ಅಬ್ಬಬ್ಬ! ಮಂಗಳೂರಿಗೆ ಇಷ್ಟೆಲ್ಲ ಹೆಸರಿದಿಯಾ?..
ಮಂಗಳೂರು ಅನೇಕರ ಕನಸಿನ ನಗರ. ಇಲ್ಲಿ ವಿವಿಧ ದೇಶ, ರಾಜ್ಯ, ಜಿಲ್ಲೆಗಳ ಜನರು ವಾಸಿಸುತಿದ್ದಾರೆ.ಅತ್ಯಂತ ಸುಂದರ, ರಮಣೀಯ ತಾಣ ಮಂಗಳೂರು.. ಇಲ್ಲಿನ ಜನರು ಅತ್ಯಂತ ಸಹೃದಯಿಗಳು ಹೀಗೆಲ್ಲಾ ಮಂಗಳೂರನ್ನ ವರ್ಣಿಸಲಾಗುತ್ತದೆ. ಹೌದು ಈ ವರ್ಣನೆಯಲ್ಲಿ ಯಾವುದೇ ಮೋಸ ಇಲ್ಲ ಯಾಕೆಂದರೆ ನಿಜಕ್ಕೂ ಮಂಗಳೂರು ಸ್ವರ್ಗವಿದ್ದಂತೆ.
ಮಂಗಳೂರು ಮೀನುಗಾರಿಕೆ, ಆಸ್ಪತ್ರೆ, ಬಿಸಿನೆಸ್, ಎಜುಕೇಶನ್ ಹೀಗೆ ಅನೇಕ ವಿಚಾರಗಳಲ್ಲಿ ಎತ್ತಿದ ಕೈ. ಇಷ್ಟಲ್ಲದೇ ವಿವಿಧ ಕಡೆಯಿಂದ ಬರುವ ಜನರನ್ನ ಪ್ರೀತಿಯಿಂದ ಅತಿಥಿ ದೇವೋಭವ ಎಂದು ಒಳಗೆ ಕರೆಯುವ ಪ್ರೀತಿ ತೊರೋ ನಾಡು. ದೇವಸ್ಥಾನ, ಚರ್ಚ್, ಮಸೀದಿಗಳ ಪುಣ್ಯ ಭೂಮಿ ಅಂತ ಕೂಡ ಕರೆಯುತ್ತಾರೆ. ಸಮುದ್ರ, ನದಿಗಳಿಂದ ಅವೃತವಾದ ಪ್ರದೇಶ ಕೂಡ ಹೌದು.
ಇನ್ನು ಇತ್ತಿಚೇಗಷ್ಟೆ ಒಂದು ವರದಿ ಕೂಡ ಮಂಗಳೂರಿಗೆ ಗರಿಮೆ ಅನ್ನುವಂತೆ ಹರಿದಾಡುತಿತ್ತು. ಅದೆನೇಂದರೆ, ಭಾರತದಲ್ಲಿ ಉತ್ತಮ ಜನಜೀವನ ಗುಣ ಮಟ್ಟದ ನಗರವಾಗಿ ಮಂಗಳೂರು ಹೊರ ಹೊಮ್ಮಿದೆ. ಇದರಿಂದ ಮಂಗಳೂರಿನಲ್ಲಿ ಜೀವಿಸುತ್ತಿರುವವರಿಗೆ ಒಂದು ಉತ್ತಮ ನಗರದಲ್ಲಿ ವಾಸಿಸುತಿದ್ದೇವೆ ಅನ್ನೋ ಖುಷಿ ಕೂಡ ಇದೆ.ಇಷ್ಟೆಲ್ಲ ಗುಣ ಲಕ್ಷಣವನ್ನ ಹೊಂದಿರುವ ಮಂಗಳೂರಿಗೆ ಹಲವು ಹೆಸರುಗಳಿವೆ, ಅದು ಕೂಡ ಏಳು ಭಾಷೆಯಲ್ಲಿ? ಹೌದು ಮಂಗಳೂರಿಗೆ ಹಲವು ಹೆಸರುಗಳನ್ನು ಬೇರೆ ಬೇರೆ ಭಾಷೆಯಲ್ಲಿ ಕರೆಯಲಾಗುತ್ತೆ. ಈಗಲೂ ಕೂಡ ಅದು ರೂಢಿಯಲ್ಲಿದೆ. ಇಲ್ಲಿದೆ ನೋಡಿ ಅದರ ಬಗ್ಗೆ ಒಂದು ನೋಟ.
ಕನ್ನಡದಲ್ಲಿ ಮಂಗಳೂರು ಅಂತ ಕರೆದರೆ, ತುಳು ಭಾಷೆಯಲ್ಲಿ ಕುಡ್ಲ ಎಂದು ಕರೆಯಲಾಗುತ್ತೆ. ಇನ್ನೂ ಕೊಂಕಣಿಯಲ್ಲಿ ಕೊಡಿಯಾಲ್ ಎಂದು ಕರೆಯುವುದು ವಾಡಿಕೆ, ಇನ್ನು ಬ್ಯಾರಿ ಭಾಷೆಯಲ್ಲಿ ಮೈಕಲ ಎಂದು ಕರೆದರೆ, ಕೇರಳದ ಮಾಲಯಾಳಂ ಭಾಷೆಯಲ್ಲಿ ಮಂಗಲಪುರಂ ಅಂತಾ ಕರೆಯುತ್ತಾರೆ. ಬ್ರಾಹ್ಮಣರ ಹವ್ಯಾಕ ಭಾಷೆಯಲ್ಲಿ ಕೊಡೆಯಾಲ ಎನ್ನುತ್ತಾರೆ, ಸಂಸ್ಕೃತದಲ್ಲಿ ಮಂಜರುನ್ ಎಂದು ಕರೆದರೆ. ಇಂಗ್ಲೀಷ್ ಭಾಷೆಯಲ್ಲಿ ಮ್ಯಾಂಗ್ಳೂರ್ ಎಂದು ಹೇಳಾಲಾಗುತ್ತೆ.
ಇಷ್ಟೆಲ್ಲ ಹೆಸರು ಮಂಗಳೂರಿಗೆ ಇದೆ ಅಂತಾ ಶಾಕ್ ಆಯ್ತಾ.. ಶಾಕ್ ಅಗ್ಲೇ ಬೇಕು ಅಂತಾ ತಾನೇ ಹೇಳಿದ್ದು. ಇನ್ಮುಂದೆ ನಾವು ಈ ವಿವಿಧ ಹೆಸರುಗಳನ್ನ ಉಪಯೋಗಿಸುವ ಮೂಲಕ ಮುಂದಿನ ಪೀಳಿಗೆಗೆ ಮಂಗಳೂರಿನ ಈ ಹೆಸರುಗಳು ನೆನಪಿನಲ್ಲಿಡುವಂತಾಗಲಿ.
ಕಿರಣ್ ದೊಂಡೋಲೆ
1 Comment
ಚರಿತ್ರ ಪುಸ್ತಕಗಳನ್ನು ನೋಡಿದರೆ ಅರಬಿಕ್ ಬಾಷೆಯಲ್ಲಿ ಮಂಜರೂರ್ ಎಂದು ಕೂಡಾ ಕರೆಯಲ್ಪಟ್ಟಿದೆ ಎಂದು ಗೊತ್ತಾಗುತ್ತದೆ!