ಭಾರತದ ವಿರುದ್ಧ ಮಾತಾಡಿದರೆ ಹುಷಾರ್!
ಭಾರತ ಹಿಂದೆಂದೂ ರಾಷ್ಟ್ರದ ಅಸ್ಮಿತೆಯ ವಿಚಾರದಲ್ಲಿ ಇಷ್ಟು ಏಕವಾಗಿ ನಿಂತಿರಲಿಲ್ಲವೆನಿಸುತ್ತದೆ. ಭಾರತೀಯರನ್ನು ಒಗ್ಗೂಡಿಸಲು ಯುದ್ಧವೇ ಆಗಬೇಕೆಂಬ ಕಾಲವಿಲ್ಲ ಈಗ. ಭಾರತದ ವಿರುದ್ಧ ಯಾರು ಮಾತನಾಡಿದರೂ ಪಕ್ಷಭೇದ ಮರೆತು, ಜಾತಿ ಭೇದ ತೊರೆದು ಭಾರತೀಯರು ಒಗ್ಗಟ್ಟಾಗಿಬಿಡುತ್ತಾರೆಂಬುದಕ್ಕೆ ಟ್ರೂಡೋನ ಭಾರತ ಪ್ರವಾಸವೇ ಸಾಕ್ಷಿ!
‘ಭಾರತ ಬದಲಾಗಿದೆ. ಅವರೀಗ ರಾಷ್ಟ್ರದ ಉನ್ನತಿಗಾಗಿ ಯಾರೊಂದಿಗೆ ಬೇಕಿದ್ದರೂ ಮೈತ್ರಿ ಮಾಡಿಕೊಳ್ಳಲು, ಮೈತ್ರಿ ಮುರಿದುಕೊಳ್ಳಲೂ ಸಿದ್ಧರಿದ್ದಾರೆ. ನಾವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ’ ಹಾಗಂತ ಕೆಲವು ತಿಂಗಳ ಹಿಂದೆ ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆ ವರದಿ ಮಾಡಿತ್ತು. ಅದರ ಅರ್ಥ ಅನೇಕರಿಗೆ ಆಗ ಆಗಿರಲಿಕ್ಕಿಲ್ಲ, ಮೊನ್ನೆ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರೂಡೋಗೆ ಭಾರತ ನೀಡಿದ ನೀರಸ ಸ್ವಾಗತ ಕಂಡ ಮೇಲೆ ಅನೇಕರು ಬಾಯಿಯ ಮೇಲೆ ಬೆರಳಿಟ್ಟು ಕುಳಿತಿದ್ದಾರೆ. ಟ್ರೂಡೋ ಕೆನಡಾದ ರಾಹುಲ್ ಗಾಂಧಿ ಎನ್ನುವುದು ಭಾರತೀಯರಿಗೆ ಅನ್ನಿಸಿದ್ದರಲ್ಲಿ ಅಚ್ಚರಿಯಿಲ್ಲ!
ಟ್ರೂಡೋ ತನ್ನ ತಾನು ಲಿಬರಲ್ ಎಂದು ಕರೆದುಕೊಳ್ಳ ಬಯಸುವ ವ್ಯಕ್ತಿ. ಸ್ತ್ರೀ ಪರ, ಸ್ವಾತಂತ್ರ್ಯದ ಪರ, ಜೀವ ಪರ, ಯುದ್ಧ ವಿರೋಧಿ, ಸಮಾನತೆಯ ಚಿಂತಕ ಎಂದೆಲ್ಲ ಪೋಸು ಕೊಡಲು ಕಾಯುತ್ತಿರುವವ. ತನ್ನ ಈ ಚಹರೆಯಿಂದಾಗಿಯೇ ಜಗತ್ತಿನ ಲಿಬರಲ್ ಪತ್ರಕರ್ತರ ಮನಸ್ಸನ್ನು ಕದ್ದವ ಆತ. ಈ ಪತ್ರಕರ್ತರು ಮೆಚ್ಚುವ ಹೇಳಿಕೆ ಕೊಟ್ಟು ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುವ ಪ್ರಯತ್ನವೇ ಆತನದ್ದು. ಇತ್ತೀಚಿಗೆ ಹೆಣ್ಣುಮಗುವೊಬ್ಬಳು ಮಾತನಾಡುವಾಗ ಮಧ್ಯೆ ಬಾಯಿ ಹಾಕಿ, ‘ಮ್ಯಾನ್ಕೈಂಡ್’ ಎನ್ನುವ ಪದ ಬಳಸಬಾರದು ‘ಪೀಪಲ್ಕೈಂಡ್’ ಎನ್ನಬೇಕು; ಮ್ಯಾನ್ಕೈಂಡ್ನಲ್ಲಿ ಪುರುಷರಿಗೆ ಮಾತ್ರ ಅವಕಾಶವಿದೆ ಎಂದು ಹೇಳಿ ಅಪಹಾಸ್ಯಕ್ಕೀಡಾಗಿದ್ದ!
