ಗುಜರಾತ್ ಪುರಸಭೆಗಳಲ್ಲೂ ಕಾಂಗ್ರೆಸ್ಸಿಗಿಲ್ಲ ಸ್ಥಾನ, ಬಿಜೆಪಿಗೆ ಭರ್ಜರಿಗೆ ಗೆಲುವು
ಗಾಂಧಿನಗರ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾಂಗ್ರೆಸ್ ಮುಕ್ತ ಭಾರತ ಕನಸು ಕೇವಲ ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಮಾತ್ರ ನನಸಾಗುತ್ತಿಲ್ಲ, ಬದಲಿಗೆ ಹಲವು ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಕಾಂಗ್ರೆಸ್ ಮುಕ್ತವಾಗುತ್ತದೆ.
ಇದಕ್ಕೆ ಉತ್ತರ ಪ್ರದೇಶದ ಬಳಿಕ ಮೋದಿ ತವರು ರಾಜ್ಯ ಗುಜರಾತಿನಲ್ಲೇ ನಿದರ್ಶನ ಸಿಕ್ಕಿದ್ದು, ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ.
ರಾಜ್ಯದ 75 ಪುರಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 47 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿ ತನಗಿರುವ ಪ್ರಾಬಲ್ಯ ಉಳಿಸಿಕೊಂಡರೆ, ಯಥಾಪ್ರಕಾರ ಕಾಂಗ್ರೆ ಸೋತು ಸುಣ್ಣವಾಗಿದೆ.
ಕಾಂಗ್ರೆಸ್ ಕೇವಲ 16 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಗುಜರಾತಿನಲ್ಲಿ ತನಗೆ ಅಸ್ತಿತ್ವ ಇಲ್ಲ ಎಂಬುದನ್ನು ಈ ಚುನಾವಣೆಯಿಂದ ಕಾಂಗ್ರೆಸ್ ಕಲಿಯಬೇಕು ಎಂದೇ ವಿಶ್ಲೇಷಿಸಲಾಗುತ್ತಿದೆ.
75 ಕ್ಷೇತ್ರಗಳಲ್ಲಿ 47ರಲ್ಲಿ ಬಿಜೆಪಿ ಗೆದ್ದರೆ, 16 ಕಾಂಗ್ರೆಸ್, ಬಿಎಸ್ ಪಿ, ಎನ್ ಸಿಪಿ ತಲಾ ಒಂದು; ಸ್ವತಂತ್ರ ಅಭ್ಯರ್ಥಿಗಳು ನಾಲ್ಕರಲ್ಲಿ ಹಾಗೂ ಆರು ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೆ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಉಳಿದಿದೆ.’
ಪ್ರಸ್ತುತ ರಾಜ್ಯಾದ್ಯಂತ ಇರುವ 2060 ಪುರಸಭೆ ಕ್ಷೇತ್ರದಲ್ಲಿ 1167 ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದ್ದರೆ, ಕಾಂಗ್ರೆಸ್ ಕೇವಲ 630ರಲ್ಲಿ ಮಾತ್ರ ಪ್ರಭಾವ ಉಳಿಸಿಕೊಂಡಿದೆ. ಆದಾಗ್ಯೂ ಕಳೆದ ಡಿಸೆಂಬರ್ ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ 99 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ರಾಜ್ಯದ ಅಧಿಕಾರದ ಗದ್ದುಗೆ ಏರಿದೆ. ಈಗ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಮುನ್ನಡೆ ಸಾಧಿಸಿದೆ.
Leave A Reply