• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಅಭ್ಯರ್ಥಿಗಳ ತೇಜೋವಧೆ ಮಾಡಲು ಸಿದ್ಧತೆ ನಡೆಯುತ್ತಿದೆ, ಎಚ್ಚರ!!

Hanumantha Kamath Posted On February 22, 2018


  • Share On Facebook
  • Tweet It

ರಾಜ್ಯ ವಿಧಾನಸಭೆಗೆ ಚುನಾವಣೆ ಹತ್ತಿರ ಬರುತ್ತಿದೆ. ಹೆಚ್ಚೆಂದರೆ ಎರಡು ತಿಂಗಳು ಮತ್ತು ಬೆರಳೆಣಿಕೆಯ ದಿನಗಳು. ಚುನಾವಣೆ ನೀತಿ ಸಂಹಿತೆ ಬರುವ ಮೊದಲೇ ಜನರನ್ನು ಸೆಳೆಯಲು ಏನಾದರೂ ಮಾಡಬೇಕು ಎಂದು ಕೆಲವು ಶಾಸಕರು, ಟಿಕೆಟ್ ಅಕಾಂಕ್ಷಿಗಳು ಈಗಲೇ ತಮ್ಮ ಕೈ ಮೀರಿ ಜನರಿಗೆ ಆಮಿಷ ಕೊಡುವ ಕೆಲಸ ಮಾಡುತ್ತಿದ್ದಾರೆ.

ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯ್ದೀನ್ ಬಾವ ತಮ್ಮ ಕ್ಷೇತ್ರದಲ್ಲಿ ಸೀರೆ ಹಂಚುವ ಫೋಟೋ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಸೀರೆ ಹಂಚುವುದು, ಅಕ್ಕಿ ವಿತರಿಸುವುದು ಅದು ಇದು ಕೊಡುವುದು ಎಲ್ಲಾ ಕಾಮನ್. ಯಾವುದೋ ಒಂದು ಕ್ಷೇತ್ರದ ಶಾಸಕ ತನ್ನ ಮತದಾರರನ್ನು ನಾಡಿನ ಪ್ರಖ್ಯಾತ ದೇವಸ್ಥಾನಕ್ಕೆ ಟೂರ್ ಕರೆದುಕೊಂಡ ಎನ್ನುವ ಸುದ್ದಿಯೂ ಇದೆ. ಈ ಅಮಿಷಗಳು ಇವತ್ತು ನಿನ್ನೆಯದ್ದಲ್ಲ. ಚುನಾವಣೆಗಳು ಇಂತಹು ಇಲ್ಲದೆ ನಡೆದದ್ದೇ ಕಡಿಮೆ. ಇದನ್ನು ಚುನಾವಣಾ ಆಯೋಗಗಳು ಗಮನಿಸುತ್ತಾ ಇರುತ್ತವೆ. ಆದರೆ ಇದಕ್ಕಿಂತಲೂ ಒಂದು ಮುಷ್ಟಿ ಹೆಚ್ಚೆ ಅಸಹ್ಯ ಎನಿಸುವಂತದ್ದು ಇನ್ನು ಕೊನೆಯ ಐವತ್ತು ದಿನಗಳಲ್ಲಿ ನಡೆಯಲಿರುವ ಮುನ್ಸೂಚನೆ ಸಿಗುತ್ತಿದೆ.

ವಿಡಿಯೋ ಎಡಿಟಿಂಗ್ ಮಾಡಿ ಕಾಮಕೇಳಿ…

ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಕನಿಷ್ಟ ಮೂರ್ನಾಕು ಜನ ಟಿಕೆಟ್ ಅಕಾಂಕ್ಷಿಗಳು ಇದ್ದೇ ಇರುತ್ತಾರೆ. ಈ ಬಾರಿ ಅಕಾಂಕ್ಷಿಗಳ ಪಟ್ಟಿ ಜಾಸ್ತಿ ಯಾಕಿದೆ ಎಂದರೆ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಎನ್ನುವ ಗ್ಯಾರಂಟಿ ಹೆಚ್ಚಿರುವುದರಿಂದ ಪ್ರತಿಯೊಬ್ಬರಿಗೂ ಶಾಸಕನಾಗುವ ಆಸೆ. ಆಕಾಂಕ್ಷೆ ಇರುವುದು ತಪ್ಪಲ್ಲ. ಆದರೆ ಆಕಾಂಕ್ಷೆ ಇನ್ನೊಬ್ಬರನ್ನು ಸುಟ್ಟು ತಾನು ಬೆಳಗಬೇಕು ಎನ್ನುವುದು ಇರಬಾರದು, ಅಷ್ಟೇ.

