48 ದಿನದಲ್ಲಿ ಪಾಕಿಸ್ತಾನದ 20 ಯೋಧರನ್ನು ಹೊಡೆದುರುಳಿಸಿದ ಭಾರತೀಯ ಯೋಧರಿಗೊಂದು ಸಲಾಂ

ಶ್ರೀನಗರ: ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನಿ ಸೈನಿಕರು, ಉಗ್ರರು ಭಾರತೀಯ ಸೈನಿಕರನ್ನು ಹತ್ಯೆ ಮಾಡುತ್ತಿದ್ದರೆ ಪ್ರತಿ ಭಾರತೀಯನ ರಕ್ತವೂ ಕುದಿಯುತ್ತಿದೆ. ಎಲ್ಲೋ ಅದಾದುದ್ದೀನ್ ಓವೈಸಿಯಂತಹ ಕೆಲವು ಕುತ್ಸಿತ ಮನಸ್ಸುಗಳು ಮಾತ್ರ ಹುತಾತ್ಮರಾದ ಯೋಧರಲ್ಲಿ ಜಾತಿ, ಧರ್ಮ ಹುಡುಕುತ್ತಾರೆ. ಆದರೂ ನಮ್ಮ ಸೈನಿಕರು ಮಾತ್ರ ಎದೆ ಉಬ್ಬಿಸಿಕೊಂಡೇ ಶತ್ರುಗಳ ಎದುರು ಹೋರಾಡುತ್ತಾರೆ.
ಇಂತಹ ಹೆಮ್ಮೆಯ ಭಾರತೀಯ ಸೈನಿಕರು ಮತ್ತೊಂದು ಸಾಧನೆ ಮೆರೆದಿದ್ದು, 2018ರ ಈ 48 ದಿನಗಳಲ್ಲಿ ಜಮ್ಮು-ಕಾಶ್ಮಿರದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಬರೋಬ್ಬರಿ 20 ಸೈನಿಕರನ್ನು ಹೊಡೆದುರುಳಿಸಿದೆ.
ಪಾಕಿಸ್ತಾನದ ಪ್ರತಿ ಕುತಂತ್ರಕ್ಕೂ ಭಾರತ ಪ್ರತಿತಂತ್ರವನ್ನು ರೂಪಿಸುತ್ತಿದ್ದು, ಪಾಕಿಸ್ತಾನಿ ಸೈನಿಕರಿಗಿಂತ ದುಪ್ಪಟ್ಟು ಆಕ್ರೋಶದಿಂದ ಹೋರಾಡುತ್ತಿದ್ದಾರೆ. ಅದಕ್ಕಾಗಿಯೇ 20 ಸೈನಿಕರನ್ನುಹತ್ಯೆ ಮಾಡುವ ಜತೆಗೆ ಶತ್ರುರಾಷ್ಟ್ರದ ಏಳು ಸೈನಿಕರು ಜೀವನ್ಮರಣದ ನಡುವೆ ಹೋರಾಡುವ ರೀತಿಯಲ್ಲಿ ಗಾಯಗೊಳಿಸಿದ್ದಾರೆ.
ಭಾರತೀಯ ಸೈನ್ಯದ ಪ್ರತಿ ಸೇನಾ ನೆಲೆಗಳು ತುಂಬ ಎಚ್ಚರದಿಂದ ಕಾರ್ಯನಿರ್ವಹಿಸುತ್ತಿವೆ. ಪಾಕಿಸ್ತಾನದ ಪ್ರತಿಯೊಂದು ಚಲನವಲನ ಗಮನಿಸುತ್ತಿದ್ದು, ಸಣ್ಣ ಸುಳಿವು ಸಿಕ್ಕರೂ ಸೈನಿಕರು ದಾಳಿ ಮಾಡುತ್ತಿದ್ದಾರೆ. ಅಲ್ಲದೆ ಶತ್ರುವಿನ ಎದೆಗೆ ಗುಂಡಿಡಲು ಪ್ರತಿ ಸೈನಿಕರು ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದೇ ಕಾರಣಕ್ಕೆ ಬಾಲ ಸುಟ್ಟ ಬೆಕ್ಕಿನಂತಾಗಿರುವ ಪಾಕಿಸ್ತಾನ ಹಲವು ತಂತ್ರ ಮಾಡುತ್ತಿದೆ. ಸುಮಾರು 35 ನೆಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಆದರೂ ಭಾರತದ ಯೋಧರು ಅದಕ್ಕೆ ಪ್ರತಿತಂತ್ರ ರೂಪಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. 2017ರಲ್ಲಿ ಭಾರತೀಯ ಸೈನಿಕರು ದಾಖಲೆಯ ಪ್ರಮಾಣದಲ್ಲಿ, ಅಂದರೆ ಪಾಕಿಸ್ತಾನದ 213 ಉಗ್ರರನ್ನು ಹೊಡೆದುರುಳಿಸಿದೆ.
Leave A Reply