• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮೋದಿ ಆರ್ಥಿಕ ನೀತಿ ವಿರೋಧಿಗಳೇ ಕೇಳಿ ಉಬರ್ ಸಿಇಒ ಹೇಳಿದ ಶ್ಲಾಘನೀಯ ಮಾತುಗಳು..!

TNN Correspondent Posted On February 25, 2018
0


0
Shares
  • Share On Facebook
  • Tweet It

ದೆಹಲಿ: ಪ್ರಧಾನಿ ನರೇಂದ್ರ ಮೋದಿ.. ಈ ಹೆಸರು ಇದೀಗ ವಿಶ್ವಮಟ್ಟದಲ್ಲಿ ಭಾರತದ ತಾಕತನ್ನು ವಿಶ್ವಕ್ಕೆ ತೋರಿಸಿದ್ದು. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಆಡಳಿತ ವ್ಯವಸ್ಥೆಗೆ ಹೊಸ ದಿಕ್ಕನ್ನು ತೋರಿಸಿದವರು. ನೋಟ್ಯಂತರ, ಏಕರೂಪ ತೆರಿಗೆ (ಜಿಎಸ್ಟಿ) ಸೇರಿ ಹಲವು ಕ್ರಾಂತಿಕಾರಕ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಭಾರತದ ಅರ್ಥ ವ್ಯವಸ್ಥೆಗೆ ನವ ಚೈತನ್ಯ ನೀಡಿದವರು. ನರೇಂದ್ರ ಮೋದಿ ಅವರ ಬಲಿಷ್ಠ ಆರ್ಥಿಕ ನಿರ್ಧಾರಗಳನ್ನು ವಿಶ್ವದ ಹಲವು ಆರ್ಥಿಕ ತಜ್ಞರು, ಸಂಸ್ಥೆಗಳು ಶ್ಲಾಘಿಸಿವೆ. ಇದೀಗ ಮೋದಿ ಅವರನ್ನು ಮತ್ತು ಅವರ ಆರ್ಥಿಕ ನೀತಿಗಳನ್ನು ಹೊಗಳುವವರ ಸಾಲಿಗೆ ಖ್ಯಾತ ಸಂಸ್ಥೆ ಉಬರ್ ಕಂಪನಿ ಸಿಇಒ ದಾರಾ ಖೋಸ್ರೋಶಾಹಿ ಸೇರಿದ್ದಾರೆ.

ಭಾರತದ ಆರ್ಥಿಕ ಸುಧಾರಣೆ ಬದಲಾವಣೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೈಗೊಂಡ ದಿಟ್ಟ ನಿರ್ಧಾರಗಳ ಬಗ್ಗೆ ದಾರಾ ಖೊಸ್ರೋಶಾಹಿ, ಪ್ರಧಾನಿ ನರೇಂದ್ರ ಮೋದಿ ತಮ್ಮ ಫೇವರಿಟ್‌ ಆಡಳಿತಗಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇಶದ ಆರ್ಥಿಕ ಪ್ರಗತಿ ದಿಸೆಯಲ್ಲಿ ಮೋದಿಯವರು ತೋರುತ್ತಿರುವ ಬದ್ಧತೆ ಮತ್ತು ಔದ್ಯಮಿಕ ಕೌಶಲದ ನಿರ್ಧಾರಗಳು, ಪ್ರೋತ್ಸಾಹ ದೇಶಕ್ಕೆ ನವ ಚೈತನ್ಯ ನೀಡಲಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಸಣ್ಣ ಉದ್ಯಮಿಗಳಿಗೆ ಅವಕಾಶ ಸೃಷ್ಟಿಸುವ ಮಾರ್ಗಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಚರ್ಚೆ ನಡೆಸಿರುವ ಖೊಸ್ರೋಶಾಹಿ, 2025ರ ವೇಳೆಗೆ ಭಾರತದ ಆರ್ಥಿಕತೆಯನ್ನು 5 ಲಕ್ಷ ಕೋಟಿ ಡಾಲರ್‌ಗೆ ವಿಸ್ತರಿಸುವ ಕನಸಿಗೆ ಪೂರಕ ಸಲಹೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಭಾರತದ ಪ್ರಧಾನಿ ಮೋದಿಯವರು ಕೈಗೊಂಡಿರುವ ಕಠಿಣ ಆರ್ಥಿಕ ಸುಧಾರಣೆಗಳು ಜಾಗತಿಕ ಮಟ್ಟದಲ್ಲಿ ದೇಶವನ್ನು ಬದಲಾವಣೆಗೆ ಮುನ್ನುಡಿ ಬರೆಸಲು ಸಹಕಾರಿಯಾಗಿವೆ. ನರೇಂದ್ರ ಮೋದಿ ಅವರ ದೂರದೃಷ್ಟಿ ಮೆಚ್ಚುವಂತಾದ್ದು ಎಂದು ಹೇಳಿದ್ದಾರೆ.

0
Shares
  • Share On Facebook
  • Tweet It




Trending Now
ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
Tulunadu News April 7, 2026
ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
Tulunadu News April 7, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
  • Popular Posts

    • 1
      ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • 2
      ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • 3
      ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search