ದೇಶದ ಪ್ರಥಮ ಪ್ರಜೆಯ ಪ್ರವೇಶಕ್ಕೆ ವಿರೋಧಿಸಿ ಧರ್ಪ ಮೆರೆಯುತ್ತಿರುವ ಅಲಿಗಢ ಮುಸ್ಲಿಂ ವಿವಿಯ ಕೊಳಕರು
ದೆಹಲಿ: ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಲಿಗಢ ಮುಸ್ಲಿಂ ವಿವಿಯ ಘಟಿಕೋತ್ಸವದಲ್ಲಿ ಭಾಗವಹಿಸುವುದಕ್ಕೆ ವಿರೋಧಿಸುವ ಮೂಲಕ ವಿವಿಯ ವಿದ್ಯಾರ್ಥಿ ಸಂಘಟನೆಯ ಮುಖಂಡರು ಧರ್ಪ ಮೆರೆದಿದ್ದಾರೆ. ಈ ಮೂಲಕ ದೇಶದ ಪ್ರಥಮ ಪ್ರಜೆಗೆ ಅವಮಾನ ಮಾಡಿದಲ್ಲದೇ, ದೇಶದ ನ್ಯಾಯಾಂಗ, ಸಂವಿಧಾನವನ್ನೇ ಪ್ರಶ್ನಿಸುವ ಮಟ್ಟಿಗೆ ಬೆಳೆದಿದ್ದಾರೆ.
ಮಾರ್ಚ್ 7ರಂದು ನಡೆಯಲಿರುವ ಮುಸ್ಲಿಂ ವಿವಿಯ ಘಟಿಕೋತ್ಸವದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮುಖ್ಯ ಅತಿಥಿಗಳಾಗಿದ್ದರು. ಇದನ್ನು ಮುಸ್ಲಿಂ ವಿವಿಯ ವಿದ್ಯಾರ್ಥಿ ಸಂಘಟನೆಯವರು ವಿರೋಧಿಸಿದ್ದಾರೆ. ರಾಷ್ಟ್ರಪತಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನೆಲೆ ಹೊಂದಿರುವುದರಿಂದ ಅವರ ವಿಶ್ವವಿದ್ಯಾಲಯ ಪ್ರವೇಶವನ್ನು ವಿರೋಧಿಸುತ್ತೀದ್ದೇವೆ ಎಂದು ಹೇಳುವ ಮೂಲಕ ತಮ್ಮ ಕೊಳಕು ಮನಸ್ಥಿತಿಯನ್ನು ಹೊರಹಾಕಿದ್ದಾರೆ.
ಈ ಕುರಿತು ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಪತ್ರ ಬರೆದಿರುವ ವಿವಿ ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿ ಮಹಮ್ಮದ್ ಫಹಾದ್ ಒಂದು ವೇಳೆ ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರೇ ವೇದಿಕೆ ಬಳಿಯೇ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡುವ ಮೂಲಕ ದೇಶಕ್ಕೆ ಅಪಮಾನ ಮಾಡಿದ್ದಾನೆ. ನಾವು ರಾಷ್ಟ್ರಪತಿಯನ್ನು ಗೌರವಿಸುತ್ತೇವೆ, ಆದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರಾಗಿದ್ದರರೇ ವಿರೋಧಿಸುತ್ತೇವೆ ಎಂದು ಹೇಳುವ ಮೂಲಕ ತನ್ನ ಎಡಬಿಡಂಗಿತನವನ್ನು ಪ್ರದರ್ಶಿಸಿದ್ದಾನೆ.
2010ರಲ್ಲಿ ಬಿಜೆಪಿ ವಕ್ತಾರರಾಗಿದ್ದ ರಾಮನಾಥ್ ಕೋವಿಂದ ಅವರ ಹೇಳಿಕೆಯನ್ನು ವಿರೋಧಿಸಿ ಇದೀಗ ಮುಸ್ಲಿಂ ವಿವಿಯವಿದ್ಯಾರ್ಥಿ ಸಂಘಟನೆಗಳ ಮುಖಂಡರು ರಾಷ್ಟ್ರಪತಿಯವರನ್ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ವಿರೋಧಿಸುತ್ತಿರುವುದು ದೇಶಕ್ಕೆ ಮತ್ತೊಂದು ದೊಡ್ಡ ದುರಂತರ ಸೂಚನೆಯಲ್ಲದೇ ಮತ್ತೇನೂ ಅಲ್ಲ.
Leave A Reply