1971ರ ಯುದ್ಧದ ವೀರ ಸೈನಿಕನಿಗೆ ಅನಾರೋಗ್ಯ, ಸಹಾಯ ಮಾಡುವ ದೊಡ್ಡ ಮನಸ್ಸು ನಮ್ಮದಾಗಲಿ! ಪ್ಲೀಸ್
ದೆಹಲಿ: ಒಬ್ಬ ಯೋಧ ಗಡಿಯಲ್ಲಿ ಚಳಿ, ಮಳೆ, ಬಿಸಿಲು, ಗಾಳಿಯೆನ್ನದೆ ಹಗಲಿರುಳು ದೇಶವನ್ನು ಕಾಯುತ್ತಿರುತ್ತಾನೆ. ಆತ ಹೀಗೆ ತನ್ನದೆಲ್ಲವನ್ನೂ ತ್ಯಾಗ ಮಾಡುತ್ತಾನೆ ಎಂದೇ ನಾವು ಮನೆಯಲ್ಲಿ ಬೆಚ್ಚಗೆ ಮಲಗುತ್ತೇವೆ. ಆದರೆ ಅಂತಹ ವೀರ ಸೈನಿಕ ತನ್ನ ಇಳಿ ವಯಸ್ಸಿನಲ್ಲಿ ಅನಾರೋಗ್ಯಕ್ಕೀಡಾದರೆ ಏನು ಮಾಡಬೇಕು? ಯಾವ ಸರ್ಕಾರ ನೆರವಿಗೆ ಬರುತ್ತದೆ?
ಹೌದು, 1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಹೋರಾಡಿದ, ಅಂದಿನ ಗೆಲುವಿನಲ್ಲಿ ತನ್ನದೂ ಒಂದು ಪಾಲು ನೀಡಿದ್ದ ಮೇಜರ್ ರವಿ ಪ್ರಕಾಶ್ ನಾಯರ್ ಅವರು 7 ವರ್ಷದಿಂದ ಬೆನ್ನುನೋವಿನಿಂದ ಬಳಲುತ್ತಿದ್ದು, ಪ್ರಸ್ತುತ ಹೆಚ್ಚಿನ ಚಿಕಿತ್ಸೆಗಾಗಿ ಇಂಡಿಯನ್ ಸ್ಪಿನಲ್ ಇಂಜ್ಯುರಿಯಸ್ ಸೆಂಟರ್ ನಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದರೆ ಅವರಿಗೆ ಚಿಕಿತ್ಸೆಗಾಗಿ ಹಣದ ಅವಶ್ಯಕತೆಯಿದ್ದು, ಇದನ್ನು ಗಮನಿಸಿರುವ ಕ್ರಿಕೆಟಿಗ ಗೌತಮ್ ಗಂಭೀರ್ ವೈಯಕ್ತಿಕವಾಗಿ ಸಹಾಯ ಮಾಡಿದ್ದಾರೆ. ಅಷ್ಟೇ ಅಲ್ಲದೇ, ವೀರ ಯೋಧನೆಗೆ ಸಹಾಯ ಮಾಡಿ ಎಂದು ಅವರ ಅಂಕೌಟ್ ವಿವರವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ.
ನಮಗಾಗಿ ತನ್ನ ನಾಳೆಗಳನ್ನು, ನಿದ್ರೆಯನ್ನು ತ್ಯಾಗ ಮಾಡಿ, ಇಳಿವಯಸ್ಸಿನಲ್ಲಿ ಆಸ್ಪತ್ರೆ ಸೇರಿರುವ ಯೋಧನಿಗೆ ನಮ್ಮ ಸಂಬಳದ, ಜೇಬಿನ, ಉಳಿತಾಯದ ಪಾಲು ಹೋದರೆ ಆ ಜೀವ ಸುಖವಾಗಿ ಕಾಲಕಳೆಯಬಹುದಲ್ಲವೇ? ನಮ್ಮ ಬೆಚ್ಚನೆಯ ನಿದ್ದೆಗಾಗಿ ತಮ್ಮ ಪ್ರಾಣವನ್ನೇ ಯೋಧನಿಗೆ ಸಹಾಯ ಮಾಡುವ ದೊಡ್ಡ ಮನಸ್ಸು ನಮ್ಮದಾಗಿ ಎಂಬುದೇ ನಮ್ಮ ಆಶಯ.
Leave A Reply