ಜನಸಂಖ್ಯೆಯಲ್ಲಿ ಕೆನಡಾದ ಎರಡನೇ ದೊಡ್ಡ ಪಂಗಡವಾಗಿರುವ ಮುಸಲ್ಮಾನರ ತುಷ್ಟೀಕರಣದ ವಿಚಾರದಲ್ಲೂ ಟ್ರೂಡೋ ನಮ್ಮ ಕಾಂಗ್ರೆಸ್ಸಿಗೆ ಸಮರ್ಥ ಪೈಪೋಟಿಯಾಗಬಲ್ಲರು. ಇತ್ತೀಚೆಗೆ ನಿವೃತ್ತ ಸೈನಿಕರಿಗೆ ಪೆನ್ಶನ್ ಹೆಚ್ಚಿಸಬೇಕೆನ್ನುವ ವಾದ ಮಂಡಿಸುತ್ತ, ಅಲ್ಕೈದಾದ ಉಗ್ರನೊಬ್ಬನಿಗೆ ಹಣಕಾಸು ನೆರವನ್ನು ನೀಡಿ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರನ್ನು ಕೆನಡಾದೊಳಕ್ಕೆ ಬಿಟ್ಟುಕೊಳ್ಳುತ್ತಿರುವುದೇಕೆಂದು ಕೇಳಿದ್ದಕ್ಕೆ, ಜರ್ಮನಿಯ ನಾಝೀಗಳ ಕಾಟ ತಡೆಯಲಾಗದೇ ಬಂದವರಿಗೆ ಆಶ್ರಯ ಕೊಡಲಿಲ್ಲವೇ ಹಾಗೆಯೇ ಇದು ಎಂಬ ಉಡಾಫೆಯ ಉತ್ತರ ಕೊಟ್ಟಿದ್ದರು. ಅವರನ್ನು ಮೂಲ ಕೆನಡಿಗರು ದ್ವೇಷಿಸಲಾರಂಭಿಸಿರುವುದು ಇದೇ ಕಾರಣಕ್ಕೆ. ಟ್ರೂಡೋ ರಾಷ್ಟ್ರದ ಹಿತಾಸಕ್ತಿಯನ್ನು ಬಲಿಕೊಟ್ಟು ಅಧಿಕಾರ ಉಳಿಸಿಕೊಳ್ಳಲೆಂದೇ ವಲಸಿಗರ ಪರವಾಗಿ ಬಲವಾಗಿ ನಿಂತಿದ್ದಾರೆ. ಇಷ್ಟಕ್ಕೂ ವಲಸಿಗರಿಗೆ ಈತ ಪ್ರತಿನಿಧಿಸುವ ಲಿಬರಲ್ ಪಕ್ಷ ಬಲು ಇಷ್ಟ. ಈ ಪಕ್ಷ ಸಿರಿವಂತರಿಗೆ ಹೆಚ್ಚು ತೆರಿಗೆ ಹಾಕಿ ಅದನ್ನು ಉಳಿದವರಿಗಾಗಿ ಖರ್ಚು ಮಾಡುತ್ತದೆ. ವಲಸಿಗರ ಹಿತ ರಕ್ಷಣೆಗಾಗಿ ರಾಷ್ಟ್ರದ ಕಾನೂನುಗಳನ್ನು ಬೇಕಿದ್ದರೂ ಬದಲಾಯಿಸುತ್ತದೆ. ಹೀಗಾಗಿ ಅವರುಗಳ ಸಹಕಾರ ಈ ಪಕ್ಷಕ್ಕೇ! ಬಾಂಗ್ಲಾ ವಲಸಿಗರನ್ನು ಶತಾಯ ಗತಾಯ ಇಲ್ಲಿ ಉಳಿಸಲು ಕಾಂಗ್ರೆಸ್ಸು ಹೆಣಗಾಡುತ್ತದಲ್ಲ ಅದೇ ರೀತಿ. ಕೆನಡಾದ ಮೂರನೇ ದೊಡ್ಡ ಪಕ್ಷವಾದ ನ್ಯಾಶನಲ್ ಡೆಮೊಕ್ರಾಟಿಕ್ ಪಾಟರ್ಿ ಭಾರತೀಯ ಮೂಲದ ಸಿಖ್ ಪ್ರಜೆ ಜಗಮೀತ್ ಸಿಂಗ್ರನ್ನು ತನ್ನ ಅಧ್ಯಕ್ಷನಾಗಿ ಆಯ್ಕೆ ಮಾಡಿಕೊಂಡಿದೆ. ಈ ಪಕ್ಷ ತುಷ್ಟೀಕರಣದಲ್ಲಿ ಟ್ರೂಡೋನ ಲಿಬರಲ್ ಪಾಟರ್ಿಗಿಂತಲೂ ಒಂದು ಹೆಜ್ಜೆ ಮುಂದೆ. ಮುಸಲ್ಮಾನರ ಓಲೈಕೆಗೆಂದೇ ಡೆಮೊಕ್ರಾಟಿಕ್ ಪಾಟರ್ಿ ಹೆಣ್ಣು ಮಕ್ಕಳು ಧರಿಸುವ ಹಿಜಾಬ್ನ್ನೂ ಸಮಥರ್ಿಸುತ್ತಿದೆ. ಟ್ರೂಡೋಗೆ ಗಾಬರಿಹುಟ್ಟಿಸುವಷ್ಟು ಪೈಪೋಟಿ.
