ಹಿಂದೂ ಹೃದಯ ಸಾಮ್ರಾಟ ಶಿವಾಜಿ ಚಿತ್ರ ರಾಷ್ಟ್ರಪತಿ ಭವನದಲ್ಲಿ ಅಳವಡಿಸಲು ನಿರ್ಧಾರ
ದೆಹಲಿ: ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ರಾಷ್ಟ್ರಪತಿ ಭವನದಲ್ಲಿ ಅಳವಡಿಸಲು ರಾಷ್ಟ್ರಪತಿ ರಾಮನಾಥ ಕೋವಿಂದ ನಿರ್ಧರಿಸಿದ್ದಾರೆ. ಭಾರತದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ರಾಷ್ಟ್ರಪತಿ ಭವನದಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ.
ಫೆ.19ರಂದು ದೆಹಲಿಯಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನಾಚರಣೆಯಲ್ಲಿ ಭಾಗಿಯಾಗಿದ್ದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ ಅವರಿಗೆ ಮಹಾರಾಷ್ಟ್ರದ ಸಂಸದ ಸಂಭಾಜಿ ಛತ್ರಪತಿ ಅವರು ಶಿವಾಜಿ ಮಹಾರಾಜರ್ ಪೇಂಟಿಗ್ ಮಾಡಿರುವ ಘನತೆ, ಘಾಂಭೀರ್ಯದಿಂದ ಕೂಡಿದ ಭಾವಚಿತ್ರವನ್ನು ಕೊಡುಗೆ ನೀಡಿದ್ದಾರೆ.
ಭಾವಚಿತ್ರವನ್ನು ಸ್ವೀಕರಿಸಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ರಾಷ್ಟ್ರಪತಿ ಭವನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ಅಳವಡಿಸುವ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಹಿಂದೂ, ಹಿಂದೂತ್ವದ ರಕ್ಷಣೆಗಾಗಿ ಹೋರಾಡಿದ ಮಹಾನ್ ಚೇತನ, ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ರಾಷ್ಟ್ರಪತಿ ಭವನದಲ್ಲಿ ಅಳವಡಿಸಲು ಮುಂದಾಗಿರುವುದು ಭಾರತದ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದಿದೆ.
Leave A Reply