ಪರಸ್ಪರ ವಿರೋಧ ಪಕ್ಷಗಳಲ್ಲಿರುವ ನಾಯಕರು ಅವರ ಬೆಂಬಲಿಗರು ಕೂಡ ನಾವು ದಕ್ಷಿಣ ಕನ್ನಡ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಎನ್ನುವುದನ್ನು ಮೊದಲು ನೆನಪಿಡಬೇಕು. ಒಂದು ವೇಳೆ ಅದಕ್ಕೆ ಪೆಟ್ಟಾದರೆ ನಂತರ ನೀವು ಯಾವ ಪಕ್ಷದವರೇ ಆಗಲಿ ಹೋದ ಮರ್ಯಾದೆ ಮತ್ತೆ ಬರುವುದಿಲ್ಲ. ನಾವು ಬೇಕಾದರೆ ಬೇರೆ ಪಕ್ಷದ ಅಭ್ಯರ್ಥಿಗಳ ಸಿದ್ಧಾಂತ, ಅವರು ಮಾಡಿದ ಯೋಜನೆಗಳ ವೈಫಲ್ಯ, ಅವರ ಇಚ್ಚಾಶಕ್ತಿಯ ಕೊರತೆ ಇದೆಲ್ಲದರ ಬಗ್ಗೆ ಚರ್ಚಿಸೋಣ. ಆದರೆ ಅವರ ವೈಯಕ್ತಿಕ ಜೀವನದ ಬಗ್ಗೆ ಮತ್ತು ಅದಕ್ಕಿಂತ ಹೆಚ್ಚಾಗಿ ಒಂದು ಗಂಡು, ಹೆಣ್ಣನ್ನು ಕೀಳಾಗಿ ಚಿತ್ರಿಸುವುದು, ಅವರ ಸಂಬಂಧವನ್ನು ಅಸಹ್ಯವಾಗಿ ಬಿಂಬಿಸಲು ಹೋಗುವುದು ಸರಿಯಲ್ಲ. ಒಂದು ಪಕ್ಷದ ಅಭ್ಯರ್ಥಿಯ ವರ್ಚಸ್ಸು ಮತ್ತು ಆತನ ಪಕ್ಷದ ಸಿದ್ಧಾಂತ, ಯೋಜನೆಗಳ ಬಗ್ಗೆ ಮಾತನಾಡೋಣ, ಆದರೆ ಅವನನ್ನು ಕೀಳಾಗಿ ಚಿತ್ರಿಸುವ ಮೂಲಕ ಮತದಾರರಿಗೆ ಅವನ ಬಗ್ಗೆ ಅಸಹ್ಯ ಭರಿಸುವ ನೆಪದಲ್ಲಿ ನಾವು ನಮ್ಮ ಊರಿನ ಮರ್ಯಾದೆಯನ್ನು ಕೂಡ ಹಾಳುಗೆಡವುತ್ತೇವೆ. ನೋಡ್ರಿ, ಮಂಗಳೂರಿನ ಬಿ ಪಕ್ಷದ ಅಭ್ಯರ್ಥಿ ಆ ಯುವತಿಯೊಂದಿಗೆ ಮಲಗಿದ ಫೋಟೊ, ವಿಡಿಯೋ ವಾಟಾಪ್ ನಲ್ಲಿ ಬಂದಿದೆ ನೋಡಿ ಎಂದು ಬೇರೆ ಜಿಲ್ಲೆಯ ಜನ ಮಾತನಾಡುವಂತೆ ಆಗಬಾರದು. ಕೆಲವು ವ್ಯಕ್ತಿಗಳು ಹೀಗೆ ಮಾಡುವುದಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿರುವಂತೆ ಕಾಣುತ್ತಿದೆ. ಒಂದು ಅಭ್ಯರ್ಥಿಯ ಮುಖವನ್ನು ವಿಡಿಯೋ ಎಡಿಟಿಂಗ್ ಮಾಡಿ ಕಾಮಕೇಳಿಯಲ್ಲಿ ಇರುವಂತೆ ಚಿತ್ರೀಕರಿಸುವ ಮೂಲಕ ಅವನನ್ನು ರಾಜಕೀಯವಾಗಿ ಮುಗಿಸಲು ಕೆಲವರು ಸಂಚು ಹೂಡಬಹುದು. ಒಂದು ಕ್ಷೇತ್ರದಲ್ಲಿ ಒಂದು ಪಕ್ಷದಿಂದ ಎಷ್ಟೇ ಅಕಾಂಕ್ಷಿಗಳು ಇರಲಿ, ಪಕ್ಷದ ಮುಖಂಡರು ಯಾರಿಗೆ ಟಿಕೆಟ್ ಕೊಟ್ಟರೂ ಎಲ್ಲರೂ ಒಟ್ಟಿಗೆ ದುಡಿದು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ನಿರ್ಧಾರ ಮಾಡಬೇಕೆ ವಿನ: ಅವನು ಗೆದ್ದು ಶಾಸಕನಾದರೆ ನನ್ನ ರಾಜಕೀಯ ಮುಗಿಯಿತು ಎಂದು ಹೇಳಿ ಕೀಳು ಮಟ್ಟಕ್ಕೆ ಇಳಿಯಬಾರದು. ಅಷ್ಟೇ ಅಲ್ಲ, ಒಬ್ಬ ಅಭ್ಯರ್ಥಿಗೆ ಅವನ ಹಿತೈಷಿ ಸಾಮಾಜಿಕ ತಾಣಗಳಲ್ಲಿ ಪ್ರಚಾರ ಕೊಡುತ್ತಿದ್ದಾನೆ ಎಂದು ಗೊತ್ತಾದಾಗ ಅವನನ್ನು ಹೀಯಾಳಿಸಿ, ತೇಜೋವಧೆ ಮಾಡುವ ಕೆಲಸ ಕೂಡ ಮಾಡಬಾರದು.