ಹಾಗೆ ನೋಡಿದರೆ, ಟ್ರೂಡೋ ಪ್ರಧಾನಿಯಾಗಿ ಆಯ್ಕೆಯಾದಾಗ ಭಾರತ ಸಂಭ್ರಮದಿಂದ ಕುಣಿದಾಡಿತ್ತು. ಏಕೆಂದರೆ ಆತ ರಚಿಸಿದ ಕ್ಯಾಬಿನೆಟ್ಟಿನಲ್ಲಿ ನಾಲ್ಕು ಜನ ಭಾರತೀಯ ಮೂಲದ ಸಿಖ್ರಿದ್ದರು. ಒಂದೆಡೆ ಮೋದಿ, ಮತ್ತೊಂದೆಡೆ ಟ್ರಂಪ್; ಒಂದೆಡೆ ಪುತಿನ್, ಮತ್ತೊಂದೆಡೆ ನೆತನ್ಯಾಹು ಇವರೆಲ್ಲ ದೇಶ ಮೊದಲು ಎನ್ನುವ ಸೈದ್ಧಾಂತಿಕ ಆಧಾರದ ಮೇಲೆ ಸೌಹಾರ್ದಯುತ ಜಗತ್ತನ್ನು ಕಟ್ಟುವ ಕಲ್ಪನೆ ಹರಿಬಿಟ್ಟಿದ್ದರು. ರಾಷ್ಟ್ರದ ವಿಚಾರದಲ್ಲಿ ಕಠೋರತೆಯನ್ನು ಮುಲಾಜಿಲ್ಲದೇ ಪಾಲಿಸುತ್ತಿದ್ದರು. ಇಂತಹ ಹೊತ್ತಲ್ಲಿ ಚಾಕಲೇಟ್ ಹೀರೋನಂತೆ ಬಂದು ಕುಳಿತ ಟ್ರೂಡೋನನ್ನು ಸಹಜವಾಗಿಯೇ ಲಿಬರಲ್ ಮಾಧ್ಯಮದ ಪತ್ರಕರ್ತರು ಅಪ್ಪಿಕೊಂಡುಬಿಟ್ಟರು. ಅವನನ್ನು ಹೊಗಳಿ ಅಟ್ಟಕ್ಕೇರಿಸಿದರು. ಸ್ವಂತ ಬುದ್ಧಿ, ಸಾಮಥ್ರ್ಯ ಎರಡೂ ಇಲ್ಲದವನನ್ನು ಹೊರಗಿನಿಂದ ಅದೆಷ್ಟೇ ಗಾಳಿ ತುಂಬಿ ಮೇಲೇರಿಸಿದರೂ ಕುಸಿಯುವುದು ಖಾತ್ರಿ ಎಂಬ ಅರಿವು ಅವರಿಗಿರಲಿಲ್ಲವೆಂದೇನಲ್ಲ. ಆದರೆ ತುತರ್ಾಗಿ ತಮ್ಮ ವಿಚಾರಧಾರೆಗಳನ್ನು ಹರಡಿಸಲು ಅವರಿಗೊಂದು ಮುಖವಾಡಬೇಕಿತ್ತು ಅಷ್ಟೇ. ರಾಹುಲ್ನನ್ನು ಭಾರತೀಯ ಮಾಧ್ಯಮ ಬಳಸಿಕೊಂಡಂತೆ ಇದೂ.
