ಶ್ರೀದೇವಿ ಸಾವಿನಲ್ಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟ ಕಾಂಗ್ರೆಸ್ ನಿಜಬಣ್ಣವೂ ಬಯಲಾಯ್ತು!
ದೆಹಲಿ: ಯಾವುದೇ ಒಬ್ಬ ವ್ಯಕ್ತಿ ಮೃತಪಟ್ಟಾಗ, ಅಕಾಲಿಕವಾಗಿ ನಿಧನ ಹೊಂದಿದಾಗ ಸಂತಾಪ ಸೂಚಿಸುವುದು ಸಾಮಾನ್ಯ. ಆಗ ಅವರ ಒಳ್ಳೆತನ, ಉತ್ತಮ ಆದರ್ಶಗಳ ಕುರಿತು ಹೊಗಳುವುದು ಸಹ ಸಹಜ.
ಅದರಲ್ಲೂ ಬಾಲಿವುಡ್ ಬೆಡಗಿ, ನಟಿ ಶ್ರೀದೇವಿ ಅವರಂತಹ ಮೇರು ಪ್ರತಿಭೆ ಅಕಾಲಿಕವಾಗಿ ಮೃತಪಟ್ಟಾಗ ಪ್ರಧಾನಿ ನರೇಂದ್ರ ಮೋದಿಯಾದಿಯಾಗಿ ಎಲ್ಲರೂ ಸಂತಾಪ ಸೂಚಿಸಿದರು. ಆದರೆ ಎಲ್ಲೂ ಶ್ರೀದೇವಿ ಅವರನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲಿಲ್ಲ.
ಆದರೆ, ಶ್ರೀದೇವಿಯವರ ಸಾವಿನಲ್ಲೂ ಕಾಂಗ್ರೆಸ್ ತನ್ನ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಹೋಗಿ ಟೀಕೆಗೆ ಗುರಿಯಾಗಿದೆ. ಹೌದು, ಶ್ರೀದೇವಿ ಸಾವಿನ ಸುದ್ದಿ ಹರಡುತ್ತಲೇ, ಅವರ ನಿಧನಕ್ಕೆ ಕಾಂಗ್ರೆಸ್ ಟ್ವಿಟರ್ ನಲ್ಲಿ ಸಂತಾಪ ಸೂಚಿಸಿತು.
ಆದರೆ ಹೀಗೆ ಸಂತಾಪ ಸೂಚಿಸುವ ಭರದಲ್ಲಿ ರಾಜಕೀಯ ಮಾಡಲು ಹೊರಟ ಕಾಂಗ್ರೆಸ್, “ನಟಿ ಶ್ರೀದೇವಿಯವರ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ. ಆದರೂ ಶ್ರೀದೇವಿಯವರು ನಮ್ಮ ಮನದಲ್ಲಿ ಹಚ್ಚಹಸಿರಾಗಿರುತ್ತಾರೆ. 2013ರಲ್ಲಿ ಯುಪಿಎ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿತ್ತು” ಎಂದು ಟ್ವೀಟ್ ಮಾಡುವ ಮೂಲಕ ರಾಜಕಾರಣ ಮಾಡಿದೆ.
ಕಾಂಗ್ರೆಸ್ ಇಂತಹ ರಾಜಕಾರಣದ ಉದ್ದೇಶದಿಂದ ಕೂಡಿದ ಟ್ವೀಟ್ ಮಾಡುತ್ತಲೇ, ಹಲವು ಜನ ಟ್ವಿಟರ್ ನಲ್ಲೇ ಕಾಂಗ್ರೆಸ್ಸಿನ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಪೇಚಿಗೆ ಸಿಲುಕಿದ ಕಾಂಗ್ರೆಸ್ ಬಳಿಕ ತನ್ನ ಟ್ವೀಟ್ ಅನ್ನೇ ಡಿಲೀಟ್ ಮಾಡಿದೆ. ಯಾವ ವಿಷಯದಲ್ಲಿ ರಾಜಕೀಯ ಮಾಡಬೇಕು ಎಂಬುದನ್ನು ಕಾಂಗ್ರೆಸ್ ಇನ್ನಾದರೂ ಕಲಿಯಬೇಕಿದೆ ಎಂಬುದು ಜನರ ಮನದಾಳವಾಗಿದೆ.
Leave A Reply