ಹಿಂದೂ ದಲಿತ ಮಹಿಳೆಯರ ಮೇಲೆ ಮುಸ್ಲಿಮರಿಂದ ಮಾರಣಾಂತಿಕ ದಾಳಿ, ಅತ್ಯಾಚಾರ ಯತ್ನ
ಲಖನೌ: ಉತ್ತರ ಪ್ರದೇಶದ ಪ್ರತಾಪಗಡ ಜಿಲ್ಲೆಯಲ್ಲಿ ಮುಸ್ಲಿಂ ಗುಂಡಾಗಳ ತಂಡವೊಂದು ಮೂವರು ಹಿಂದೂ ದಲಿತ ಮಹಿಳೆಯರ ಮೇಲೆ ದಾಳಿ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದಲ್ಲದೇ, ಅತ್ಯಾಚಾರಕ್ಕೆ ಯತ್ನ ಮಾಡಲಾಗಿದೆ.
ಪ್ರತಾಪಗಡ್ ಜಿಲ್ಲೆಯ ಖನ್ಹಾಯಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ಮುಸ್ಲಿಮರ ತಂಡವೊಂದು ಮನೆಯಲ್ಲಿದ್ದ ಮಹಿಳೆ ಮತ್ತು ಇಬ್ಬರು ಬಾಲಕಿಯರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಅಲ್ಲದೇ ಮಹಿಳೆ ಮತ್ತು ಬಾಲಕಿಯರ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದಾರೆ. ಮಹಿಳೆ ಮತ್ತು ಬಾಲಕಿಯರ ಮೈಮೇಲಿನ ಬಟ್ಟೆಗಳನ್ನು ಕಿತ್ತು ಹಾಕಿ ವಿಕೃತಿ ಮೆರೆದಿದ್ದಾರೆ. ಅತ್ಯಾಚಾರ ಯತ್ನ ಫಲಿಸದಿದ್ದಾಗ ಬೆಂಕಿ ಹಚ್ಚಿ, ಮಾರಾಕಸ್ತ್ರಗಳು ಮತ್ತು ಕೋಲುಗಳಿಂದ ದಾಳಿ ನಡೆಸಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ದಲಿತ ಕುಟುಂಬ ಹಲವು ವರ್ಷಗಳ ಹಿಂದೆ ಮುಸ್ಲಿಂ ಕುಟುಂಬವೊಂದರ ಜತೆ ಜಮೀನಿಗೆ ಸಂಬಂಧಿಸಿದಂತೆ ವಿವಾದ ಹೊಂದಿತ್ತು. ಅದೇ ದ್ವೇಷವಿಟ್ಟುಕೊಂಡು ಮುಸ್ಲಿಂ ಗೂಂಡಾಗಳು ದಲಿತ ಮಹಿಳೆಯರ ಮೇಲೆ ದಾಳಿ ಮಾಡಿದ್ದಾರೆ. ಶಕೀಲ್, ಶಹೀದ್, ಮಹಮ್ಮದ್ ಅಲಿ ಮತ್ತೀತರರು ಮಹಿಳೆಯರ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡಿ ಧರ್ಪ ಮೆರೆದಿದ್ದಾರೆ.
ದಲಿತರ ಕುಟುಂಬದ ಮುಖಂಡ ವಿಷಯ ತಿಳಿದು ಬರುವಷ್ಟರಲ್ಲಿ ದಾಳಿ ಮಾಡಿದ್ದ ಮುಸ್ಲಿಂ ಗೂಂಡಾಗಳು ಓಡಿ ಹೋಗಿದ್ದರು ಎನ್ನಲಾಗಿದೆ. ತಕ್ಷಣ ಪೊಲೀಸ್ ಸಹಾಯವಾಣಿ 100 ಕರೆ ಮಾಡಿ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ ಎಂದು ಸ್ಥಳೀಯ ‘ಪತ್ರಿಕಾ ನ್ಯೂಸ್’ ಪತ್ರಿಕೆ ವರದಿ ಮಾಡಿದೆ.
Leave A Reply