ಬಾಯಲ್ಲಿ ಶಾಂತಿಯ ಮಾತನಾಡುತ್ತ ಜಾಗತಿಕ ಶಾಂತಿಯ ದೂತನೆಂಬ ಪೋಸು ಕೊಟ್ಟ ಟ್ರೂಡೋ ಸೌದಿಯೊಂದಿಗೆ 15 ಬಿಲಿಯನ್ ಡಾಲರುಗಳ ಒಪ್ಪಂದ ಮಾಡಿಕೊಂಡು ಶಸ್ತ್ರಾಸ್ತ್ರ ಮಾರಾಟ ಮಾಡಿದರು. ಇದೇ ಶಸ್ತ್ರಗಳನ್ನು ಮುಂದೆ ಸೌದಿ ಯೆಮೆನ್ನಲ್ಲಿ ಬಳಕೆ ಮಾಡಿತೆಂಬ ವರದಿ ಬಂತು. ಅಲ್ಲಿಂದ ಟ್ರೂಡೋನ ಆಡಳಿತ ವೈಖರಿಯ ಬಗ್ಗೆ ಗಲಾಟೆಗಳು ಶುರುವಾದವು. ಮುಂದೆ ಫಿಲಿಪೈನ್ಸ್ಗೆ ಶಸ್ತ್ರ ಮಾರಾಟ ಮಾಡುವಾಗ ಆತ ಜಾಗತಿಕ ಶಾಂತಿ, ಪ್ರೇಮ, ಮಾನವೀಯತೆ ಎಂಬೆಲ್ಲ ಭಾಷಣ ಕುಟ್ಟದೇ ಎಲ್ಲವನ್ನೂ ಗುಪ್ತವಾಗಿ ಮಾಡಿ ಮುಗಿಸಿದ. ಅಲ್ಲಿಗೆ ಲಿಬರಲ್ಗಳು ಮಾಡೋದೆಲ್ಲ ನಾಟಕ, ಹಣದ ಮುಂದೆ ಶಾಂತಿ, ಸೌಹಾರ್ದವೆಂಬ ಮೌಲ್ಯಗಳಿಗೆ ನಯಾಪೈಸೆ ಕಿಮ್ಮತ್ತಿಲ್ಲವೆಂಬುದು ತರುಣರಿಗೆ ಮನದಟ್ಟಾಯ್ತು. ಟ್ರೂಡೋನ ಪ್ರಭೆ ಕಮ್ಮಿಯಾಗುತ್ತಿದ್ದರೆ ಅತ್ತ ಡೆಮೊಕ್ರಾಟಿಕ್ ಪಾಟರ್ಿ ಓಲೈಕೆ ರಾಜಕಾರಣದಲ್ಲಿ ಒಂದು ಹೆಜ್ಜೆ ಮುಂದಿತ್ತು. ಅದರ ಓಟಕ್ಕೆ ತಡೆ ಹಾಕಲು ಸಿಖ್ರ ಸಮಸ್ಯೆಗಳಿಗೆ ಶಕ್ತಿ ತುಂಬಬಲ್ಲ ನಾಯಕ ತಾನೇ ಎಂಬುದನ್ನು ತೋರ್ಪಡಿಸಿಕೊಳ್ಳುವ ದದರ್ು ಟ್ರೂಡೋಗೆ ಇತ್ತು. ಈ ಹಿನ್ನೆಲೆಯಲ್ಲಿಯೇ ಆತ ಕಳೆದ ವರ್ಷ ಖಾಲಿಸ್ತಾನ್ ಭಯೋತ್ಪಾದಕರ ಕಾರ್ಯಕ್ರಮವೊಂದಕ್ಕೆ ಹೋಗಿ ಅವರ ಪರವಾಗಿ ಮಾತನಾಡಿ ಭಾರತದ ವಿರೋಧಿಯಾಗಿ ಬಿಂಬಿಸಲ್ಪಟ್ಟಿದ್ದ. ಹಾಗೆಂದೇ ಆತನ ಭಾರತದ ಪ್ರವಾಸಕ್ಕೆ ವಿಶೇಷ ಮಹತ್ವವಿತ್ತು.
