ಬಣ್ಣದೋಕುಳಿಯ ಹಬ್ಬಕ್ಕೆ ಕೇಂದ್ರ ಸಹಕಾರ, 500 ವಿಶೇಷ ರೈಲು ಬಿಡುಗಡೆ
ದೆಹಲಿ: ಸದಾ ಜನಪರ ಯೋಜನೆಗಳನ್ನು ಕೈಗೊಳ್ಳುವ ಕೇಂದ್ರ ಸರ್ಕಾರ, ಜನರಿಗೆ ತೊಂದರೆಯಾಗದಂತೆ ಹಬ್ಬ, ಹರಿದಿನಗಳಲ್ಲಿ ವಿಶೇಷ ಯೋಜನೆಗಳನ್ನು ಕೈಗೊಳ್ಳುತ್ತಾ ಜನರಿಗೆ ಸಹಕರಿಸುತ್ತಿದೆ. ಇದೀಗ ಹಿಂದೂಗಳು ಅತ್ಯಂತ ಅದ್ದೂರಿ, ಶ್ರದ್ಧೆ, ಭಕ್ತಿ, ಸಂಭ್ರಮದಿಂದ ಆಚರಿಸುವ ಹೋಳಿ ಹಬ್ಬದ ನಿಮಿತ್ತ ರೈಲುಗಳಲ್ಲಿ ದಟ್ಟಣೆ ತಪ್ಪಿಸಲು 500 ವಿಶೇಷ ರೈಲುಗಳನ್ನು ಬಿಡುಗಡೆ ಮಾಡುವ ಮೂಲಕ ಅನುಕೂಲ ಕಲ್ಪಿಸಿದೆ.
ಈ ಕುರಿತು ಪಟ್ಟಿ ಬಿಡುಗಡೆ ಮಾಡಿರುವ ಭಾರತೀಯ ರೈಲ್ವೆ ಇಲಾಖೆ ವಿಶೇಷ ಅತಿ ಹೆಚ್ಚು ಜನಸಂಖ್ಯೆ ಇರುವ ಮತ್ತು ಅದ್ದೂರಿಯಾಗಿ ಸಾಮೂಹಿಕ ಹೋಳಿ ಆಚರಿಸುವ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಬಿಹಾರ್ ಗಳಿಗೆ ನಾನಾ ರಾಜ್ಯಗಳಿಂದ ವಿಶೇಷ ರೈಲುಗಳ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಮಾರ್ಚ್ 2 ರಂದು ದೇಶಾದ್ಯಂತ ಹೋಳಿ ಹಬ್ಬ ಆಚರಿಸುತ್ತಿದ್ದು, ದೆಹಲಿ, ಉತ್ತರ ಪ್ರದೇಶ, ಜಮ್ಮು, ಜಾರ್ಖಂಡ್ ಮಧ್ಯೆ ಅತಿ ಹೆಚ್ಚು ರೈಲುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಕಳೆದ ವರ್ಷ 440 ವಿಶೇಷ ರೈಲುಗಳನ್ನು ಬಿಡುಗಡೆ ಮಾಡುವ ಮೂಲಕ ಹಿಂದೂಗಳಿಗೆ ಹೋಳಿ ಹಬ್ಬದ ವೇಳೆ ಪ್ರಯಾಣಕ್ಕೆ ಕೇಂದ್ರ ಸರ್ಕಾರ ಅನುಕೂಲ ಕಲ್ಪಿಸಿಕೊಟ್ಟಿತ್ತು. ಇದೀಗ ಪ್ರಸಕ್ತ ವರ್ಷವೂ ಹೋಳಿ ಹಬ್ಬದ ವೇಳೆ ಸಂಚರಿಸುವ ಜನರಿಗೆ ಅನುಕೂಲವಾಗಲಿ, ರೈಲಿನಲ್ಲಿ ದಟ್ಟಣೆಗೆ ತಡೆಯೊಡ್ಡುವ ಉದ್ದೇಶದಿಂದ ದೇಶಾದ್ಯಂತ 500 ವಿಶೇಷ ರೈಲುಗಳನ್ನು ಬಿಡುಗಡೆ ಮಾಡಲಾಗಿದೆ.
Leave A Reply