ಭೇಟಿಗೂ ಮುನ್ನವೇ ಮೋದಿಗೆ ಮನಸೋತ ಜೋರ್ಡಾನ್, ವೀಸಾ ನೀಡಲು ಒಪ್ಪಿಗೆ
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರೆಂದರೇನೆ ಹಾಗೆ. ಅವರಿಗೆ ಇಂದು ಇಡೀ ವಿಶ್ವವೇ ಗೌರವ ನೀಡುತ್ತಿದೆ. ಮೋದಿ ಅವರು ಪ್ರಧಾನಿಯಾಗುತ್ತಲೇ ಅಮೆರಿಕ ಕೆಂಪು ಹಾಸು ಹಾಕಿ ಸ್ವಾಗತಿಸಿತು, ಚೀನಾ ಸಹ ಭಾರತವೆಂದರೆ ಭಯ ಬೀಳುವಂತಾಯಿತು, ಸೌದಿ ಹಿಂದೂ ದೇವಾಲಯವೇ ನಿರ್ಮಿಸಲು ಮುಂದಾಯಿತು.
ಹೀಗೆ ಭಾರತದ ಘನತೆಯನ್ನು ಮೋದಿ ಅವರು ಹೆಚ್ಚಿಸುತ್ತಿರುವ ಬೆನ್ನಲ್ಲೇ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮತ್ತೊಂದು ಗೌರವ ಸಿಕ್ಕಿದ್ದು, ಮೋದಿ ಅವರನ್ನು ಭೇಟಿಗೂ ಮುನ್ನವೇ ಜೋರ್ಡಾನ್ ಗೆ ತೆರಳಲು ಭಾರತೀಯರಿಗೆ ವೀಸಾ ನೀಡುವುದಾಗಿ ಜೋರ್ಡಾನ್ ಸರ್ಕಾರ ಘೋಷಿಸಿದೆ.
ಹೌದು, ಶುಕ್ರವಾರ ಜೋರ್ಡಾನ್ ಅರಸ ಕಿಂಗ್ ಅಬ್ದುಲ್ಲಾ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಅದಕ್ಕೂ ಮೋದಲೇ ಜೋರ್ಡಾನ್ ಮಹತ್ತರ ನಿರ್ಧಾರವೊಂದು ಪ್ರಕಟಿಸಿದ್ದು, ಜೋರ್ಡಾನ್ ಗೆ ಭೇಟಿ ನೀಡುವ ಭಾರತೀಯರಿಗೆ ವೀಸಾ ಸೌಲಭ್ಯ ಒದಗಿಸುವುದಾಗಿ ಅಲ್ಲಿನ ಸರ್ಕಾರ ತಿಳಿಸಿದೆ.
ಅಲ್ಲದೆ ಜೋರ್ಡಾನ್ ಅರಸ ಭಾರತಕ್ಕೆ ಭೇಟಿ ನೀಡಿ, ದ್ವಿಪಕ್ಷೀಯ ಮಾತುಕತೆ ನಡೆಸುವ ಜತೆಗೆ, ಉಭಯ ರಾಷ್ಟ್ರಗಳ ನಡುವೆ ಮಹತ್ತರ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ.
ಎರಡೂ ದೇಶಗಳ ನಡುವೆ ಆರೋಗ್ಯ, ರಕ್ಷಣೆ, ಪರಸ್ಪರ ಸಹಕಾರ, ಉತ್ತಮ ಸೌಹಾರ್ದತೆ, ವ್ಯಾಪಾರ, ಸಂವಹನ ಸೇರಿ ಹಲವು ಕ್ಷೇತ್ರಗಳಲ್ಲಿ ಭಾರತ ಹಾಗೂ ಜೋರ್ಡಾನ್ ನಾಯಕರು ಮಹತ್ತರ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ ಎಂದು ತಿಳಿದುಬಂದಿದೆ.
Leave A Reply