ಸೈನಿಕರ ವಿರುದ್ಧ ಎಫ್ ಐಆರ್ ತಡೆ, ಪ್ರತ್ಯೇಕವಾದಿಗಳಿಗೆ ಉರಿ, ಕಾಶ್ಮೀರ ಬಂದ್ ಗೆ ಕರೆ
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಸೈನಿಕರ ವಿರುದ್ಧ ಎಫ್ ಐಆರ್ ಹಾಕಲು ಸುಪ್ರಿಂ ಕೋರ್ಟ್ ತಡೆ ನೀಡಿದಕ್ಕೆ ಕಾಶ್ಮೀರ ಪ್ರತ್ಯೇಕವಾದಿಗಳಿಗೆ ಉರಿ ಬಿದ್ದಿದ್ದು, ಕಾಶ್ಮೀರ ಬಂದ್ ಘೋಷಿಸಿದ್ದಾರೆ. ಶ್ರೀನಗರ ಸೇರಿ ಕಾಶ್ಮೀರದ ನಾನಾ ಭಾಗಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಭಾರಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಸುಪ್ರಿಂ ಕೋರ್ಟ್ ಎಫ್ ಐಆರ್ ದಾಖಲಿಸಲು ತಡೆ ನೀಡಿರುವ ಕಾರಣವಿಟ್ಟುಕೊಂಡು, ಬಂದ್ ಘೋಷಿಸಿದ್ದರಿಂದ ಕಾಶ್ಮೀರದ ನೌಹಟ್ಟಾ, ರೌನಾವರಿ, ಖಾನ್ಯಾರ್, ಸಫಕಡಲ್, ಎಂ.ಆರ್ ಗಂಜ್ ಪ್ರದೇಶ ಸೇರಿ ನಾನಾ ಕಡೆ ನಿಷೇಧಾಜ್ಞೆ ಹೇರಲಾಗಿದೆ. ಅಲ್ಲದೇ ಬಿಗಿ ಪೊಲೀಸ್ ಮತ್ತು ಸೈನಿಕ ಬಂದೋಬಸ್ತ್ ಏರ್ಪಡಿಸಲಾಗಿದೆ. ಪ್ರತ್ಯೇಕವಾದಿಗಳ ಪ್ರತಿಭಟನೆಗೆ ಹೆದರಿ ಕೆಲವು ಅಂಗಡಿ ಮುಗಟ್ಟುಗಳನ್ನು ಮುಚ್ಚಲಾಗಿದೆ. ಖಾಸಗಿ ವಾಹನಗಳು, ಆಟೋ ರಿಕ್ಷಾಗಳು ಎಂದಿನಂತೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತ್ಯೇಕವಾದಿಗಳ ಮುಖಂಡರಾದ ಸೈಯದ್ ಅಲಿ ಶಾ ಗಿಲಾನಿ, ಮಿರ್ವೈಜ್ ಉಮರ್ ಫಾರೂಕ್ ಮತ್ತು ಮಹಮ್ಮದ್ ಯಾಸೀನ್ ಮಲೀಕ್ ಸೇರಿ ನಾನಾ ಮುಖಂಡರು ಸುಪ್ರಿಂ ಕೋರ್ಟ್ ನೀಡಿರುವ ತೀರ್ಪನ್ನು ಕಟುವಾಗಿ ವಿರೋಧಿಸಿದ್ದರು. ಅಲ್ಲದೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ತೀರ್ಪು ವಿರೋಧಿಸಿ ಬಂದ್ ಘೋಷಿಸಿದರು.
ಮೂವರು ಕಲ್ಲು ಪ್ರತ್ಯೇಕವಾದಿ ಮುಖಂಡರ ಬೆಂಬಲಿಗರು ಕಾಶ್ಮೀರ ಪ್ರತ್ಯೇಕತೆಗಾಗಿ ಆಗ್ರಹಿಸಿ ಪ್ರತಿಭಟನೆ ವೇಳೆ, ಸೈನಿಕರ ಮೇಲೆ ಕಲ್ಲು ಎಸೆದಿದ್ದರಿಂದ ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದರು. ದಾಳಿ ಮಾಡಿದ ಯೋಧರಾದ ಮೇಜರ್ ಆದಿತ್ಯಕುಮಾರ ಸೇರಿ ಹಲವರ ವಿರುದ್ಧ ಎಫ್ ಐಆರ್ ದಾಖಲಿಸಲು ಜಮ್ಮು ಕಾಶ್ಮೀರ ಸರ್ಕಾರ ನಿರ್ಧರಿಸಿತ್ತು. ಇದಕ್ಕೆ ಸುಪ್ರೀಂ ಕೋರ್ಟ್ ತಡೆ ಒಡ್ಡಿತ್ತು. ಇದರಿಂದ ಉರಿಬಿದ್ದವರಂತೆ ಆಡುತ್ತಿರುವ ಕಾಶ್ಮೀರ ಪ್ರತ್ಯೇಕವಾದಿಗಳು ಕಾಶ್ಮೀರ್ ಬಂದ್ ಗೆ ಕರೆ ನೀಡಿದ್ದಾರೆ.
Leave A Reply