ಕಾಲೇಜಿಗೆ ಸರಿಯಾಗಿ ಬನ್ನಿ ಎಂದರೆ ಪ್ರತಿಭಟನೆ ಮಾಡುವುದು ಜೆಎನ್ ಯು ವಿದ್ಯಾರ್ಥಿಗಳು ಮಾತ್ರವೇ ಇರಬೇಕು!
ದೆಹಲಿ: ಕನ್ಹಯ್ಯ ಕುಮಾರ್, ಉಮರ್ ಖಾಲಿದ್ ಅವರಂತಹ ವಿದ್ಯಾರ್ಥಿಗಳು ದೆಹಲಿಯ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ದೇಶದ್ರೋಹದ ಹೇಳಿಕೆ ನೀಡಿದ ಕುರಿತು ರಾಷ್ಟ್ರವ್ಯಾಪಿ ಸುದ್ದಿಯಾಗಿತ್ತು. ಈಗ ಮತ್ತೊಂದು ಕಾರಣಕ್ಕಾಗಿ ಜೆಎನ್ ಯು ಸುದ್ದಿಯಾಗಿದೆ.
ಆಗಿದ್ದಿಷ್ಟೆ. ವಿದ್ಯಾರ್ಥಿಗಳು ವಿವಿ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿಗಳಿಗೆ ಅನ್ಯಾಯವಾದಾಗ, ಸೌಲಭ್ಯ ನೀಡದೇ ಇದ್ದಾಗ ವಿವಿ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ಮಾಡುವುದು ಸಾಮಾನ್ಯ. ಆದರೆ ಜೆಎನ್ ಯು ವಿವಿ ವಿದ್ಯಾರ್ಥಿಗಳು ಮಾತ್ರ ಕಾಲೇಜಿಗೆ ಸರಿಯಾಗಿ ಬನ್ನಿ ಎಂದಿದ್ದಕ್ಕೇ ಪ್ರತಿಭಟನೆ ಮಾಡಿದ್ದಾರೆ ಎಂದರೆ ನಂಬಲೇಬೇಕು.
ಹೌದು, ಇತ್ತೇಚೆಗೆ ಹಾಸ್ಟೆಲ್ ಊಟ ತಿಂದು ಕಾಲೇಜಿಗೆ ಚಕ್ಕರ್ ಹೊಡೆಯುವವರ ಸಂಖ್ಯೆ ಜಾಸ್ತಿಯಾದ ಹಿನ್ನೆಲೆಯಲ್ಲಿ ವಿವಿ ಆಡಳಿತ ಮಂಡಳಿಯು ಪ್ರತಿ ವಿದ್ಯಾರ್ಥಿಗೆ ಶೇ.75ರಷ್ಟು ಹಾಜರಾತಿ ಕಡ್ಡಾಯಗೊಳಿಸಿದೆ. ಹಾಜರಾತಿ ಇರದಿದ್ದರೆ ಪರೀಕ್ಷೆಗೆ ಕೂರಿಸುವುದಿಲ್ಲ ಎಂದು ತಿಳಿಸಿದೆ.
ಆದರೆ ಇದನ್ನೇ ಮಹಾನ್, ಘೋರ ಅನ್ಯಾಯ ಎಂಬಂತೆ ಭಾವಿಸಿರುವ ಕೆಲವ ವಿದ್ಯಾರ್ಥಿ ಸಂಘಟನೆಗಳ ಮುಖಂಡರು ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಆದೇಶ ಹಿಂಪಡೆಯಬೇಕು, ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಪೋಷಕರು ನಮ್ಮ ಮಕ್ಕಳು ಓದಿ ಉದ್ಧಾರ ಆಗಲಿ ಎಂದು ಕಷ್ಟಪಟ್ಟಾದರೂ ಉನ್ನತ ಶಿಕ್ಷಣಕ್ಕಾಗಿ ವಿಶ್ವವಿದ್ಯಾಲಯಕ್ಕೆ ಕಳುಹಿಸುತ್ತಾರೆ. ಸರ್ಕಾರ ಸಹ ಕೋಟ್ಯಂತರ ರೂ. ವೆಚ್ಚ ಮಾಡಿ ಉನ್ನತ ಶಿಕ್ಷಣ ನೀಡುತ್ತದೆ. ಇದೇ ದಿಸೆಯಲ್ಲಿ ಕಾಲೇಜು ಆಡಳಿತ ಮಂಡಳಿ ಶಿಸ್ತಿನ ನಿಯಮ ರೂಪಿಸಿದೆ. ಆದರೆ ಇದನ್ನೂ ವಿರೋಧಿಸಿ ಪ್ರತಿಭಟನೆ ಮಾಡುತ್ತಾರೆಂದರೆ?
Leave A Reply