ಸರ್ಕಾರಿ ಶಾಲೆಯಲ್ಲಿ ದಿನಾಲೂ ನಮಾಜ್ ಮಾಡುವಂತೆ ವಿದ್ಯಾರ್ಥಿಗಳಿಗೆ ಒತ್ತಾಯ, ಇದೇನಿದು ಶಾಲೆಯೋ, ಮಸೀದಿಯೋ?
ಬೆಂಗಳೂರು: ಹಾಗೆ ನೋಡಿದರೆ ಯಾವುದೇ ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಧರ್ಮಬೋಧನೆ ಮಾಡುವಂತಿಲ್ಲ ಎಂದು ಸಂವಿಧಾನವೇ ಹೇಳುತ್ತದೆ. ಮದರಸಾಗಳಲ್ಲೇನೋ ಧರ್ಮ ಬೋಧನೆ ಮಾಡುತ್ತಾರೆ ಎಂದರೆ ಒಪ್ಪೋಣ.
ಆದರೆ ಸರ್ಕಾರಿ ಶಾಲೆಯಲ್ಲೇ ವಿದ್ಯಾರ್ಥಿಗಳು ಪ್ರತಿದಿನ ಕಡ್ಡಾಯವಾಗಿ ನಮಾಜ್ ಮಾಡಬೇಕು ಎಂದು ಶಾಲೆಯ ಬೋಧಕ ಸಿಬ್ಬಂದಿ ಒತ್ತಾಯ ಮಾಡುತ್ತಾರೆ ಎಂದರೆ, ಅಲ್ಲಿ ಎಂತಹ ಮನಸ್ಥಿತಿಗಳಿರಬೇಕು ಯೋಚಿಸಿ.
ಹೌದು, ಬೆಂಗಳೂರಿನ ಶಿವಾಜಿ ನಗರದ ಶಿವಾಜಿ ರಸ್ತೆಯಲ್ಲಿರುವ ವಿಕೆಒ ಶಾಲೆಯಲ್ಲಿ ಹಿಂದೂ-ಮುಸ್ಲಿಂ ವಿದ್ಯಾರ್ಥಿಗಳು ಓದುತ್ತಾರೆ. ಆದರೆ ಎಲ್ಲರೂ ದಿನನಿತ್ಯ ನಮಾಜ್ ಮಾಡಲೇಬೇಕು ಎಂದು ಮಕ್ಕಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸರ್ಕಾರಿ ಶಾಲೆಯನ್ನು ಖಾಸಗಿ ಸಂಸ್ಥೆಯೊಂದು ದತ್ತು ಪಡೆದುಕೊಂಡಿದ್ದು, ದಿನನಿತ್ಯ ರಾಷ್ಟ್ರಗೀತೆಯ ಬದಲು ನಮಾಜ್ ಮಾಡಬೇಕು ಎಂದು ಒತ್ತಡ ಹೇರಲಾಗುತ್ತಿದೆ. ಅಲ್ಲದೆ ಅಡ್ಮಿಷನ್ ವೇಳೆ ಅಲ್ಪಸಂಖ್ಯಾತರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುತ್ತಿದೆ ಎಂದು ಹಲವು ಪೋಷಕರು ಆರೋಪಿಸಿದ್ದಾರೆ.
ಆದರೆ, ಸರ್ಕಾರಿ ಅನುದಾನಿತ ಶಾಲೆಯಲ್ಲಿ ಧರ್ಮಬೋಧನೆ ಮಾಡುವುದು ಎಷ್ಟು ಸರಿ? ಮಕ್ಕಳಿಗೆ ಓದುವುದನ್ನು ಕಲಿಸುವುದು ಬಿಟ್ಟು ಆಡಳಿತ ಮಂಡಳಿಯೇಕೆ ನಮಾಜ್ ಮಾಡಿಸುತ್ತಿದೆ? ಎಂಬ ಕುರಿತು ಹಲವು ಪ್ರಶ್ನೆಗಳು ಉದ್ಭವಿಸಿದ್ದು, ತನಿಖೆಯಾಗಬೇಕಿದೆ.
Leave A Reply