ರಾಗಾ ದೇಶದ ಯಾವುದೇ ಬಿಜೆಪಿ ಮುಖಂಡರೊಂದಿಗೂ ಚರ್ಚೆಗೆ ಬರಲಿ, ಅವರ ಬುದ್ಧಿಮತ್ತೆ ತಿಳಿಯುತ್ತೇ: ಸ್ಮೃತಿ ಇರಾನಿ ಸವಾಲು

ದೆಹಲಿ: ಸದಾ ತಮ್ಮ ಎಡವಟ್ಟುಗಳ ಮೂಲಕ ಜನರನ್ನು ನಕ್ಕು ನಗಿಸುವ, ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸವಾಲು ಹಾಕಿದ್ದು, ರಾಹುಲ್ ಗಾಂಧಿ ದೇಶದ ಯಾವುದೇ ಮೂಲೆಯ ಬಿಜೆಪಿ ಕಾರ್ಯಕರ್ತ, ಮುಖಂಡರೊಂದಿಗೂ ಬಹಿರಂಗ ಚರ್ಚೆಗೆ ಬಂದರೂ ಉತ್ತರ ನೀಡಲಾಗುತ್ತದೆ. ನನ್ನೊಂದಿಗೆ ಬಹಿರಂಗ ಚರ್ಚೆಗೆ ಬಂದರೂ ಸರಿ ಎಂದು ಸವಾಲು ಹಾಕಿದ್ದಾರೆ.
ಕಲ್ಕತ್ತಾದಲ್ಲಿ ನಡೆದ ಸಂವಾದದಲ್ಲಿ ರಾಹುಲ್ ಗಾಂಧಿಯವರ ಬಗ್ಗೆ ಸಾರ್ವಜನಿಕರ ಬಳಿ ಬೆಳೆಯುತ್ತಿರುವ ಅಭಿಪ್ರಾಯದ ಬಗ್ಗೆ ಬಿಜೆಪಿ ಕಳವಳಕ್ಕೊಳಗಾಗಿದೆ ಎಂಬುದರ ಕುರಿತ ಪ್ರಶ್ನೆಗೆ ಉತ್ತರಿಸಿರುವ ಸ್ಮೃತಿ ಇರಾನಿ ‘ರಾಹುಲ್ ಗಾಂಧಿಯವರ ಬಗ್ಗೆ ವಾಸ್ತವ ಅರಿಯಲು ಬಹಿರಂಗ ಚರ್ಚೆಗೆ ಬರಲಿ. ಬಹಿರಂಗ ಚರ್ಚೆಗೆ ಬಂದಾಗ ಮಾತ್ರ ದೇಶದ ಸಾಮಾನ್ಯ ಜನರಿಗೆ ರಾಹುಲ್ ಗಾಂಧಿಯವರ ಮುಖವಾಡ ಮತ್ತು ಬುದ್ಧಿಮತ್ತೆ ತಿಳಿಯಲಿದೆ ಎಂದು ಸವಾಲು ಹಾಕಿದ್ದಾರೆ.
ಬಿಜೆಪಿಯ ಯಾವುದೇ ಮುಖಂಡ, ದೇಶದ ಯಾವುದೇ ಸ್ಥಳದಲ್ಲೂ ಚರ್ಚೆ ಏರ್ಪಡಿಸಿದ್ದರೂ ರಾಹುಲ್ ಗಾಂಧಿಯನ್ನು ಎದುರಿಸಬಹುದು. ಸಂವಾದ, ಚರ್ಚೆಯಲ್ಲಿ ರಾಹುಲ್ ಗಾಂಧಿಯವರ ವಾಸ್ತವ ಹೊರಬರುತ್ತೆ, ಅವರ ಬುದ್ಧಿಮತ್ತೆಯ ಅನಾವರಣವಾಗುತ್ತದೆ. ಅವರು ನನ್ನೊಂದಿಗೂ ಬಹಿರಂಗ ಚರ್ಚೆಗೆ ಬರುವುದಾದರೇ, ಚರ್ಚೆಗೆ ಸಿದ್ಧ ಎಂದು ಹೇಳಿದ್ದಾರೆ.
Leave A Reply