ಬ್ಯಾಂಕ್ ಹಗರಣದ ಕುರಿತು ಮಾತಾಡಿದ್ದ ಕಾಂಗ್ರೆಸ್ ಅಮರಿಂದರ್ ಅಳಿಯನ ಅವಾಂತರವಾದ ಕೂಡಲೇ ಟ್ವೀಟ್ ಡಿಲೀಟ್ ಮಾಡಿತು!

ದೆಹಲಿ: ಇತ್ತೀಚೆಗಷ್ಟೇ ಬಾಲಿವುಡ್ ನಟಿ ಶ್ರೀದೇವಿ ಮೃತಪಟ್ಟ ಬಳಿಕ, ಅವರ ಸಾವಿಗೆ ಸಂತಾಪ ಸೂಚಿಸುವಲ್ಲಿ ರಾಜಕೀಯ ಕುತಂತ್ರ ಮಾಡಿದ್ದ ಕಾಂಗ್ರೆಸ್, ಬಳಿಕ ಟೀಕೆಗಳು ವ್ಯಕ್ತವಾದ ಹಿನ್ನೆಲೆ ತಾನು ಮಾಡಿದ ರಾಜಕೀಯ ಪ್ರೇರಿತ ಟ್ವೀಟ್ ಅನ್ನೇ ಡಿಲೀಟ್ ಮಾಡಿತ್ತು.
ಈಗ ಇದೇ ಕಾಂಗ್ರೆಸ್ಸಿನ ಮತ್ತೊಂದು ಊಸರವಳ್ಳಿತನ ಬಯಲಾಗಿದ್ದು, ಬ್ಯಾಂಕಿಂಗ್ ಹಗರಣದಲ್ಲಿ ತಾನು ತೋಡಿದ ಹಳ್ಳಕ್ಕೇ ತಾನೇ ಬಿದ್ದ ಹಿನ್ನೆಲೆಯಲ್ಲಿ ಟ್ವೀಟ್ ಡಿಲೀಟ್ ಮಾಡಿದೆ.
ಹೌದು, ಪಂಜಾಬಿನಲ್ಲಿ ಸಿಂಬಾಹೋಲಿ ಶುಗರ್ ಕಂಪನಿ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ನಿಂದ ಸುಮಾರು 200 ಕೋಟಿ ರೂ. ಸಾಲ ಪಡೆದು ವಂಚನೆ ಮಾಡಿದ ಪ್ರಕರಣ ಸುದ್ದಿಯಾಗುತ್ತಲೇ ಎಚ್ಚೆತ್ತುಕೊಂಡ ಕಾಂಗ್ರೆಸ್ “ನರೇಂದ್ರ ಮೋದಿ ಅವರ ಮೂಗಿನ ಕೆಳಗೆ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ” ಎಂದು ಟ್ವೀಟ್ ಮಾಡಿತ್ತು.
ಆದರೆ ಯಾವಾಗ ಹಗರಣದಲ್ಲಿ ಸಿಎಂ ಅಮರಿಂದರ್ ಸಿಂಗ್ ಅಳಿಯ (ಮಗಳ ಗಂಡ) ಸಹ ಹಗರಣದಲ್ಲಿ ಭಾಗಿಯಾಗಿದ್ದು, ಆತನ ವಿರುದ್ಧವೇ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ಗೊತ್ತಾಯಿತೋ, ಆಗ ಬಾಲ ಸುಟ್ಟ ಬೆಂಕಿನಂತಾದ ಕಾಂಗ್ರೆಸ್ ಟ್ವೀಟ್ ಅನ್ನೇ ಡಿಲೀಟ್ ಮಾಡಿದೆ.
ಇದುವರೆಗೆ ಬ್ಯಾಂಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಮೋದಿ ಅವರನ್ನೇ ಟೀಕಿಸುತ್ತಿದ್ದ ರಾಹುಲ್ ಗಾಂಧಿ, ಈಗ ಎರಡು ದಿನದಿಂದ ಸುಮ್ಮನಾಗಿದ್ದಾರೆ. ಅಷ್ಟರಮಟ್ಟಿಗೆ ತಾನೇ ತೋಡಿದ ಹಳ್ಳಕ್ಕೆ ಕಾಂಗ್ರೆಸ್ ಜಾರಿಬಿದ್ದಿದೆ.