ಭಾರತ ಶಾಂತಿ, ಸಹಬಾಳ್ವೆಯ ಮೂರ್ತರೂಪ ಎಂದ ಮುಸ್ಲಿಂ ರಾಷ್ಟ್ರದ ನಾಯಕ ಯಾರು ಗೊತ್ತಾ?
ದೆಹಲಿ: ಪ್ರಕಾಶ್ ರೈ ಅಂತಹ ಅತೃಪ್ತ ಆತ್ಮಗಳು, ಆಮೀರ್ ಖಾನ್ ಅವರಂತಹ ಶ್ರೀಮಂತರು ಹಾಗೂ ಬಾಯಿ ತೆವಲು ಇರುವವರು ಭಾರತದಲ್ಲಿ ಅಸಹಿಷ್ಣುತೆ ಇದೆ, ಅಭದ್ರತೆ ಕಾಡುತ್ತಿದೆ ಎಂದು ಬೊಬ್ಬೆ ಹಾಕುತ್ತಾರೆ. ಆದರೆ, ಅದೇ ವಿಶ್ವದ ಪ್ರಮುಖ ರಾಷ್ಟ್ರಗಳ ನಾಯಕರು ಮಾತ್ರ ಭಾರತದ ಆಚಾರ-ವಿಚಾರ, ಸಂಸ್ಕೃತಿ, ಶಾಂತಿಪ್ರಿಯತೆಯನ್ನು ಹಾಡಿಹೊಗಳುತ್ತಾರೆ.
ಇದಕ್ಕೆ ಪೂರಕವಾಗಿ ಮತ್ತೊಂದು ನಿದರ್ಶನ ಸಿಕ್ಕಿದ್ದು, ಇರಾನ್ ಅಧ್ಯಕ್ಷ ಹಸನ್ ರೌಹಾನಿ ಭಾರತದ ಶಾಂತಿಪ್ರಿಯತೆಯನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ. ಮೂರು ದಿನ ಭಾರತದ ಪ್ರವಾಸದಲ್ಲಿರುವ ಮುಸ್ಲಿಂ ರಾಷ್ಟ್ರದ ಅಧ್ಯಕ್ಷ, “ಭಾರತ ಶಾಂತಿ ಸಹಬಾಳ್ವೆಯ ಜೀವಂತ ನಿದರ್ಶನ ಹಾಗೂ ಶಾಂತಿಗೆ ಮ್ಯೂಸಿಯಂ” ಇದ್ದಂತೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಶತಶತಮಾನಗಳಿಂದ ಮುಸ್ಲಿಮರು, ಶಿಯಾ ಹಾಗೂ ಸುನ್ನಿ ಪಂಗಡಗಳು, ಬೌದ್ಧ ಧರ್ಮೀಯರು, ಸಿಖ್ಖರು ಹಾಗೂ ಹಿಂದೂಗಳು ಒಗ್ಗಟ್ಟಾಗಿ ಬಾಳುತ್ತಿದ್ದಾರೆ. ಇಂತಹ ಒಂದು ಸಹಬಾಳ್ವೆಯಿಂದಲೇ ಭಾರತ ಉತ್ತಮ ನಾಗರಿಕತೆ ಪಡೆದಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ವಿಶ್ವದಲ್ಲಿ ಇಸ್ಲಾಂ ಧರ್ಮವು ಸಹ ಶಾಂತಿ ಬಯಸುತ್ತಿದೆ. ಆದರೆ ಕೆಲವು ಮೂಲಭೂತವಾದಿಗಳ ಕುತಂತ್ರದಿಂದ ಧರ್ಮಕ್ಕೇ ಕೆಟ್ಟ ಹೆಸರು ಬರುತ್ತಿದೆ. ಅದನ್ನು ಹೋಗಲಾಡಿಸಲು ಶಿಯಾ ಹಾಗೂ ಸುನ್ನಿ ಪಂಗಡದವರು ಒಗ್ಗಟ್ಟಾಗಬೇಕು. ಶಾಂತಿ, ಸಹಬಾಳ್ವೆಯಿಂದ ಬದುಕಬೇಕು ಎಂದು ಸಹ ಸಲಹೆ ನೀಡಿದ್ದಾರೆ.
ಅದೇ ರೀತಿ, ಅವು ಮುಸ್ಲಿಂ ರಾಷ್ಟ್ರಗಳಿರಲಿ, ಅಥವಾ ಅದಾವುದೇ ಧರ್ಮ, ಸಂಸ್ಕೃತಿ ಪ್ರಧಾನ ರಾಷ್ಟ್ರಗಳಿರಬಹುದು. ಎಲ್ಲ ರಾಷ್ಟ್ರಗಳು ತಮ್ಮ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಎಲ್ಲದಕ್ಕೂ ಯುದ್ಧವೇ ಅಂತಿಮ ಪರಿಹಾರ ಎಂಬುದನ್ನು ಬಿಡಬೇಕು ಎಂದಿದ್ದಾರೆ.
ಅಲ್ಲದೆ ಪ್ರಧಾನಿ ಮೋದಿ ಅವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿರುವ ಹಸನ್, ಭಾರತಕ್ಕೆ ವಿಶ್ವಸಂಸ್ಥೆಯಲ್ಲಿ ವೀಟೋ ಅಧಿಕಾರ ನೀಡಬೇಕು ಎಂದು ಸಹ ವಿಶ್ವಸಂಸ್ಥೆಗೆ ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತದ ಖ್ಯಾತೆ ವಿಶ್ವವ್ಯಾಪಿಯಾಗುತ್ತಿರುವುದಂತೂ ಸುಳ್ಳಲ್ಲ.
Leave A Reply