ಬಿಜೆಪಿ ಕಾರ್ಯಕರ್ತನ ಹತ್ಯೆ ಮಾಡಿದ ಆರೋಪ ಹೊತ್ತವನಿಗೆ ಹಾರ-ತುರಾಯಿಯ ಸ್ವಾಗತ, ಇದೆಂಥಾ ದಾರಿದ್ರ್ಯ?
ಮೈಸೂರು: ಒಂದೆಡೆ ಕಾಂಗ್ರೆಸ್ ಶಾಸಕನ ಪುತ್ರ ಮೊಹಮ್ಮದ್ ಹ್ಯಾರಿಸ್ ಗೂಂಡಾಗಿರಿ, ಇನ್ನೊಂದೆಡೆ ಕಾಂಗ್ರೆಸ್ ಮುಖಂಡ ನಾರಾಯಣಸ್ವಾಮಿ ದವಲತ್ತಿನಿಂದ ರಾಜ್ಯದಲ್ಲಿ ಸಾಮಾನ್ಯ ಜನರಿಗೆ ನ್ಯಾಯವಿಲ್ಲ ಎಂಬುದು ಸಾಬೀತಾಗುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ ಕಾರ್ಯಕರ್ತನ ಹತ್ಯೆ ಮಾಡಿದ ಆರೋಪದಲ್ಲಿ ಜೈಲಿಗೆ ಹೋಗಿ ಬಂದವನಿಗೆ ಹಾರ ತುರಾಯಿ ಹಾಕಿ ಮೆರವಣಿಗೆ ಮಾಡುವ ಮೂಲಕ ಕೆಲವರು ಬೌದ್ಧಿಕ ದಾರಿದ್ರ್ಯತನ ಮೆರೆದಿದ್ದಾರೆ.
ಹೌದು, ಮಾರ್ಚ್ 13, 2016ರಲ್ಲಿ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಜು ಎಂಬ ಬಿಜೆಪಿ ಕಾರ್ಯಕರ್ತನನ್ನು ಹತ್ಯೆ ಮಾಡಿದ ಆರೋಪದಲ್ಲಿ ಜೈಲು ಪಾಲಾಗಿದ್ದ ಅಬೀಬ್ ಪಾಷಾ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಆತ ಜೈಲಿನಿಂದ ಹೊರಬರುತ್ತಲೇ ಕೆಲ ಮುಸ್ಲಿಂ ಯುವಕರು ಆತನಿಗೆ ಹಾರ ಹಾಕಿ, ಮೆರವಣಿಗೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಒಬ್ಬ ಕೊಲೆ ಆರೋಪಿಗೆ ಸಮಾಜದಲ್ಲಿ ಈ ಪರಿ ಗೌರವ ನೀಡುತ್ತಿರುವುದು ಯಾಕೆ ಹಾಗೂ ಹೀಗೆ ಗೌರವ ನೀಡುತ್ತಿದ್ದಾರೆ ಎಂಬುದರ ಹಿಂದೆ ಆತ ಹಿಂದೂವನ್ನು ಕೊಲೆ ಮಾಡಿದ ಎಂಬುದೇ ಪ್ರಮುಖ ಕಾರಣ ಎಂದೇ ಹೇಳಲಾಗುತ್ತಿದೆ.
ಈ ಅಬೀಬ್ ಪಾಷಾ ಬಿಜೆಪಿ ಕಾರ್ಯಕರ್ತ ರಾಜು ಸೇರಿ ಮೂರು ಕೊಲೆ ಪ್ರಕರಣದ ಆರೋಪಿಯಾಗಿದ್ದು, ಎಸ್ಡಿಪಿಐ ಸಂಘಟನೆಯ ಕಾರ್ಯಕರ್ತನಾಗಿದ್ದ. ಅಷ್ಟೇ ಅಲ್ಲ, ರಾಜು ಹತ್ಯೆ ನಡೆಸುವ ಮೊದಲು ಈತ ಕೇರಳದ ಸಮುದ್ರ ತೀರದಲ್ಲಿ ನಾಯಿಗಳನ್ನು ಕೊಚ್ಚಿ ಅಭ್ಯಾಸ ಮಾಡಿದ್ದ ಎಂದು ಮೂಲಗಳು ತಿಳಿಸಿವೆ.
ಜಮ್ಮು-ಕಾಶ್ಮೀರದ ಹಿಜ್ಬುಲ್ ಮುಜಾಹಿದ್ದೀನ್ ಸೇರಿ ಹಲವು ಸಂಘಟನೆಗಳಲ್ಲಿ ಒಂದಕ್ಕೆ ಸೇರುವ ಬಯಕೆ ಹೊಂದಿದ್ದ ಈತ ಮೈಸೂರಿನ ಮೂವರು ಬಿಜೆಪಿ ಮುಖಂಡರು, ಉತ್ತರ ಪ್ರದೇಶ ಬಿಜೆಪಿ ಮುಖಂಡ ಕಮಲೇಶ್ ತಿವಾರಿ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದ ಎಂದು ಸಹ ಹೇಳಲಾಗುತ್ತಿದೆ.
ಆದರೆ ಒಬ್ಬ ಕೊಲೆ ಆರೋಪ ಹೊತ್ತಿರುವವ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದರೆ ಮುಖಕ್ಕೆ ಉಗಿಯೋದು ಬಿಟ್ಟು, ಆತನಿಗೆ ಸನ್ಮಾನ ಮಾಡಿ ಮೆರವಣಿಗೆ ಮಾಡಿದ್ದಾರಲ್ಲ, ನಾಳೆ ತಮ್ಮ ಮನೆಯ ಅಣ್ಣನೋ, ತಮ್ಮನನ್ನೋ ಕೊಲೆ ಮಾಡಿ ಬಂದವನನ್ನೂ ಹೀಗೆ ಮಾಡುತ್ತಾರಾ? ಅಷ್ಟಕ್ಕೂ ನಮ್ಮ ಸಮಾಜ ಎಂತಹವರಿಗೆ ಗೌರವ ನೀಡಬೇಕು ಎಂಬುದನ್ನೇ ಕಲಿತಿಲ್ಲವಾ ಎಂಬ ಪ್ರಶ್ನೆಗಳು ಮೂಡುತ್ತಿವೆ.
Leave A Reply