ಮತಾಂತರ, ಲವ್ ಜಿಹಾದ್ ಗೆ ಬಲಿಯಾದ ಯುವತಿಯರ ಹೆತ್ತವರಿಂದಲೇ ಜಾಗೃತಿ ಸಂಘಟನೆ

ಕಾಸರಗೋಡು: ಕೇರಳದಲ್ಲಿ ಮತಾಂಧರ ಅಟ್ಟಹಾಸಕ್ಕೆ ಬಲಿಯಾಗಿ ಮತಾಂತರವಾಗಿರುವ ಯುವತಿಯರ ಹೆತ್ತವರು ನಿತ್ಯ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಹೆತ್ತ ಮಕ್ಕಳು ಪಾಪಕೂಪಕ್ಕೆ ಬಲಿಯಾಗುವುದನ್ನು ತಡೆಯಲು ಇದೀಗ ಅದೇ ಹೆತ್ತವರು ಮುಖ್ಯವಾಹಿನಿಗೆ ಬಂದಿದ್ದು, ಯುವತಿಯರಲ್ಲಿ ಮತಾಂತರ, ಲವ್ ಜಿಹಾದ್ ಬಗ್ಗೆ ಜಾಗೃತಿ ಮೂಡಿಸಲು ಸ್ವಂತ ಸಂಘಟನೆಯೊಂದನ್ನು ಆರಂಭಿಸುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಮತಾಂತರ, ಲವ್ ಜಿಹಾದ್ ಗೆ ಬಲಿಯಾಗುವುದನ್ನು ತಡೆಯುವ ಗುರಿ ಹೊಂದಿದ್ದಾರೆ.
ಈ ಕುರಿತು ಕೇರಳದ ಎರ್ನಾಕುಲಂ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ನಾವು ಹೆತ್ತ ಮಕ್ಕಳು ವಿಶೇಷವಾಗಿ ಯುವತಿಯರು ಮತಾಂಧರ ಪಾಶಕ್ಕೆ ಸಿಲುಕಿ ಭಯೋತ್ಪಾದಕರಾಗುತ್ತಿದ್ದಾರೆ. ಯುವತಿಯರನ್ನು ಲವ್ ಜಿಹಾದ್ ನೆಪದಲ್ಲಿ ಮೋಹ ಪಾಶಕ್ಕೆ ಸಿಲುಕಿಸಿ, ವಿದೇಶಗಳಿಗೆ ಕಳ್ಳ ಸಾಗಣೆ ಮಾಡುತ್ತಿದ್ದಾರೆ. ಅಲ್ಲದೇ ಯುವತಿಯರನ್ನು ಸಾಗಣೆ ಮಾಡಿ ಚಿತ್ರ ಹಿಂಸೆ ನೀಡುತ್ತಿದ್ದಾರೆ. ಇದೆಲ್ಲವನ್ನು ತಡೆಯುವಲ್ಲಿ ಸರ್ಕಾರ ಪೊಲೀಸರು ವಿಫಲರಾಗಿದ್ದಾರೆ. ಆದ್ದರಿಂದ ನಾವೇ ನಮ್ಮ ಮಕ್ಕಳ ರಕ್ಷಣೆಗಾಗಿ, ಜಾಗೃತಿ ಮೂಡಿಸಲು ಸಂಘಟನೆ ಆರಂಭಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಹಲವು ವರ್ಷ ಯುವತಿಯರನ್ನು ಸಾಕಿ ಸಲಹಿದ ನಂತರ ಮತಾಂತರದ ಕೂಪಕ್ಕೆ ಬಲಿಯಾಗಿ ಮಕ್ಕಳನ್ನು ಕಳೆದುಕೊಂಡ ಸುಮಾರು 30 ಪಾಲಕರು ಒಗ್ಗೂಡಿ ಸಂಘಟನೆ ಆರಂಭಿಸಿದ್ದಾರೆ. ಈ ಮೂಲಕ ಮತಾಂತರ, ಲವ್ ಜಿಹಾದ್ ಕೂಪಕ್ಕೆ ಬಲಿಯಾಗುತ್ತಿರುವುದನ್ನು ತಡೆಯಲು ಮುಂದಾಗಿದ್ದಾರೆ.
ಮತಾಂತರದ ದುಷ್ಪರಿಣಾಮಗಳನ್ನು ಎದುರಿಸಿರುವ ಪಾಲಕರೇ ಸಂಘಟನೆ ಮಾಡಲು ಹೊರಟಿರುವುದು ತೀವ್ರ ಶ್ಲಾಘನೆಗೆ ಕಾರಣವಾಗಿದೆ. ಅಲ್ಲದೇ ಕೇರಳದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಭಯೋತ್ಪಾದಕ ಪ್ರೇರಿತ, ಮತಾಂಧ ಚಟುವಟಿಕೆಗಳ ಬಗ್ಗೆ ಜಾಗೃತಿಯೂ ಈ ಸಂಘಟನೆಯಿಂದ ನಡೆಯಲಿರುವುದು ವಿಶೇಷ.
Leave A Reply