ಕಂಬಳ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಕ್ಕೆ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಏನ್ ಹೇಳಿದ್ರು ಗೊತ್ತಾ?
ದೆಹಲಿ: ಪ್ರಾಣಿ ದಯಾ ಸಂಘ ಸೇರಿ ಹಲವು ಸಂಘಟನೆಗಳು, ಹಲವು ಎಡಬಿಡಂಗಿ ಬುದ್ಧಿಜೀವಿಗಳು ಕರ್ನಾಟಕದ, ಅದರಲ್ಲೂ ಕರಾವಳಿ ಭಾಗದಲ್ಲಿ ಪ್ರಾಬಲ್ಯ ಸಾಧಿಸಿರುವ, ಸಂಸ್ಕೃತಿಯ ಪ್ರತಿಬಿಂಬವಾಗಿರುವ ಕಂಬಳಕ್ಕೆ ಎಷ್ಟೇ ಅಡ್ಡಗಾಲು ಹಾಕಿದರೂ ಪ್ರಸ್ತುತ ಕಂಬಳ ಏರ್ಪಡಿಸಲು ರಾಷ್ಟ್ರಪತಿ ಅಂಕಿತ ಸಿಕ್ಕಿದೆ.
ಈ ಸಂಗತಿ ಕರಾವಳಿ ಸೇರಿ ರಾಜ್ಯದ ಎಲ್ಲ ಜನರಿಗೂ ಸಂತಸವಾಗಿದ್ದು, ಕಂಬಳ ವಿಧೇಯಕಕ್ಕೆ ರಾಷ್ಟ್ರಪತಿಯವರು ಸಹಿ ಹಾಕಿದ್ದು, ಇನ್ನು ಮುಂದೆ ಕಂಬಳಕ್ಕೆ ಯಾರೂ ಅಡ್ಡಿ ಹಾಗೂ ಕಡ್ಡಿ ಹಾಕುವಂತಿಲ್ಲ.
ಇಂತಹ ಖುಷಿಯ ಸಂಗತಿಯ ಜತೆಗೆ ಮತ್ತೊಂದು ಸಂತಸದ ವಿಚಾರ ಹೊರಬಿದ್ದಿದ್ದು, ಕರ್ನಾಟಕದ ಕಂಬಳಕ್ಕೆ ರಾಷ್ಟ್ರಪತಿಯವರು ಹಸಿರು ನಿಶಾನೆ ತೋರಿರುವ ಕ್ರಮವನ್ನು ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಹ ಸಂತಸ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಕ್ರೀಡೆಗಳನ್ನು ನಾವು ರಕ್ಷಿಸಲೇಬೇಕು. ಅವುಗಳ ಅಸ್ತಿತ್ವ ಹಾಗೂ ಗ್ರಾಮೀಣ ಯುವಕರು ಚೈತನ್ಯದಿಂದ ಇರಲು ಗ್ರಾಮೀಣ ಕ್ರೀಡೆಗಳು ಸಹಕಾರಿ. ಈ ದಿಸೆಯಲ್ಲಿ ಕರ್ನಾಟಕದ ಗ್ರಾಮೀಣ ಸೊಗಡಾದ ಕಂಬಳಕ್ಕೆ ರಾಷ್ಟ್ರಪತಿಯವರು ಸಹಿ ಹಾಕಿರುವುದು ಸಂತಸ ತಂದಿದೆ ಎಂದು ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ಅಷ್ಟೇ ಅಲ್ಲ, ಕೆಲವು ಕಪಟಿಗಳು ಗ್ರಾಮೀಣ ಕ್ರೀಡೆಗೆ ಅಡ್ಡಗಾಲು ಹಾಕಲು ಮುಂದಾದವು. ಆದರೆ ಕೊನೆಗೆ ಗ್ರಾಮೀಣ ಕ್ರೀಡೆಗಳಿಗೇ ಜಯ ಸಿಕ್ಕಂತಾಗಿರುವುದು ಖುಷಿಯ ವಿಚಾರ ಎಂದು ಡ್ಯಾಷಿಂಗ್ ಓಪನರ್ ಎಂದೇ ಖ್ಯಾತರಾಗಿದ್ದ ವೀರೂ ಟ್ವೀಟ್ ಮಾಡುವ ಮೂಲಕ ಕರ್ನಾಟಕದ ಕಂಬಳವನ್ನು ಬೆಂಬಲಿಸಿದ್ದಾರೆ.
Leave A Reply