿಳಿದು ಬಂದಿದೆ.
ಮತ್ತಷ್ಟು ದುಷ್ಕೃತ್ಯ ಗಳಲ್ಲಿ ಭಾಗಿಯಾಗಿರುವ ಬಗ್ಗೆ ಆಧಾರ!
ಈ ಹಿಂದೇ ಇದೇ ರೀತಿಯ ಸಾಕ್ಷಿಗಳು ದೊರೆತ ಬಳಿಕ “ಇಂಡಿಯನ್ ಮುಜಾಹಿದೀನ್” “ಸಿಮಿ” ಅಂತಹ ಸಂಘಟನೆಗಳನ್ನು ದೇಶದ ಸುರಕ್ಷತೆಯ ದೃಷ್ಟಿಯಿಂದ ಸಂಪೂರ್ಣ ನಿಷೇಧಿಸಲಾಗಿತ್ತು.
ಕೇರಳ ಆಯ್ತು ಕರ್ನಾಟಕ ಯಾವಾಗ?
ಈಗಾಗಲೇ ಕೇರಳ ರಾಜ್ಯ ಸರಕಾರ ಸಾಕ್ಷ್ಯಗಳನ್ನು ಒದಗಿಸುವ ಮೂಲಕ PFI ನಿಷೇಧಕ್ಕೆ ಹಸಿರು ನಿಶಾನೆ ತೋರಿಸಿದ್ದು ಕರ್ನಾಟಕದ ಸಿದ್ಧರಾಮಯ್ಯ ಸರಕಾರ ಯಾವಾಗ ಮನಸ್ಸು ಮಾಡುತ್ತದೆ ಕಾದು ನೋಡಬೇಕಿದೆ.
ಇದೇ ಮೊದಲ ಬಾರಿಗೆ ಮಧ್ಯಪ್ರದೇಶದಲ್ಲಿ ನಡೆದ ಸಭೆಯಲ್ಲಿ ಮೋದಿ ನೇತ್ರತ್ವದ ಕೇಂದ್ರ ಸರಕಾರ ಮುತುವರ್ಜಿ ವಹಿಸಿ ದೇಶದ ಆಂತರಿಕ ಸುರಕ್ಷತೆಗೆ ಸವಾಲಾಗಿರುವ PFI ಸಂಘಟನೆ ನಿಷೇಧಕ್ಕೆ ಬಲವಾದ ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದು ಎಪ್ರಿಲ್ ತಿಂಗಳ ಒಳಗೆ ಎಲ್ಲಾ ಪೇಪರ್ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಗ್ರಹ ವ್ಯವಾಹಾರ ಖಾತೆ ಸಚಿವ ಕಿರಣ್ ರಿಜ್ಜು ಫೆಬ್ರುವರಿ 15 ರಂದು ದೆಹಲಿಯಲ್ಲಿ ಪತ್ರಕರ್ತರಿಗೆ ತಿಳಿಸಿದರು.
Leave A Reply