ಮಳೆಗಾಲದ ಚಳಿಯಲ್ಲಿ ಕುಡಿಯಿರಿ ಬಿಸಿಬಿಸಿ ಮಿಕ್ಸ್ಡ್ವೆ ವೆಜ್ ಸೂಪ್
Posted On July 14, 2017
ಮಿಕ್ಸ್ಡ್ ವೆಜ್ ಸೂಪ್ ಗೆ ಬೇಕಾಗುವ ಸಾಮಗ್ರಿಗಳು.
- ಕ್ಯಾರೆಟ್
- ಬೀನ್ಸ್
- ಬೇಬೀ ಕಾರ್ನ್
- ಮಶ್‌ರೂಮ್
- ನೀರುಳ್ಳಿ
- ಶೂಂಟಿ-ಬೆಳ್ಳುಳ್ಳಿ ಪೇಸ್ಟ್
- ಕಾರ್ನ್ ಫ್ಲೋರ್
- ರೆಫೈಂಡ್ ಎಣ್ಣೆ
- ಉಪ್ಪು
- ಕರಿಮೆಣಸಿನ ಹುಡಿ
ಮಿಕ್ಸ್ಡ್ ವೆಜ್ ಸೂಪ್ ಮಾಡುವ ವಿಧಾನ
ಒಂದು ಕಾವಲಿಯಲ್ಲಿ 2 ಟೇಬಲ್ ಸ್ಪೂನ್ ರೆಫೈಂಡ್ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ನೀರುಳ್ಳಿ ಸೇರಿಸಿ ಗೋಲ್ಡನ್ ಬ್ರೌನ್ ಆಗೋ ವರೆಗೆ ಫ್ರೈ ಮಾಡಿ. ಅದಕ್ಕೆ ಶೂಂಟಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ. ನಂತರ ತುಂಡು ಮಾಡಿಟ್ಟ ತರಕಾರಿಗಳನ್ನು ಹಾಕಿ ಫ್ರೈ ಮಾಡಿ. ಅದಕ್ಕೆ ಉಪ್ಪು ಮತ್ತೆ ನೀರು ಸೇರಿಸಿ 5 ನಿಮಿಷ ಕುದಿಬರುವ ವರೆಗೆ ಮುಚ್ಚಿಡಿ. ಸೊಲ್ಪ ನೀರಿನಲ್ಲಿ ಕಾರ್ನ್ ಫ್ಲೋರ್ ಹಾಕಿ ಸೂಪ್ಗೆ ಸೇರಿಸಿ. ಸೊಲ್ಪ ಕರಿಮೆಣಸಿನ ಹುಡಿ ಹಾಕಿ ಮಿಕ್ಸ್ ಮಾಡಿ.
ಬಿಸಿಬಿಸಿಯಾದ ಮಿಕ್ಸ್ಡ್ ವೆಜ್ ಸೂಪ್ ರೆಡಿ.
ರೆಸಿಪಿ: ಪದ್ಮಾ ಬಸ್ತಿ
- Advertisement -
Leave A Reply