ಸಿದ್ದರಾಮಯ್ಯನವರೇ ನೋಡಿ ಯೋಗಿ ಏಟಿಗೆ ‘ನಾನಿನ್ನು ಕ್ರೈಮ್ ಮಾಡಲ್ಲ’ ಎಂದು ಶರಣಾಗುತ್ತಿದ್ದಾರೆ ಆರೋಪಿಗಳು
ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದಾಗಿನಿಂದ ಅಪರಾಧ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಹಲವು ಎನ್ ಕೌಂಟರ್ ಗಳನ್ನು ಮಾಡುವ ಮೂಲಕ ಸಮಾಜಘಾತುಕರಿಗೆ ಕಂಟಕವಾಗಿದ್ದಾರೆ. ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ ಸಮಾಜಘಾತುಕರನ್ನು ಸದೆಬಡೆಯುವ ಕಾರ್ಯಕ್ಕೆ ಮುಂದಾಗಿರುವುದರಿಂದ ಕೊಲೆ, ಸುಲಿಗೆ, ದರೋಡೆಕೋರರೇ ಬಂದು ಜೈಲಿಗೆ ಶರಣಾಗುತ್ತಿದ್ದಾರೆ.
ಪಶ್ಚಿಮ ಉತ್ತರ ಪ್ರದೇಶದ ಶಮ್ಲಿ ಜಿಲ್ಲೆಯ ಜಿಂಜಾನ್ ಪೊಲೀಸ್ ಠಾಣೆಯಲ್ಲಿ ಕೊಲೆ ಆರೋಪಿಯೊಬ್ಬ ಶರಣನಾಗಿದ್ದಾನೆ. ಎನ್ ಕೌಂಟರ್ ಭೀತಿಯಿಂದ ಶರಣನಾಗಿದ್ದಲ್ಲದೆ ನಾನ್ನಿನ್ನು ಮುಂದೆ ಯಾವುದೇ ತರಹದ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಪೊಲೀಸರ ಕೈ ಮುಗಿದು ಬೇಡಿಕೊಂಡಿದ್ದಾನೆ.
ಅಪರಾಧ ಮಾಡಿದ ನಂತರ ನಾನು ತಲೆ ಮರೆಸಿಕೊಂಡಿದ್ದೇನೆ. ನನಗೀಗ ಎನ್ ಕೌಂಟರ್ ನಲ್ಲಿ ಕೊಲೆಯಾಗುವ ಭೀತಿ ಎದುರಾಗಿದೆ. ಆದ್ದರಿಂದ ಶರಣಾಗುತ್ತಿದ್ದೇನೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದ್ದಾನೆ. ಶಮ್ಲಿ ಜಿಲ್ಲೆಯೊಂದರಲ್ಲೇ 12ಕ್ಕಿಂತ ಹೆಚ್ಚಿನ ಸಮಾಜಘಾತುಕರು ಪೊಲೀಸರಿಗೆ ಶರಣಾಗಿದ್ದು, ಇನ್ನು ಮುಂದೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿವುದಿಲ್ಲ ಎಂದು ತಪ್ಪೊಪ್ಪಿಗೆ ಬರೆದುಕೊಟ್ಟಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಹತೋಟಿಗೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯೋಗಿ ಆದಿತ್ಯನಾಥ್ ಮಾದರಿಯನ್ನು ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೇ ರಾಜ್ಯದಲ್ಲಿ ಕಾಂಗ್ರೆಸ್ ಪೋಷಿತ ಗುಂಡಾಗಳ ಅಟ್ಟಹಾಸ ಮಿತಿ ಮೀರಲಿದೆ.
Leave A Reply