ಡೋಕ್ಲಾಂ ಬಿಕ್ಕಟ್ಟು, ಭೂತಾನ್ ಗೆ ಭೇಟಿ ನೀಡಿ ಚೀನಾಗೆ ಶಾಕ್ ನೀಡಿದ ಭಾರತದ ಅಧಿಕಾರಿಗಳು
ದೆಹಲಿ: ಭಾರತ ಚೀನಾ ಮಧ್ಯೆ ತೀವ್ರ ಗಡಿ ವಿವಾದಕ್ಕೆ ಕಾರಣವಾಗಿರುವ ಡೋಕ್ಲಾಂ ಬಿಕ್ಕಟ್ಟು ಬಗೆ ಹರಿಸಲು ಭೂತಾನ್ ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜೀತ್ ದೋವಾಲ್ ಭೇಟಿ ನೀಡಿದ್ದು, ಭೂತಾನ್ ನ ಪ್ರಮುಖ ಅಧಿಕಾರಿಗಳೊಂದಿಗೆ ಡೋಕ್ಲಾಂ ಗಡಿ ಬಿಕ್ಕಟ್ಟು ಬಗೆಹರಿಸಿ, ಗಡಿಯಲ್ಲಿ ಶಾಂತಿ ನೆಲೆಸುವ ಕುರಿತು ಮಾತುಕತೆ ನಡೆಸಿದ್ದಾರೆ.
ಅಜಿತ್ ದೋವಲ್ ನೇತೃತ್ವದ ತಂಡದಲ್ಲಿ ರಾಷ್ಟ್ರೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಭೂತಾನ್ ಗೆ ಭೇಟಿ ನೀಡಿದ್ದು, ಶಾಂತಿ ಮಾತುಕತೆ ನಡೆಸಿದ್ದಾರೆ. ಡೋಕ್ಲಾಂನಲ್ಲಿ ಭೂತಾನ್ ಪಾಲುದಾರಿಕೆ, ಬಿಕ್ಕಟ್ಟಿಗೆ ಮೂಲ ಕಾರಣ, ಚೀನಾ ಹಸ್ತಕ್ಷೇಪ ಸೇರಿ ನಾನಾ ತಂತ್ರಗಾರಿಕೆಗಳ ಬಗ್ಗೆ ಫೆ.6 ಮತ್ತು 7ರಂದು ಭೇಟಿ ನೀಡಿದ ವೇಳೆ ಮಾತುಕತೆ ನಡೆದಿದೆ.
ಭೂತಾನ್ ಮತ್ತು ಭಾರತ ಉಭಯ ರಾಷ್ಟ್ರಗಳು ಡೋಕ್ಲಾಂನಲ್ಲಿ ಚೀನಾ ಸೈನಿಕ ಕಾರ್ಯಚರಣೆ ಬಗ್ಗೆ ಎಚ್ಚರವಹಿಸಬೇಕು. ಉಭಯ ರಾಷ್ಟ್ರಗಳ ಮಧ್ಯೆ ಸೈನಿಕ ಸಹಕಾರ ಪಡೆಯಬೇಕು. ಡೋಕ್ಲಾಂನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಗಿದೆ. ಇದು ಭಾರತ ಮತ್ತು ಭೂತಾನ್ ಗಳ ಮಧ್ಯೆ ಉತ್ತಮ ಸ್ನೇಹ ಬಾಂಧವ್ಯವನ್ನು ವೃದ್ಧಿಸಲಿದೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ಮೂಲಗಳು ತಿಳಿಸಿವೆ.
ಡೋಕ್ಲಾಂ ಕುರಿತ ಅಧಿಕಾರಿಗಳ ಪ್ರಥಮ ಭೇಟಿ
ಡೋಕ್ಲಾಂ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತ ಮತ್ತು ಭೂತಾನನ ಉನ್ನತ ಮಟ್ಟದ ಅಧಿಕಾರಿಗಳ ಭೇಟಿ ಇದೇ ಪ್ರಥಮವಾಗಿದೆ. ಈ ಮೊದಲು ಅಧಿಕಾರಿಗಳು ಭೇಟಿ ನೀಡಿದ್ದರು. ಆದರೆ ವಿಶೇಷವಾಗಿ ಡೋಕ್ಲಾಂ ವಿವಾದದ ಬಗ್ಗೆ ಮಾತನಾಡಲು ಇದೇ ಮೊದಲ ಬಾರಿಗೆ ಉನ್ನತ ಮಟ್ಟದ ಅಧಿಕಾರಿಗಳು ಡೋಕ್ಲಾಂಗೆ ಭೇಟಿ ನೀಡಿದ್ದಾರೆ. ಭೂತಾನ್ ಭಾರತದ ಆಡಳಿತಾತ್ಮಕ ಮತ್ತು ಸೈನಿಕ ಸಹಕಾರ ಬಯಸುತ್ತಿರುವ ಕುರಿತು ಮಾತುಕತೆ ನಡೆದಿವೆ.
Leave A Reply