ವೈಯಕ್ತಿಕ ವಿಷಯ ಈ ಬಾರಿ ಬೇಡಾ..

ಬೇಕಾದರೆ ಶಾಸಕ ಮೊಯ್ದೀನ್ ಬಾವ ಅವರ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಅವರು ಕಳಪೆ ಕಾಮಗಾರಿಗಳನ್ನು ಮಾಡಿಸಿದಾಗ, ಯೋಜನೆಗಳಲ್ಲಿ ಅವ್ಯವಹಾರ ಮಾಡಿದಾಗ ಅವರನ್ನು ಅತೀ ಹೆಚ್ಚು ಟೀಕಿಸಿ ಬರೆದವರಲ್ಲಿ ನಾನೂ ಒಬ್ಬ. ಹಾಗಂತ ಅವರ ವೈಯಕ್ತಿಕ ವಿಚಾರಗಳನ್ನು ಕೆದಕಿ ತೇಜೋವಧೆ ಮಾಡುವಂತಹ ಅಸಭ್ಯ ಕೆಲಸಕ್ಕೆ ಕೈ ಹಾಕಿಲ್ಲ.

ಇತ್ತೀಚೆಗೆ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ ಅವಳಿಗೂ ಮೊಯ್ದೀನ್ ಬಾವರಿಗೂ ಕೆಟ್ಟ ಸಂಬಂಧವನ್ನು ಜೋಡಿಸುವ ಕೆಲಸ ಕೆಲವರು ಮಾಡಿದರು. ಬೇಕಾದರೆ ನಾನು ಕೂಡ ಆ ಬಗ್ಗೆ ಬರೆಯಬಹುದಿತ್ತು. ಆದರೆ ನಾನು ಹಾಗೆ ಮಾಡಲು ಹೋಗಿಲ್ಲ. ಯಾಕೆಂದರೆ ಅದು ನಮ್ಮ ಸಂಸ್ಕೃತಿ ಅಲ್ಲ. ಪ್ರತಿಭಾ ಕುಳಾಯಿ ಮತ್ತು ಮೊಯ್ದೀನ್ ಬಾವ ಅವರ ಬಗ್ಗೆ ಬರೆದು ನಾವು ಯಾರನ್ನು ಮೆಚ್ಚಿಸಲು ಹೋಗುತ್ತೆವೆಯೋ ಕೊನೆಗೆ ಅವರ ವಿಶ್ವಾಸವನ್ನು ಕೂಡ ಕಳೆದುಕೊಂಡಿರುತ್ತೇವೆ. ಅದು ಗೊತ್ತಿಲ್ಲದೆ ಆ ಕ್ಷಣಕ್ಕೆ ಹಲವರು ಹಾಗೆ ಬರೆದು ತಮ್ಮ ತೆವಲು ತೀರಿಸಿಕೊಂಡಿರುತ್ತಾರೆ. ಚುನಾವಣೆಗಳು ನಾವು ಮೊದಲ ಬಾರಿ ಮತದಾನ ಹಾಕಿದ ಸಮಯದಿಂದ ಹಿಡಿದು ಕೊನೆಯ ಬಾರಿ ಹಾಕಿದ ನಡುವೆ ಎಷ್ಟೋ ಬಾರಿ ಬಂದಿರುತ್ತವೆ. ಆದರೆ ಒಮ್ಮೆ ತೇಜೊವಧೆ ಮಾಡಿದ್ದು ಮುಂದಿನ ಬಾರಿ ನೆನಪಿನಲ್ಲಿ ಇರುತ್ತೋ ಇಲ್ವೋ, ಆದರೆ ಮಾಡಿದ ವ್ಯಕ್ತಿ ಮಾತ್ರ ತಾನು ಪಶ್ಚಾತ್ತಾಪ ಪಟ್ಟಿರುತ್ತಾನೆ. ಹಾಗಂತ ತಾನು ಮಾಡಿದ್ದು ಸರಿಯಲ್ಲ ಎಂದು ಹೇಳಲು ಆಗುವುದಿಲ್ಲ. ಹೇಳದಿದ್ದರೂ ಪಕ್ಷ ಮತ್ತು ಜನ ಅವನನ್ನು ತಿರಸ್ಕರಿಸಿರುತ್ತಾರೆ.

