ಜಿಲ್ಲಾ ಮಟ್ಟದ ಆಟಗಾರನಲ್ಲದ ರಾಜೀವ್ ಗಾಂಧಿ ಹೆಸರಿನಲ್ಲೇಕೆ ಖೇಲ್ ರತ್ನ ಪ್ರಶಸ್ತಿ?
ದೆಹಲಿ: ಭಾರತವನ್ನು 60 ವರ್ಷ ಆಡಳಿತ ನಡೆಸಿರುವ ನೆಹರು ಗಾಂಧಿ ಕುಟುಂಬ ಸರ್ಕಾರದ ಎಲ್ಲ ಯೋಜನೆಗಳಿಗೆ ತಮ್ಮ ಮನೆಯವರ ಹೆಸರುಗಳನ್ನು ಇಟ್ಟುಕೊಂಡು ಅಧಿಕಾರದ ಮೆರೆಯುತ್ತಿದ್ದರು. ದೇಶದ ಶ್ರೇಷ್ಠ ಪ್ರಶಸ್ತಿಗಳಿಂದ ಹಿಡಿದು ಇಂದಿನ ಇಂದಿರಾ ಕ್ಯಾಂಟಿನ್ ವರೆಗೂ ಅದೇ ಮಾತು ನೆಹರು ಕುಟುಂಬದವರದ್ದೆ ಹೆಸರು. ಅವರ ಕುಟುಂಬ ದೇಶಕ್ಕೆ ನೀಡಿದ್ದು ಹೆಸರುಗಳನ್ನು ಮಾತ್ರ ಎಂಬುದು ಬೇರೆ ಮಾತು.
ದೇಶದ ಕ್ರೀಡಾಕ್ಷೇತ್ರದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರಿನ ಬಗ್ಗೆ ಬಿಜೆಪಿ ಮುಖಂಡ ಉಪಾಧ್ಯಯ ಮಹತ್ವದ ಪ್ರಶ್ನೆಯೊಂದನ್ನು ಎತ್ತಿದ್ದಾರೆ. ಜಿಲ್ಲಾ ಮಟ್ಟದ ಆಟಗಾರನೂ ಅಲ್ಲದ, ಕ್ರೀಡಾ ಕ್ಷೇತ್ರಕ್ಕೆ ಯಾವುದೇ ಮಹತ್ವದ ಕೊಡುಗೆ ನೀಡದ ರಾಜೀವ್ ಗಾಂಧಿ ಹೆಸರಿನಲ್ಲಿ ದೇಶದ ಅತ್ಯುನ್ನತ ಕ್ರೀಡಾ ಪುರಸ್ಕಾರವನ್ನು ನೀಡಬೇಕು ಎಂದು ಪ್ರಶ್ನಿಸಿದ್ದಾರೆ.
ಒಂದು ವೇಳೆ ಪ್ರಶಸ್ತಿ ನೀಡುವುದೇ ಆದರೆ ಕ್ರೀಡೆ ಮೂಲಕ ದೇಶ ವಿದೇಶಗಳಲ್ಲಿ ಭಾರತದ ಕೀರ್ತಿಯನ್ನು ಮೆರೆಸಿದ, ಹಾಕಿ ಕ್ರೀಡಾಪಟು ಮೇಜರ್ ಧ್ಯಾನಚಂದ್ ಅವರ ಹೆಸರಿನಲ್ಲಿ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಕೇವಲ ಆಡಳಿತ ನಡೆಸಿದ ಕುಟುಂಬದವರ ಹೆಸರಿನಲ್ಲಿ ಪ್ರಶಸ್ತಿ ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಕ್ರೀಡಾಪಟುವಲ್ಲದ ವ್ಯಕ್ತಿಯ ಹೆಸರಿನಿಂದ ದೇಶದ ಕ್ರೀಡಾ ಕ್ಷೇತ್ರ ಸಾಧಕರಿಗೆ ಸನ್ಮಾನ, ಪ್ರಶಸ್ತಿ ನೀಡುವುದು ಕ್ರೀಡಾಪಟುಗಳಿಗೆ ಅವಮಾನ ಮಾಡಿದಂತೆ. ಆ ಪ್ರಶಸ್ತಿಗೆ ಘನತೆ ಬರುವಂತವರ ನಾಮಕರಣ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
देश के सर्वश्रेष्ठ खिलाड़ियों को प्रतिवर्ष राजीव गांधी खेल रत्न पुरस्कार दिया जाता है लेकिन आजतक यह नहीं पता चला कि राजीवजी जिलास्तर के खिलाड़ी थे या प्रदेशस्तर के! यह राष्ट्रीय स्तर के खिलाड़ियों का सम्मान है या अपमान? सर्वश्रेष्ठ खेल पुरस्कार तो ध्यानचंदजी के नाम पर होना चाहिये
— Ashwini Upadhyay (@AshwiniBJP) February 21, 2018
Leave A Reply