ಇದಲ್ಲವೇ ಅಚ್ಛೇ ದಿನ್, 70 ವರ್ಷದ ಬಳಿಕ ವಿದ್ಯುತ್ ಕಂಡ ವಿಶ್ವಪ್ರಸಿದ್ಧ ದ್ವೀಪ
![](https://tulunadunews.com/wp-content/uploads/2018/02/dwrvs-mv4aeqkfb-960x578.jpg)
ಮುಂಬೈ: ವಿಶ್ವಪ್ರಸಿದ್ಧ ಎಲೆಫೆಂಟಾ ಗುಹೆಗಳನ್ನು ಹೊಂದಿರುವ, ವಿಶ್ವಸಂಸ್ಥೆಯ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಘರಪುರಿ ದ್ವೀಪಕ್ಕೆ ಸ್ವಾತಂತ್ರ್ಯ ದೊರೆತ 70 ವರ್ಷದ ಬಳಿಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ದೇಶಾದ್ಯಂತ ವಿದ್ಯುತ್ ತಲುಪಿದರ ಗ್ರಾಮಗಳಿಗೆ ವಿದ್ಯುತ್ ಒದಗಿಸಲು ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರಗಳು ಮತ್ತು ಮಹಾರಾಷ್ಟ್ರದ ಬಿಜೆಪಿ ಸರ್ಕಾರದ ಸಹಯೋಗದಲ್ಲಿ ದ್ವೀಪಕ್ಕೆ ವಿದ್ಯುತ್ ಕಲ್ಪಿಸಲಾಗಿದೆ.
ದೇಶದ ವಾಣಿಜ್ಯ ನಗರಿ ಮುಂಬೈನಿಂದ ಕೇವಲ 10 ಕಿ.ಮೀ ದೂರದಲ್ಲಿರುವ ದ್ವೀಪಕ್ಕೆ ಸ್ವಾತಂತ್ರ್ಯ ದೊರಕಿ 70 ವರ್ಷವಾದರೂ ವಿದ್ಯುತ್ ದೊರಕಿರಲಿಲ್ಲ. ಇದೀಗ ಸರ್ಕಾರದ ವಿಶೇಷ ಕಾಳಜಿ, ಸರ್ವರಿಗೂ ವಿದ್ಯುತ್ ದೊರೆಯಬೇಕು ಎಂಬ ಉದ್ದೇಶದಿಂದ ಈ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ವಿದ್ಯುತ್ ಪೂರೈಸಲು ಸಮುದ್ರದಲ್ಲಿ 7.5 ಕಿ.ಮೀ. ಕೇಬಲ್ ಸಂಪರ್ಕ ನಿರ್ಮಿಸಲಾಗಿದೆ.
ಇದೊಂದು ಐತಿಹಾಸಿಕ ದಿನವಾಗಿದ್ದು, ದೊಡ್ಡಮಟ್ಟದ ಕೇಬಲ್ ಗಳನ್ನು ಅರೇಬಿಯನ್ ಸಮುದ್ರದಲ್ಲಿ ವಿದ್ಯುತ್ ಪೂರೈಸಲು ಬಳಸಿರುವುದು ಇದೇ ಮೊದಲ ಬಾರಿಗೆ ಎಂದು ನವಿಕರಿಸಬಹುದಾದ ಇಂಧನ ಮೂಲಗಳ ಸಚಿವ ಚಂದ್ರಶೇಖರ್ ಬಾವಾಂಕುಲೆ ತಿಳಿಸಿದ್ದಾರೆ.
ವಿದ್ಯುತ್ ಸಂಪರ್ಕ ಕಲ್ಪಿಸಿರುವುದರಿಂದ ವಿಶ್ವಪಾರಂಪರಿಕ ತಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರಲಿದ್ದಾರೆ. ಅಲ್ಲದೇ ರಾಜ್ ಬಂದೇರ್, ಮೋರಾ ಬಂದೇರ್, ಶೆಟ್ ಬಂದೇರ್ ಗ್ರಾಮಗಳಿಗೆ ಅನುಕೂಲವಾಗಲಿದೆ. ಮೂರು ದಶಕಗಳಿಂದ ಎಲೆಫೆಂಟಾ ಗುಹೆಗಳು ಮತ್ತು ಮೂರು ಗ್ರಾಮಗಳಲ್ಲಿ ಜನರೇಟರ್ ನಿಂದ ವಿದ್ಯುತ್ ಬಳಸಲಾಗುತ್ತಿತ್ತು. ಇದೀಗ ನಿರಂತರವಾಗಿ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.
Leave A Reply