ಪಿಎನ್ ಬಿ ಹಗರಣದ ಕುರಿತು ಮೋದಿ ಉತ್ತರ, ವಿರೋಧಿಗಳು ತತ್ತರ
ದೆಹಲಿ: ದೇಶದಲ್ಲಿ ಯಾವುದೇ ಗಲಭೆ, ಭ್ರಷ್ಟಾಚಾರ, ದಲಿತರ ಹತ್ಯೆ ಸೇರಿ ಯಾವುದೇ ದುರ್ಘಟನೆ ನಡೆದರೂ, ಆ ರಾಜ್ಯದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಯೇತರ ಪಕ್ಷವಿದ್ದರೂ, ಎಲ್ಲರೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೇ ಆರೋಪ ಮಾಡುತ್ತಾರೆ.
ಅದೇ ರೀತಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲೂ ಪ್ರಧಾನಿ ಮೋದಿ ಅವರ ಹೆಸರನ್ನು ತಳುಕು ಹಾಕಲಾಯಿತು. ಸಾಲ ನೀಡಿದ ಬ್ಯಾಂಕ್ ಯಾವುದೋ, ದೇಶ ಬಿಟ್ಟು ಹೋದ ಖದೀಮ ಉದ್ಯಮಿ ಯಾವನೋ, ಆದರೆ ಆರೋಪ ಹೊತ್ತುಕೊಂಡವರು ಮಾತ್ರ ಮೋದಿ ಅವರು. ಮೋದಿ ಅವರೇ ಭ್ರಷ್ಟಾಚಾರ ಎಸಗಿದ್ದಾರೆ ಎಂಬಷ್ಟರಮಟ್ಟಿಗೆ ರಾಹುಲ್ ಗಾಂಧಿ ಸೇರಿ ಹಲವರು ಆರೋಪಿಸಿದ್ದರು.
ಆದರೆ ಈ ಎಲ್ಲ ಆರೋಪಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತ್ಯುತ್ತರ ನೀಡಿದ್ದು, ‘ಸಾರ್ವಜನಿಕರ ಹಣ ಲೂಟಿ ಮಾಡಲು ಹೊರಟ ಹಾಗೂ ಮಾಡಿದ ಯಾರನ್ನೂ ನಮ್ಮ ಸರ್ಕಾರ ಸಹಿಸುವುದಿಲ್ಲ’ ಎಂದು ಖಂಡತುಂಡವಾಗಿ ವಿವರಿಸಿದ್ದಾರೆ.
“ಆರ್ಥಿಕ ವಹಿವಾಟಿನಲ್ಲಿ ನಿರ್ದಿಷ್ಟತೆ ಇಲ್ಲದ, ಸಾರ್ವಜನಿಕರ ದೋಚಿ ಪರಾರಿಯಾಗುವ ಯಾರನ್ನೂ ನಮ್ಮ ಸರ್ಕಾರ ಸುಮ್ಮನೆ ಬಿಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಯಾವುದೇ ಕಾರಣಕ್ಕೂ ಭ್ರಷ್ಟರನ್ನು ಬಚಾವಾಗುವುದನ್ನು ನಾವು ಬಿಡುವುದಿಲ್ಲ, ಮುಂದೆಯೂ ಇದೇ ರೀತಿ ಇರುತ್ತೇವೆ” ಎಂದು ಎಕನಾಮಿಕ್ಸ್ ಟೈಮ್ಸ್ ಆಯೋಜಿಸಿದ್ದ ಜಾಗತಿಕ ಉದ್ಯಮ ಶೃಂಗದಲ್ಲಿ ಮೋದಿ ಸ್ಪಷ್ಟಪಡಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಸಾಲ ಮಾಡಿ ಪರಾರಿಯಾಗಿರುವ ನೀರವ್ ಮೋದಿ ಪ್ರಕರಣದ ಕುರಿತು ಮೋದಿ ಮಾತನಾಡುತ್ತಿಲ್ಲ ಎಂದು ಬೊಬ್ಬೆ ಹಾಕುತ್ತಿದ್ದವರಿಗೆ ಮೋದಿ ಅವರ ದಿಟ್ಟ ಉತ್ತರ ತತ್ತರ ಮೂಡಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.
Leave A Reply