ಆದರೆ ಆತ ಭಾರತದ ನಾಡಿ ಮಿಡಿತವನ್ನು ಅರಿಯುವಲ್ಲಿ ಸೋತಿದ್ದ. ಇಲ್ಲವಾದಲ್ಲಿ ಭಾರತಕ್ಕೆ ಬರುವ ಮುನ್ನ ಪಂಜಾಬಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಈ ಪ್ರತ್ಯೇಕತಾವಾದಿಗಳ ವಿರುದ್ಧವಾಗಿದ್ದಾರೆಂಬ ಕಾರಣಕ್ಕೆ ತಾನು ಅವರ ಭೇಟಿ ಮಾಡುವುದಿಲ್ಲವೆಂಬ ಮಾತನ್ನು ಆತ ಹೇಳುತ್ತಿರಲಿಲ್ಲ. ಭಾರತ ಇದಕ್ಕೆ ವಿಶೇಷ ಪ್ರತಿಕ್ರಿಯೆ ನೀಡಲಾರದೆಂಬ ದೃಢ ವಿಶ್ವಾಸ ಅವನಿಗಿತ್ತು. ಇನ್ನೂರು ವರ್ಷಗಳ ಕಾಲ ಆಂಗ್ಲರ ಗುಲಾಮವಾಗಿದ್ದ, ಐವತ್ತು ವರ್ಷಗಳ ಕಾಲ ಕಾಂಗ್ರೆಸ್ಸಿನ ಆಳ್ವಿಕೆಯಲ್ಲಿದ್ದ ರಾಷ್ಟ್ರವೊಂದು ಸ್ವಾಭಿಮಾನಿಯಾಗಿ ಯೋಚಿಸಲಾರದೆಂಬುದು ಆತನ ಭಾವನೆ. ಆದರೆ ಈಗಿನ ಪ್ರಧಾನಿ ನರೇಂದ್ರ ಮೋದಿ ಎಂಬುದನ್ನು ಆತ ಮರೆತಿದ್ದಂತೆ ಕಾಣುತ್ತದೆ. ಆತ ಭಾರತಕ್ಕೆ ಬರುವ ಮುನ್ನವೇ ಆತನಿಗೆ ಕೊಡಬೇಕಿದ್ದ ಗೌರವದ ಕುರಿತಂತೆ ಭಾರತ ಯೋಚಿಸಿಯಾಗಿತ್ತು. ಭಾರತದ ಏಕತೆಯ ವಿಚಾರದಲ್ಲಿ ಕೆನಡಾ ತೋರುತ್ತಿರುವ ನಡೆಯ ವಿರುದ್ಧ ಸೂಕ್ಷ್ಮವಾಗಿ ಪ್ರತಿಭಟಿಸಲು ಇದು ಸದವಕಾಶವಾಗಿತ್ತು. ಒಬಾಮಾ, ನೆತನ್ಯಾಹು, ಜಿಂಪಿಂಗ್ ಇವರಿಗೆಲ್ಲ ಸಿಕ್ಕ ಗೌರವ ತನಗೂ ದೊರೆಯುವುದೆಂದೂ, ಭಾರತದ ಪತ್ರಿಕೆಗಳಲ್ಲಿ ತಾನು ಮಿಂಚಲಿರುವೆನೆಂದೂ ಕನಸು ಕಟ್ಟಿಕೊಂಡೇ ಟ್ರೂಡೋ ಭಾರತಕ್ಕೆ ಕಾಲಿಟ್ಟ. ನರೇಂದ್ರ ಮೋದಿ ಮುಲಾಜಿಲ್ಲದೇ ಅವನ ಯೋಗ್ಯತೆಯನ್ನು ಪರಿಚಯಿಸಿಕೊಟ್ಟರು. ಭಾರತದ ಏಕತೆ, ಅಖಂಡತೆಗಳಿಗೆ ಧಕ್ಕೆ ತರುವವನಿಗೆ ಇಲ್ಲಿ ಕಿಮ್ಮತ್ತಿಲ್ಲವೆಂಬುದನ್ನು ಸೂಚ್ಯವಾಗಿ ತಿಳಿಸಲೆಂದೇ ಟ್ರೂಡೋನ ಸ್ವಾಗತಕ್ಕೆ ಅವರು ಟ್ವೀಟ್ ಕೂಡ ಮಾಡಲಿಲ್ಲ. ಬೇರೆಯವರೆಲ್ಲ ಬಂದಾಗ ಶಿಷ್ಟಾಚಾರವನ್ನೂ ಮರೆತು ವಿಮಾನ ನಿಲ್ದಾಣಕ್ಕೆ ಧಾವಿಸುತ್ತಿದ್ದ ಮೋದಿ ಕೆನಡಾದ ಪ್ರಧಾನಿ ಬಂದಾಗ ತಾವು ಹೋಗುವುದಿರಲಿ ತಮ್ಮ ಪ್ರಮುಖ ಮಂತ್ರಿಯನ್ನೂ ಕಳಿಸಲಿಲ್ಲ. ಪಂಜಾಬಿನ ಮುಖ್ಯಮಂತ್ರಿ ಅಮರಿಂದರ್ ಕಾಂಗ್ರೆಸ್ಸಿಗೆ ಸೇರಿರುವುದರಿಂದ ಅವರ ವಿರುದ್ಧ ಹೇಳಿಕೆ ಕೊಟ್ಟರೆ ನಷ್ಟವೇನೂ ಆಗಲಾರದೆಂದುಕೊಂಡಿದ್ದರು ಟ್ರೂಡೋ. ದೇಶ ಮೊದಲು ಎನ್ನುವ ಚಿಂತನೆಯಿರುವ ಅಮರಿಂದರ್ ಮತ್ತು ಮೋದಿ ದೇಶ ವಿಭಜಿಸುವ ಶಕ್ತಿಗಳ ವಿರುದ್ಧ ಒಂದೇ ರೀತಿ ಆಲೋಚಿಸುತ್ತಾರೆ ಎಂಬ ಲೆಕ್ಕಾಚಾರ ಅವರಿಗಿರಲಿಲ್ಲ. ಆಗ್ರಾಕ್ಕೆ ಹೋದಾಗ ಅವರನ್ನು ಸ್ವಾಗತಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬರದೇ ಜಿಲ್ಲಾ ಮಟ್ಟದ ಸಾಮಾನ್ಯ ಅಧಿಕಾರಿಯನ್ನು ಕಳಿಸಿ ಸಮರ್ಥ ಸಂದೇಶ ಕೊಟ್ಟರು. ದೇಶದ ಏಕತೆಗೆ ಬದ್ಧರಾಗಿರುವ ಪಂಜಾಬಿನ ಮುಖ್ಯಮಂತ್ರಿಯನ್ನು ಭೇಟಿಯಾಗಲು ನಿರಾಕರಿಸಿರುವ ಟ್ರೂಡೋನನ್ನು ತಾನೂ ಭೇಟಿಯಾಗಲಾರೆ ಎಂದುಬಿಟ್ಟರು ಯೋಗೀಜಿ! ಅಲ್ಲಿಗೆ ಕೆನಡಾದ ಪ್ರಧಾನಿಯ ಭಾರತ ಆಗಮನದ ಉದ್ದೇಶ ಸಂಪೂರ್ಣ ಹಳ್ಳ ಹಿಡಿದಿತ್ತು. ಕೆನಡಾದ ಖ್ಯಾತ ಲೇಖಕಿಯೊಬ್ಬಳು ಆರಂಭದಲ್ಲಿ ತಮ್ಮ ಪ್ರಧಾನಿಗೆ ಅಗೌರವ ತೋರಿದ್ದಕ್ಕೆ ಆಕ್ರೋಶದಿಂದ ಟ್ವೀಟ್ ಮಾಡಿ ನಂತರ ಎಲ್ಲ ರಾದ್ಧಾಂತಗಳನ್ನು ಅರಿತ ಮೇಲೆ ಕ್ಷಮೆ ಕೇಳಿದ ಪ್ರಕರಣವೂ ನಡೆಯಿತು. ‘ನಮ್ಮ ಪ್ರಧಾನಿಯ ದಡ್ಡತನಕ್ಕೆ ಕ್ಷಮೆಯಿರಲಿ, ಕೆನಡಾ ಭಾರತದ ಏಕತೆಯ ಪರವಾಗಿ ನಿಲ್ಲುತ್ತದೆ’ ಎಂಬರ್ಥದ ಟ್ವೀಟ್ ಮಾಡಿ ಟ್ರೂಡೋಗೆ ಕೆನಡಾದಲ್ಲಿ ಸಿಗಬಹುದಾದ ಗೌರವವೆಂಥದ್ದಿರಬಹುದೆಂದು ಎಂಬ ಸಂದೇಶ ಕೊಟ್ಟರು.
