ಮೋದಿ ಅವರನ್ನು ಪ್ರಶ್ನಿಸುವ ರಾಹುಲ್ ಗಾಂಧಿ ಅಮರಿಂದರ್ ಸಿಂಗ್ ಅಳಿಯನ ಹಗರಣದ ಕುರಿತು ಏನೆನ್ನುತ್ತಾರೆ?
ದೆಹಲಿ: ದೇಶದಲ್ಲಿ ಒಂದೊಂದೇ ಬ್ಯಾಂಕ್ ಹಗರಣಗಳು ಹೊರಬೀಳುತ್ತಿವೆ. ನೀರವ್ ಮೋದಿ, ಮೇಹುಲ್ ಚೌಕ್ಸಿ, ವಿಕ್ರಂ ಕೊಠಾರಿ, ಸಭ್ಯ ಸೇಠ್… ಬ್ಯಾಂಕುಗಳಲ್ಲಿ ಸಾಲ ಪಡೆದು ಮೋಸ ಮಾಡಿ ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಎಲ್ಲ ವಂಚಕ ಉದ್ಯಮಿಗಳಿಗೆ ಬ್ಯಾಂಕುಗಳು ಸಾಲ ನೀಡಿದ್ದು ಯುಪಿಎ ಆಡಳಿತದಲ್ಲಿ ಎಂಬುದು ಗಮನಾರ್ಹ.
ಆದರೆ ಎಂತಹ ದುರಂತ ಎಂದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು, ಈ ಎಲ್ಲ ಹಗರಣಗಳಿಗೆಲ್ಲ ಮೋದಿ ಅವರೇ ಕಾರಣ, ಅವರೇ ಭ್ರಷ್ಟಾಚಾರ ಎಸಗಿದ್ದಾರೆ ಎಂಬ ರೀತಿ ಮಾತನಾಡುತ್ತಾರೆ. ಬ್ಯಾಂಕ್ ವಂಚಕರಿಗೂ, ಮೋದಿ ಅವರಿಗೂ ಎಲ್ಲಿಂದೆಲ್ಲಿಯ ಸಂಬಂಧ ಎಂಬ ಕನಿಷ್ಠ ಅರಿವೂ ಇಲ್ಲದೆ ರಾಹುಲ್ ಗಾಂಧಿ ಆರೋಪಿಸುತ್ತಾರೆ.
ಆದರೆ, ಈಗ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ನಲ್ಲಿ ಸಾಲ ಪಡೆದು, ಸುಮಾರು 200 ಕೋಟಿ ರೂ. ವಂಚನೆ ಮಾಡಿದ ಆರೋಪದಲ್ಲಿ ಪಂಜಾಬ್ ಮುಖ್ಯಮಂತ್ರಿ, ಕಾಂಗ್ರೆಸ್ಸಿನ ಅಮರಿಂದರ್ ಸಿಂಗ್ ಅಳಿಯ ಗುರ್ಪಾಲ್ ಸಿಂಗ್ ಸೇರಿ ಹಲವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
ಸಿಂಭಾವೋಲಿ ಶುಗರ್ಸ್ ಕಂಪನಿ ಹೆಸರಿನಲ್ಲಿ ಸಾಲ ಪಡೆದು, ಈಗ ಮರುಪಾವತಿಸದ ಹಿನ್ನೆಲೆಯಲ್ಲಿ ಇವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆದರೆ ಯಾವ ಬ್ಯಾಂಕ್ ಹಗರಣದಲ್ಲಿ ಮೋದಿ ಹೆಸರನ್ನು ತಳುಕು ಹಾಕಿದ್ದರೋ, ಅದೇ ರಾಹುಲ್ ಗಾಂಧಿ ಈಗ ತಮ್ಮದೇ ಪಕ್ಷದ ಸಿಎಂ ಒಬ್ಬರ ಅಳಿಯ ಬ್ಯಾಂಕ್ ಹಗರಣದಲ್ಲಿ ಸಿಲುಕಿದ್ದಾರೆ. ಈ ಕುರಿತು ಇದುವರೆಗೂ ರಾಹುಲ್ ಗಾಂಧಿ ಅವರು ತುಟಿ ಬಿಚ್ಚಿಲ್ಲ ಎಂಬುದು ಅವರ ಇಬ್ಬಂದಿತನಕ್ಕೆ ಸಾಕ್ಷಿಯಾಗಿದೆ.
Leave A Reply