ರಾಹುಲ್ ಗಾಂಧಿ ಮುಖಂಡನಾಗಲು ಅರ್ಹನಲ್ಲ: ಹಾರ್ದಿಕ್ ಪಟೇಲ್
ದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಜತೆ ಕೈ ಜೋಡಿಸಿ ಶತಾಯ ಗತಾಯ ಬಿಜೆಪಿಯನ್ನು ಸೋಲಿಸಲು ಯತ್ನಿಸಿದ ಪಾಟೀದಾರ್ ಅನಾಮತ್ ಆಂದೋಲನದ ಸಮಿತಿ ಮುಖಂಡ ಹಾರ್ದಿಕ್ ಪಟೇಲ್ ಇದೀಗ ರಾಹುಲ್ ಗಾಂಧಿವಿರುದ್ಧ ತಿರುಗಿ ಬಿದ್ದಿದ್ದಾರೆ.
ರಾಹುಲ್ ಗಾಂಧಿ ಅವರನ್ನು ನಾನು ಮುಖಂಡನನ್ನಾಗಿ ಸ್ವೀಕರಿಸುವುದಿಲ್ಲ. ವೈಯಕ್ತಿಕವಾಗಿ ರಾಹುಲ್ ಗಾಂಧಿ ಅವರನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ರಾಹುಲ್ ಗಾಂಧಿ ಅವರಿಗೆ ನಾಯಕತ್ವದ ಗುಣಗಳ ಸಮಸ್ಯೆಯಿದೆ ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ. ಅಲ್ಲದೇ ರಾಹುಲ್ ಗಾಂಧಿ ಬದಲು ಸೋನಿಯಾ ಪುತ್ರಿ, ವಾದ್ರಾ ಪತ್ನಿ ಪ್ರಿಯಾಂಕ್ ಗಾಂಧಿ ಕಾಂಗ್ರೆಸ್ ನಾಯಕತ್ವ ವಹಿಸಿಕೊಳ್ಳಬೇಕು ಎಂದು ಭಯಸುತ್ತೇನೆ ಎಂದು ಹೇಳಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರು ಹೆಚ್ಚಿನ ಮತಗಳನ್ನು ಸಹಾಯ ಮಾಡಿದ್ದ ಹಾರ್ದಿಕ ಪಟೇಲ್ ಇದೀಗ ನೇರವಾಗಿ ಕಾಂಗ್ರೆಸ್ ಹೈಕಮಾಂಡ್ ನ್ನೆ ಪ್ರಶ್ನಿಸಿದ್ದು, ಕಾಂಗ್ರೆಸ್ ಗೆ ತೀವ್ರ ಮುಜುಗರ ಉಂಟು ಮಾಡಿದೆ. ಅಲ್ಲದೇ ರಾಹುಲ್ ಗಾಂಧಿ ಹೋದಲ್ಲೆಲ್ಲಾ ಕಾಂಗ್ರೆಸ್ ಸೋಲುತ್ತಿರುವುದು ಮತ್ತು ರಾಹುಲ್ ಮಾಡಿಕೊಳ್ಳುತ್ತಿರುವ ಎಡವಟ್ಟುಗಳು, ರಾಹುಲ್ ನಾಯಕತ್ವದಲ್ಲಿನ ವಿಫಲತೆಗಳು ಒಂದೊಂದಾಗಿ ಹೊರ ಹೊಮ್ಮುತ್ತಿವೆ.
ರಾಹುಲ್ ವಿರುದ್ಧ ಕಾಂಗ್ರೆಸ್ ನಲ್ಲೇ ಅಸಮಾಧಾನವಿದ್ದರೂ ಹೈಕಮಾಂಡ್ ವಿರುದ್ಧ ಮಾತನಾಡಲು ಆಗದೇ ಕೈ ಚೆಲ್ಲಿ ಕುಳಿತಿರುವ ಕಾಂಗ್ರೆಸ್ ನ ಘಟಾನುಘಟಿ ನಾಯಕರ ಮಧ್ಯೆ ಹಾರ್ದಿಕ ಪಟೇಲ್ ಸಿಡಿಸಿರುವ ಈ ಬಾಂಬ್ ರಾಹುಲ್ ನಾಯಕತ್ವದ ಬಗ್ಗೆ ಪ್ರಶ್ನೆಯನ್ನು ಮೂಡಿಸಿದೆ.
Leave A Reply