ಮೋದಿ ಸ್ವಕ್ಷೇತ್ರ ವಡನಗರದ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ
Posted On February 19, 2018
ಅಹಮದಾಬಾದ್: ದೇಶಾದ್ಯಂತ ಕಾಂಗ್ರೆಸ್ ಮುಕ್ತ ಭಾರತ ಯಶಸ್ವಿಯಾಗುತ್ತಿದ್ದು, ಇದೀಗ ಕಾಂಗ್ರೆಸ್ ಗೆ ಮತ್ತೊಂದು ಹೊಡೆತ ಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಕ್ಷೇತ್ರ ವಡನಗರ ಮುನ್ಸಿಪಾಲಿಟಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ.
28 ಸ್ಥಾನಗಳಲ್ಲಿ 27 ಸ್ಥಾನಗಳನ್ನು ಗೆಲ್ಲುವು ಮೂಲಕ ಬಿಜೆಪಿ ಮೇಲೆ ಜನರು ತಮ್ಮ ವಿಶ್ವಾಸವನ್ನು ಮುಂದುವರಿಸಿದ್ದಾರೆ. ಗುಜರಾತ್ ನ ಮೆಹಸಾನ್ ಜಿಲ್ಲೆಯ ವಡಾನಗರ ಮೋದಿ ಅವರ ಸ್ವಕ್ಷೇತ್ರವಾಗಿದೆ. ಮೋದಿ ಸ್ವಕ್ಷೇತ್ರವಾದಿ ವಡಾನಗರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮತ್ತು ಬಾರಿ ಪೈಪೋಟಿ ಏರ್ಪಟ್ಟಿತ್ತು, ವಡಾನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 15 ಸೆಪ್ಟೆಂಬರ್ 1950 ರಲ್ಲಿ ಜನಿಸಿದ್ದರು.
75 ನಗರಪಾಲಿಕೆಯಲ್ಲಿ 43 ರಲ್ಲಿ ಬಿಜೆಪಿ ಮುಂಚೂಣಿಯಲ್ಲಿದ್ದು, ಕಾಂಗ್ರೆಸ್ 25 ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಬಿಜೆಪಿ ವಿಜಯಯಾತ್ರೆ ಮುಂದುವರಿಯುವ ಎಲ್ಲ ಲಕ್ಷಣಗಳು ಗೋಚರಿಸಿವೆ.
- Advertisement -
Leave A Reply