ಟ್ರೂಡೋನ ಸಮಸ್ಯೆಗಳು ಮುಗಿದಿರಲಿಲ್ಲ. 1987ರಲ್ಲಿ ವ್ಯಾಂಕೊವರ್ಗೆ ಭೇಟಿ ನೀಡಿದ್ದ ಪಂಜಾಬಿನ ಮಂತ್ರಿ ಮಲ್ಕಿಯಾತ್ ಸಿಂಗ್ ಸಿಧುವನ್ನು ಕೊಲ್ಲುವ ಪ್ರಯತ್ನ ಮಾಡಿ ಶಿಕ್ಷೆಗೂ ಗುರಿಯಾಗಿದ್ದ ಜಸ್ಪಾಲ್ ಅತ್ವಾಲ್ನ್ನು ಊಟಕ್ಕೆ ಆಹ್ವಾನಿಸಿ ಮತ್ತೊಂದು ಗೊಂದಲ ಸೃಷ್ಟಿಸಿಕೊಂಡರು. ಪಂಜಾಬಿನ ಮುಖ್ಯಮಂತ್ರಿಗಳು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಕ್ಷಣ ಎಚ್ಚೆತ್ತ ಟ್ರೂಡೋ ತನ್ನ ಪಕ್ಷದ ಸಂಸದರೊಬ್ಬರ ತಪ್ಪಿನಿಂದಾದ ಸಮಸ್ಯೆಯಿದೆಂದು ಕ್ಷಮೆ ಕೇಳಿಸಿ ನುಣುಚಿಕೊಳ್ಳುವ ಯತ್ನ ಮಾಡಿದರಾದರೂ ಸಾಮಾಜಿಕ ಜಾಲತಾಣಗಳು ಸುಮ್ಮನಾಗಲಿಲ್ಲ. ಜಸ್ಪಾಲ್ಗೆ ಸಕರ್ಾರದಿಂದಲೇ ಅಧಿಕೃತ ಆಹ್ವಾನ ಹೋದದ್ದನ್ನು ಹೆಕ್ಕಿ ಮುಂದಿಟ್ಟರು. ಅಷ್ಟು ಸಾಲದೆಂಬಂತೆ ಆತನೊಂದಿಗೆ ಸ್ವತಃ ಪ್ರಧಾನಿ ಇರುವ ಅನೇಕ ಪಟಗಳನ್ನು ಹುಡುಕಿ ತೆಗೆದು ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ವ್ಯಕ್ತಿಗಳೊಂದಿಗೆ ಟ್ರೂಡೋ ಸಂಪರ್ಕ ಇರುವುದನ್ನು ಸಾಬೀತು ಪಡಿಸಿಬಿಟ್ಟರು. ಕೆನಡಾದಲ್ಲಿ ಆತನ ವಿರುದ್ಧ ಬೀಸುತ್ತಿದ್ದ ಗಾಳಿ ಈಗ ಮತ್ತೂ ಬಲವಾಯ್ತು. ತನ್ನಿಂದಾದ ಸಮಸ್ಯೆಯನ್ನು ಸರಿ ಪಡಿಸಲು ಟ್ರೂಡೋ ತಿಪ್ಪರಲಾಗ ಹೊಡೆದ. ಯಾತ್ರೆಯುದ್ದಕ್ಕೂ ಕುತರ್ಾ, ಪೈಜಾಮಾ ಧರಿಸಿ ಹೆಂಡತಿ-ಮಕ್ಕಳಿಗೂ ದೇಸೀ ಬಟ್ಟೆ ಹಾಕಿಸಿ; ಹೋದಲ್ಲೆಲ್ಲ ನಮಸ್ಕಾರ ಮುದ್ರೆಯಲ್ಲಿ ನಿಂತು ಪೋಸು ಕೊಟ್ಟ. ಈ ತರಹದ ವೇಷಕ್ಕೆ ಭಾರತ ಮಾರುಹೋಗುತ್ತದೆಂಬ ಐಡಿಯಾ ಬಖರ್ಾ, ರಾಜ್ದೀಪ್, ಸಾಗರಿಕಾರುಗಳೇ ಕೊಟ್ಟಿರಬೇಕು. ಅದಕ್ಕೇ ಸಾಗರಿಕಾ ಕೆನಡಾದ ಪ್ರಧಾನಿಗೆ ಗೌರವ ನೀಡದ ಮೋದಿಯ ವಿರುದ್ಧ ಕಿಡಿಕಾರಿ ಅತಿಥಿ ದೇವೋಭವ ಎಂದರೆ ಇದೇನಾ ಎಂದು ಕೇಳಿದ್ದರು. ಟ್ರೂಡೋನ ಭೇಟಿ ಶಾಹ್ರುಖ್, ಆಮೀರ್ರೊಂದಿಗೆ ಆಗುವಂತೆ ಈ ಲಿಬರಲ್ ಪತ್ರಕರ್ತರು ನೋಡಿಕೊಂಡರು. ಆದರೆ ಭಾರತೀಯ ಜನಮಾನಸದ ಮೇಲೆ ಅವ್ಯಾವುವೂ ಪ್ರಭಾವ ಬೀರಲೇ ಇಲ್ಲ. ಆತ ಹರಿದ ಜೇಬಿನ ಕುತರ್ಾ ಧರಿಸಿದ್ದ ರಾಹುಲ್ನಿಗಿಂತ ಭಿನ್ನವಾಗಿ ಕಾಣಲೇ ಇಲ್ಲ. ಭಾರತ ಟ್ರೂಡೋನನ್ನು ಸಂಪೂರ್ಣ ಧಿಕ್ಕರಿಸಿತು. ಭಾರತ ವಿರೋಧಿ ನಿಲುವು ತಳೆದರೆ ಏನಾಗುವುದೆಂಬ ಸ್ಪಷ್ಟ ಸಂದೇಶ ಮೋದಿ ರವಾನಿಸಿದ್ದರು.
