ಮಸೀದಿಗೆ ದಾರಿ ನೀಡಿ, ಸೌಹಾರ್ದತೆ ಮೆರೆದ ಹಿಂದೂಗಳು
ಫೈಜಬಾದ್: ಇದುವರೆಗೆ ಕೇವಲ ಹಿಂದೂ ಮುಸ್ಲಿಂ ಕೋಮು ಗಲಭೆಗೆ ಪ್ರಚಾರದಲ್ಲಿರುತ್ತಿದ್ದ ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಸ್ಥಾನಕ್ಕೇರಿದ ನಂತರ ಹೊಸ ಶಕೆ ಆರಂಭವಾಗಿದೆ. ಹಿಂದೂ, ಮುಸ್ಲಿಂ ಎನ್ನದೇ ಕಠಿಣ ನಿರ್ಧಾರಗಳ ಮೂಲಕ ಕ್ರಿಮಿನಲ್ ಗಳ ಹೆಡೆಮುರಿ ಕಟ್ಟಿರುವ ಯೋಗಿ ಸರ್ಕಾರ, ಶಾಂತಿ, ಸೌಹಾರ್ದತೆಯನ್ನು ಸಾರುತ್ತಿದೆ. ಇನ್ನು ವಿಶ್ವದಲ್ಲೇ ಶಾಂತಿ, ಸೌಹಾರ್ದತೆ, ಸಹಕಾರ ಮನೋಭಾವಕ್ಕೆ ಹೆಸರುವಾಸಿಯಾಗಿರುವ ಹಿಂದೂಗಳು ಉತ್ತರ ಪ್ರದೇಶದಲ್ಲಿ ಮುಸ್ಲಿಮರು ಮಸೀದಿಗೆ ಹೋಗಲು ರಸ್ತೆ ನಿರ್ಮಾಣಕ್ಕೆ ಭೂಮಿ ನೀಡುವ ಮೂಲಕ ಸೌಹಾರ್ದತೆಯ ವಾತಾವರಣ ಸೃಷ್ಟಿಗೆ ಕಾರಣವಾಗಿದ್ದಾರೆ.
ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯಲ್ಲಿ ಮಸೀದಿಗೆ ಹೋಗಲು ದಾರಿ ನಿರ್ಮಾಣಕ್ಕೆ ಹಿಂದೂಗಳು ಭೂಮಿ ನೀಡಿದ್ದಾರೆ. ಹಿಂದೂಗಳು ಭೂಮಿ ನೀಡಿದ್ದರಿಂದ ಮುಸ್ಲಿಮರು ನಮಾಜ್‌ಗೆಂದು ಮಸೀದಿಗೆ ಹೋಗುವುದು ಸುಲಭವಾಗಲಿದೆ.
ಮಸೀದಿಗೆ ಹೋಗಲು ಮುಸ್ಲಿಮರು ಸಂಕಷ್ಟ ಪಡುತ್ತಿದ್ದರು. ಮುಸ್ಲಿಮರ ಸಮಸ್ಯೆಗೆ ಪರಿಹಾರ ಒದಗಿಸುವ ದೃಷ್ಟಿಯಿಂದ ಹಿಂದೂಗಳು ಭೂಮಿ ನೀಡಿದ್ದಾರೆ. ಸಂತಕಬೀರ್ ಗ್ರಾಮದ ರಾಜೇಂದ್ರ ಸಿಂಗ್, ಕಪಿಲ್ ಸಿಂಗ್, ಮಹೇಂದ್ರ ಸಿಂಗ್ ಮತ್ತು ನಕ್ಚೆಂದ್ ಸಿಂಗ್ ಅವರು ಮಸೀದಿಗೆ ಹೋಗಲು ರಸ್ತೆ ನಿರ್ಮಾಣಕ್ಕೆ ನೂರು ಮೀಟರ್ ಭೂಮಿ ದಾನ ನೀಡಿದ್ದಾರೆ ಎಂದು ಗ್ರಾಮದ ಮುಖಂಡೆ ಊರ್ಮಿಳಾ ದೇವಿ ತಿಳಿಸಿದ್ದಾರೆ.
ತವೈಪರ್‌ನಲ್ಲಿ ಮುಸ್ಲಿಮರು ನಮಾಜ್‌ಗೆ ಹೋಗುತ್ತಿದ್ದ ಮಸೀದಿ ಪಕ್ಕ ಸದಾ ಕೊಳಚೆ ನೀರು ತುಂಬಿಕೊಂಡಿರುತ್ತದೆ. 1963 ರಲ್ಲಿ ನಿರ್ಮಾಣವಾದ ಮಸೀದಿ ಸುತ್ತ ಪ್ರದೇಶದಲ್ಲಿ ಜನ ಸಂಖ್ಯೆ ಹೆಚ್ಚಿದ್ದು, ಮಸೀದಿಗೆ ಹೋಗುವ ಸಮೀಪದ ದಾರಿಯಲ್ಲಿ ತೀವ್ರ ಸಮಸ್ಯೆಯಾಗುತ್ತಿತ್ತು. ಇದೀಗ ಹಿಂದೂಗಳು ಭೂಮಿ ನೀಡುವ ಮೂಲಕ ಹಿಂದೂಗಳು ಉದಾರತೆ ಮೆರೆದಿದ್ದು, ಹಿಂದೂ ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.
Leave A Reply