ಕೆಲವರು ಇದನ್ನು ಈಗಲೇ ಅನುಭವಿಸಿದ್ದಾರೆ. ಅವರಿಗೆ ಪಕ್ಷ ಎಲ್ಲವೂ ಕೊಟ್ಟರೂ ತಾಳ್ಮೆ ಇಲ್ಲದೆ ಬೇರೆಯವರ ತೇಜೋವಧೆಗೆ ಹೋಗಿ ಸಿಕ್ಕಿಬಿದ್ದು ಪಕ್ಷದ ಕಾರ್ಯಕರ್ತರ ಮಟ್ಟದಲ್ಲಿ ಮುಖಕ್ಕೆ ಮಸಿ ಬಳಿದುಕೊಂಡಿದ್ದಾರೆ. ತಾನು ಶಾಸಕನಾಗುವುದೂ ಒಂದೇ, ಅವನು ಶಾಸಕನಾಗುವುದು ಒಂದೇ, ಎಂದು ಎಂದುಕೊಂಡು ಪಕ್ಷಕ್ಕೆ ದುಡಿದರೆ ಪಕ್ಷ ನಿಮಗೆ ಎಲ್ಲಿ ಕರೆದುಕೊಂಡು ಹೋಗಬೇಕೋ ಅಲ್ಲಿ ಕರೆದುಕೊಂಡು ಹೋಗುತ್ತದೆ. ಅದು ಬಿಟ್ಟು ಅವರ ವೈಯಕ್ತಿಕ ವಿಚಾರ, ಸಾಂಸಾರಿಕ ವಿಚಾರ, ಯಾವುದೋ ಕೇಸಿನ ವಿಚಾರ ತೆಗೆದುಕೊಂಡು ಹೊರಟರೆ ಅದು ಇಡೀ ಪಕ್ಷಕ್ಕೆ ಆಗುವ ನಷ್ಟ. ಹಾಗೆ ಮಾಡುವ ಮೂಲಕ ನಾವು ಪಕ್ಷದ್ರೋಹ ಮಾಡಿದಂತೆ ಆಗುತ್ತದೆ!

  • Share On Facebook
  • Tweet It


- Advertisement -


Trending Now
ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
Hanumantha Kamath September 22, 2023
ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
Hanumantha Kamath September 15, 2023
Leave A Reply

  • Recent Posts

    • ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
    • ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
    • ಅಂದು ಸಿದ್ದು, ಇಂದು ಹರಿ!
    • ಆ ನಿರೂಪಕ ಇದ್ದರೆ ಬರಲ್ಲ ಎನ್ನುವುದು ಶೂರತನವೇ?
    • ಏನಂತ ಚೈತ್ರಾಳಿಗೆ ಅಷ್ಟು ಹಣ ಕೊಟ್ರು ಪೂಜಾರಿ!?
    • ಉತ್ತರಖಂಡದ ಮದರಸಾಗಳಲ್ಲಿ ಇನ್ನು ಸಂಸ್ಕೃತ ಶಿಕ್ಷಣ
    • ಭಾರತ್ ಮಾತಾ ಕೀ ಜೈ ಎಂದು ಮೀಡಿಯಾ ಸೆಂಟರ್ ನಲ್ಲಿ ಉದ್ಘೋಷಣೆ!
    • ಈ ಬಾರಿ ಮಹಿಷ ದಸರಾ ಯಾಕೆ ನಡೆಯಬೇಕು!
    • ಸೌದಿಗೆ ಇಂಧನ ಶಕ್ತಿ ತುಂಬಲಿರುವ ಭಾರತ!
    • ಚೈತ್ರಾ ಕುಂದಾಪುರ ಬಂಧನದ ಹಿಂದಿನ ಕಥೆ ಏನು?
  • Popular Posts

    • 1
      ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search