ಮೆತ್ತಗಾಗಿ ಹೋಗಿದ್ದ ಟ್ರೂಡೋನನ್ನು ಸಮಯ ನೋಡಿ ಮೋದಿ ಟ್ವೀಟ್ನ ಮೂಲಕ ಅಭಿನಂದಿಸಿದರು. ಮಾತುಕತೆಗೆ ಕುಳಿತು ಮಹತ್ವದ ಒಪ್ಪಂದಗಳಿಗೆ ಸಹಿ ಮಾಡಿಸಿಕೊಂಡರು. ಜಂಟಿ ಹೇಳಿಕೆಯಲ್ಲಿ ರಾಷ್ಟ್ರ ವಿಭಜನೆಯ ಕಾರ್ಯದಲ್ಲಿ ನಿರತವಾದ ಪ್ರತಿಯೊಂದೂ ಭಯೋತ್ಪಾದಕ ಚಟುವಟಿಕೆಗಳನ್ನೂ ವಿರೋಧಿಸುವುದಾಗಿ ಹೇಳಿಕೆ ಕೊಡಿಸಿದರು. ಅಲ್ಲಿಗೆ ಭಾರತದ ಸಾರ್ವಭೌಮತೆ ಸಾಬೀತುಗೊಂಡಿತ್ತು. ಮೋದಿ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಮಿಂಚಿದರು.
ಭಾರತ ಹಿಂದೆಂದೂ ರಾಷ್ಟ್ರದ ಅಸ್ಮಿತೆಯ ವಿಚಾರದಲ್ಲಿ ಇಷ್ಟು ಏಕವಾಗಿ ನಿಂತಿರಲಿಲ್ಲವೆನಿಸುತ್ತದೆ. ಭಾರತೀಯರನ್ನು ಒಗ್ಗೂಡಿಸಲು ಯುದ್ಧವೇ ಆಗಬೇಕೆಂಬ ಕಾಲವಿಲ್ಲ ಈಗ. ಭಾರತದ ವಿರುದ್ಧ ಯಾರು ಮಾತನಾಡಿದರೂ ಪಕ್ಷಭೇದ ಮರೆತು, ಜಾತಿ ಭೇದ ತೊರೆದು ಭಾರತೀಯರು ಒಗ್ಗಟ್ಟಾಗಿ ಬಿಡುತ್ತಾರೆಂಬುದಕ್ಕೆ ಟ್ರೂಡೋನ ಭಾರತ ಪ್ರವಾಸವೇ ಸಾಕ್ಷಿ! ಅಂದಹಾಗೆ ವರದಿಗಳ ಪ್ರಕಾರ ಈ ಪ್ರವಾಸದ ನಂತರ ಜಸ್ಟಿನ್ ಟ್ರೂಡೋನ ಮೌಲ್ಯ ಕೆನಡಾದಲ್ಲಿ ಸಾಕಷ್ಟು ಕುಸಿದಿದೆ. ಜನರ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಆತ ತಡಬಡಾಯಿಸುತ್ತಿದ್ದಾನೆ. ಬರಲಿರುವ ಚುನಾವಣೆಯಲ್ಲಿ ಆತ ಸೋಲುವುದು ಖಾತ್ರಿಯೆಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ. ಹಾಗೇನಾದರೂ ಆದರೆ ಆತನ ಸೋಲಿನ ಪೆಟ್ಟಿಗೆಗ ಕೊನೆಯ ಮೊಳೆ ಹೊಡೆದದ್ದು ನಾವೇ ಎಂದಾಗುತ್ತದೆ. ಭಾರತದೊಂದಿಗೆ ಎಚ್ಚರವಾಗಿರಿ ಎಂಬ ಸಂದೇಶ ಈಗಂತೂ ಸ್ಪಷ್ಟವಾಗಿ ರವಾನೆಯಾಗಿದೆ.
ಅಂದಹಾಗೆ ಈ ಘಟನೆಯ ನಂತರ ಪಾಕೀಸ್ತಾನದ ಎಲ್ಲ ಋತು ಮಿತ್ರ ಚೀನಾ ಪಾಕೀಸ್ತಾನವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಸಹಾಯ ಮಾಡುತ್ತಿರುವ ರಾಷ್ಟ್ರವೆಂದು ಘೋಷಿಸಲು ಒಪ್ಪಿಗೆ ನೀಡಿದೆ. ಒಂದು ಕಲ್ಲಿಗೆ ಎರಡು ಹಕ್ಕಿ ಉದುರಿಸಿದ್ದಾರೆ ಮೋದಿ!
Leave A Reply