ಎಐಎಡಿಎಂಕೆ ಬಿರುಕು ಸರಿಯಾಗಲು ಪ್ರಧಾನಿ ಮೋದಿಯೇ ಕಾರಣ ಎಂದ ಪಳನಿಸ್ವಾಮಿ!
ಚೆನ್ನೈ: ರಾಜಕಾರಣದಲ್ಲಿ ಒಡೆದು ಆಳುವ, ಒಬ್ಬರ ಮೇಲೆ ಇನ್ನೊಬ್ಬರು ಎತ್ತಿಕಟ್ಟಿ, ಇನ್ನೊಬ್ಬರನ್ನು ಅಧಿಕಾರದಿಂದ ಕೆಳಗಿಳಿಸುವ ತಂತ್ರ, ಕುತಂತ್ರಗಳೇ ಜಾಸ್ತಿ ನಡೆಯುತ್ತವೆ. ಆದರೆ ಪ್ರಧಾನಿ ಮೋದಿ ಅವರ ಪ್ರಯತ್ನದಿಂದ ಎಐಎಡಿಎಂಕೆ ಪಕ್ಷದಲ್ಲಿ ಉಂಟಾಗಿದ್ದ ಬಿರುಕೊಂದು ಸರಿಯಾಗಿದೆ.
ಹೌದು, ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯಂತೆಯೇ ನಾನು ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಬಣದೊಂದಿಗೆ ಕೈ ಜೋಡಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ ಸ್ಪಷ್ಟಪಡಿಸಿದ್ದಾರೆ.
2017ರಲ್ಲಿ ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದಾಗ, ಕೆ.ಪಳನಿಸ್ವಾಮಿ ವಿಚಾರ ಮಾತುಕತೆಗೆ ಬಂತು. ಆಗ ಪ್ರಧಾನಿಯವರು ಎಐಎಡಿಎಂಕೆ ಪಕ್ಷವನ್ನು ಉಳಿಸಲು ಪಳನಿಸ್ವಾಮಿ ಅವರೊಂದಿಗೆ ಕೈಜೋಡಿಸಿ ಎಂದು ಸಲಹೆ ನೀಡಿದ್ದರು. ನಾನು ಸಹ ಅದಂರತೆ ನಡೆದುಕೊಂಡೆ ಎಂದು ತೇಣಿಯಲ್ಲಿ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಸೆಲ್ವಂ ತಿಳಿಸಿದ್ದಾರೆ.
ಅಮ್ಮಾ (ಜಯಲಲಿತಾ) ನಿಧನದ ಬಳಿಕ ನನಗೆ ಯಾವುದೇ ಅಧಿಕಾರದ ಆಸೆಯಿರಲಿಲ್ಲ. ಆದರೂ ಪಕ್ಷದಲ್ಲಿ ಒಡಕು ಉಂಟಾಗಿತ್ತು. ಪ್ರಧಾನಿ ಮೋದಿ ಅವರು ಅದು ಸರಿಯಾಗಲಿ, ನೀವು ಮತ್ತೆ ಒಂದಾಗಿ ಎಂಬ ಇರಾದೆ ವ್ಯಕ್ತಪಡಿಸಿದ್ದರು. ಮುಂದೆ ಅವರ ಸಲಹೆಯಂತೆಯೇ ಆಯಿತು ಎಂದು ಸ್ಪಷ್ಟಪಡಿಸಿದ್ದಾರೆ.
ಜಯಲಲಿತಾ ನಿಧನದ ಬಳಿಕ ಎಐಎಡಿಎಂಕೆಯಲ್ಲಿ ಭಾರಿ ಬಿರುಕು ಉಂಟಾಗಿತ್ತು. ಪಳನಿಸ್ವಾಮಿ ಒಂದು ಬಣ ಸೃಷ್ಟಿಸಿಕೊಂಡಿದ್ದರೆ, ಜಯಲಲಿತಾ ಆಪ್ತೆ ಶಶಿಕಲಾ ಗುಂಪಿನಲ್ಲಿ ಪನ್ನೀರ್ ಗುರುತಿಸಿಕೊಂಡಿದ್ದರು. ಶಶಿಕಲಾ ಜೈಲಿಗೆ ಹೋದ ಬಳಿಕ ಪಳನಿಸ್ವಾಮಿ ಹಾಗೂ ಪನ್ನೀರ್ ಸೆಲ್ವಂ ಒಂದಾಗಿದ್ದರು. ಸೆಲ್ವಂ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಲಭಿಸಿದೆ.
Leave A Reply