ಮೊಬೈಲ್ ನೆಟ್ ವರ್ಕ್ ಸಿಗಲ್ಲ ಎಂದು ಐತಿಹಾಸಿಕ ಜೈಲುಗಳನ್ನೇ ಸ್ಥಳಾಂತರಿಸಲು ಹೊರಟ ಮಮತಾ ಬ್ಯಾನರ್ಜಿ!
ಕೋಲ್ಕತ್ತಾ: ಈ ಮಮತಾ ಬ್ಯಾನರ್ಜಿಯವರಿಗೆ ಕೆಲವೊಮ್ಮೆ ಏನಾಗುತ್ತದೋ ಆ ದೇವರೇ ಬಲ್ಲ. ಹವಾಯಿ ಚಪ್ಪಲಿ, ಸಾಧಾರಣ ಸೀರೆ ತೊಟ್ಟು ಸರಳತನಕ್ಕೆ ಹೆಸರಾಗಿದ್ದ ದೀದಿ ಮಾತ್ರ ಇತ್ತೀಚೆಗೆ ಅಪಾರ ಸೌಲಭ್ಯ ಹಾಗೂ ಸರ್ವಾಧಿಕಾರಿಯಂತೆ ವರ್ತಿಸಲು ಆರಂಭಿಸಿದ್ದಾರೆ.
ಇದಕ್ಕೆ ಮುನ್ನುಡಿಯಾಗಿ ತಮಗೆ ಮನೆಯಲ್ಲಿದ್ದಾಗ ಮೊಬೈಲಿಗೆ ನೆಟ್ ವರ್ಕ್ ಸಿಗುತ್ತಿಲ್ಲ ಎಂದು ಕೋಲ್ಕತ್ತಾದಲ್ಲಿರುವ ಪುರಾತನ ಮೂರು ಜೈಲುಗಳನ್ನೇ ಸ್ಥಳಾಂತರಿಸಲು ಮುಂದಾಗಿದ್ದು, ಪ್ರತಿಪಕ್ಷ ಸೇರಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮಮತಾ ಬ್ಯಾನರ್ಜಿ ವಾಸವಾಗಿರುವ ಹರೀಶ್ ಚಟರ್ಜಿ ರಸ್ತೆಯಲ್ಲೇ ಮೂರು ಜೈಲುಗಳಿವೆ. ಈ ಜೈಲಿನಲ್ಲಿ ಮೊಬೈಲ್ ನೆಟ್ ವರ್ಕ್ ಜಾಮರ್ ಅಳವಡಿಸಿದ್ದು, ಮಮತಾ ಬ್ಯಾನರ್ಜಿ ಅವರಿಗೆ ನೆಟ್ ವರ್ಕ್ ಸಮಸ್ಯೆಯಾಗಿದೆ. ಆದರೆ ಇದಕ್ಕೆ ಪರ್ಯಾಯ ಹುಡುಕುವ ಬದಲು ಜೈಲುಗಳನ್ನೇ ಸ್ಥಳಾಂತರಿಸಲು ದೀದಿ ಕೋಲ್ಕತ್ತಾ ಮಹಾನಗರ ಪಾಲಿಕೆಗೆ ಆದೇಶಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಈಗ ಮಮತಾ ಆದೇಶದಿಂದ ಪ್ರೆಸಿಡೆನ್ಸಿ ಜೈಲ್, ಎಲಿಪೋರ್ ಸೆಂಟ್ರಲ್ ಜೈಲ್ ಹಾಗೂ ಎಲಿಪೋರ್ ಮಹಿಳಾ ಜೈಲನ್ನು ಸ್ಥಳಾಂತರಿಸುವ ಅನಿವಾರ್ಯ ಎದುರಾಗಿದೆ. ಇವುಗಳು ಸುಮಾರು 150 ಎಕರೆ ವ್ಯಾಪ್ತಿಯಲ್ಲಿದ್ದು, ಮತ್ತೊಂದೆಡೆ ನಿರ್ಮಾಣ ಮಾಡಬೇಕಿದೆ. ಅಲ್ಲದೆ ಇದಕ್ಕೆ ಮಾರ್ಚ್ 31ರ ಗಡುವು ನೀಡಲಾಗಿದ್ದು, ಸುಮಾರು 2000 ಕೈದಿಗಳನ್ನು ಸಹ ಸ್ಥಳಾಂತರಿಸಬೇಕಾಗಿರುವುದು ಪಾಲಿಕೆಗೆ ನುಂಗಲಾರದ ತುತ್ತಾಗಿದೆ.
ಜನರ ಹಿತ ಕಾಪಾಡಲು ಮುಖ್ಯಮಂತ್ರಿಯಾದ ದೀದಿ, ನೆಟ್ ವರ್ಕ್ ಸಿಗದ ಕಾರಣ ಅದಕ್ಕೆ ಪರ್ಯಾಯ ಹುಡುಕುವ ಬದಲು, ಐತಿಹಾಸಿಕ ಜೈಲನ್ನೇ ಸ್ಥಳಾಂತರಗೊಳಿಸಲು ಆದೇಶಿಸಿರುವುದು ಆಕ್ರೋಶಕ್ಕೆ ಕಾರಣವಾಗುವ ಜತೆಗೆ, ಇಷ್ಟು ದಿನ ಇರದ ನೆಟ್ ವರ್ಕ್ ಸಮಸ್ಯೆ ಈಗಲೇ ಯಾಕೆ ಸೃಷ್ಟಿಯಾಗಿದೆ ಎಂದಬ ಅನುಮಾನವೂ ಕಾಡುತ್ತಿದೆ.
Leave A Reply