ಮೊಹಮ್ಮದ್ ಅಲಿ ಜಿನ್ನಾ ಆತ್ಮದಿಂದ ಅಸಾದುದ್ದೀನ್ ಓವೈಸಿ ಪ್ರಭಾವಿತನಾಗಿದ್ದಾರೆ ಎಂದು ಹೇಳಿದ್ದು ಯಾರು ಗೊತ್ತಾ?
ದೆಹಲಿ: ಭಾರತದಲ್ಲಿ ಹಿಂದುತ್ವದ್ದೇ ಮೇಲುಗೈ ಆಗುತ್ತಿದೆ, ಮುಸ್ಲಿಮರನ್ನು ತುಳಿಯಲಾಗುತ್ತಿದೆ ಎಂಬ ಹೇಳಿಕೆ ನೀಡಿದ್ದ ಅಸಾದುದ್ದೀನ್ ಓವೈಸಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಟಾಂಗ್ ನೀಡಿದ್ದು, ಅಸಾದುದ್ದೀನ್ ಓವೈಸಿ ಮೊಹಮ್ಮದ್ ಅಲಿ ಜಿನ್ನಾ ಆತ್ಮದಿಂದ ಪ್ರಭಾವಿತರಾಗಿದ್ದಾರೆ. ಅದಕ್ಕಾಗಿಯೇ ಅವರು ಯಾವಾಗಲೂ ದೇಶವನ್ನು ಒಡೆಯುವ ಹೇಳಿಕೆ ನೀಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ಭಾರತದಲ್ಲಿರುವ ಮುಸ್ಲಿಮರು ಬಾಬರನ ಸಂತತಿಯವರು ಹಾಗೂ ವಿದೇಶಿಯರು ಎಂಬ ಓವೈಸಿ ಹೇಳಿಕೆಗೂ ಟಾಂಗ್ ನೀಡಿರುವ ಸಿಂಗ್, ಭಾರತದಲ್ಲಿರುವ ಮುಸ್ಲಿಮರು ಬಾಬರ್ ಸಂತತಿಯವರೂ ಅಲ್ಲ, ವಿದೇಶಿಯರೂ ಅಲ್ಲ, ಅವರು ರಾಮನ ಸಂತತಿಯವರು ಎಂದಿದ್ದಾರೆ.
ಪ್ರಸ್ತುತ ದೇಶದಲ್ಲಿ ಮುಸ್ಲಿಮರು ಹಾಗೂ ಹಿಂದೂಗಳ ಆಚರಣೆಯಲ್ಲಿ ವೈವಿಧ್ಯತೆ ಇರಬಹುದು. ನಂಬಿಕೆಗಳಲ್ಲಿ ವ್ಯತ್ಯಾಸ ಇರಬಹುದು. ಆದರೆ ನಮ್ಮ ಪೂರ್ವಿಕರು ಮಾತ್ರ ಒಬ್ಬರೇ (ರಾಮ) ಎಂದು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ವಿಷಯದ ಕುರಿತು ಕಳೆದ ಶನಿವಾರ ಮಾತನಾಡಿದ್ದ ಅಸಾದುದ್ದೀನ್ ಓವೈಸಿ, “ನಾವು ಬಾಬರನ ಸಂತತಿಯವರಾಗಿದ್ದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಂಗುಲ ಜಾಗವೂ ನೀಡುವುದಿಲ್ಲ. ಸುಪ್ರೀಂ ಕೊರ್ಟ್ ನಮಗೆ ಮತೆ ಮಸೀದಿ ಕಟ್ಟಲು ಅನುಮತಿ ನೀಡುವ ವಿಶ್ವಾಸವಿದೆ” ಎಂದಿದ್ದರು.
ಅಲ್ಲದೆ ಪ್ರಸ್ತುತ ಭಾರತ ಹಿಂದೂಮಯವಾಗುತ್ತಿದ್ದು, ನಮ್ಮನ್ನು ಪಾಕಿಸ್ತಾನಿಯರು ಎಂಬಂತೆ ನೋಡಲಾಗುತ್ತಿದೆ. ಈ ದಿಸೆಯಲ್ಲಾದರೂ ನಾವು ಅಯೋಧ್ಯೆಯಲ್ಲಿ ಬಾಬ್ರೀ ಮಸೀದಿ ಕಟ್ಟುತ್ತೇವೆ ಎಂದು ಹೇಳಿಕೆ ನೀಡಿದ್ದರು.
Leave A Reply