ಹೋಳಿ ನಿಮಿತ್ತ ಹಿಂದೂಗಳಿಗೆ ಸರ್ಕಾರಿ ರಜೇ ಘೋಷಿಸಿದ ಪಾಕ್ ಸಿಂದ್ ಸರ್ಕಾರ
ಕರಾಚಿ: ಸದಾ ಹಿಂದೂಗಳ ವಿರುದ್ಧ ದ್ವೇಷ ಕಾರುತ್ತಿದ್ದ ಪಾಕಿಸ್ತಾನದ ಸರ್ಕಾರಗಳು ಇದೀಗ ಬದಲಾಗುತ್ತಿದ್ದು, ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಹಿಂದೂಗಳ ಹಬ್ಬ ಆಚರಣೆಗೂ ಪ್ರೇರಣೆ ನೀಡುತ್ತಿವೆ. ಇದೀಗ ಪಾಕಿಸ್ತಾನದ ಸಿಂದ್ ಪ್ರಾಂತ್ಯದ ಸ್ಥಳೀಯ ಸರ್ಕಾರ ಹೋಳಿ ಹಬ್ಬದ ನಿಮಿತ್ತ ಹಿಂದೂಗಳಿಗೆ ಸರ್ಕಾರಿ ರಜೆ ಘೋಷಿಸಿದೆ.
ಸಿಂದ್ ಪ್ರಾಂತ್ಯದಲ್ಲಿರುವ ಹಿಂದೂ ಸರ್ಕಾರಿ ನೌಕರರು, ಕಾರ್ಮಿಕರು, ಸಾರ್ವಜನಿಕರ ವಲಯದ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುವವರು, ಸ್ಥಳೀಯ ಸರ್ಕಾರಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಹಿಂದೂಗಳಿಗೆ ರಜೆ ಘೋಷಿಸಲಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.
ಅಲ್ಲದೇ ಸಿಂದ್ ಪ್ರಾಂತ್ಯದ ಮುಖ್ಯಮಂತ್ರಿ ಮುರದ್ ಅಲಿ ಶಾ ಹಿಂದೂ ಸಮುದಾಯದವರಿಗೆ ಹೋಳಿ ಹಬ್ಬದ ಶುಭಾಶಯ ಕೋರಿದ್ದು, ಶಾಂತಿಯುತ, ಸೌಹಾರ್ದಯುತ ಹೋಳಿ ಆಚರಿಸಿ ಎಂದು ಸಲಹೆ ನೀಡಿದ್ದಾರೆ.
ಸರ್ಕಾರದ ಈ ನಿರ್ಧಾರಕ್ಕೆ ಸಿಂದ್ ಪ್ರಾಂತ್ಯದ ಹಿಂದೂಗಳು ಸರ್ಕಾರಕ್ಕೆ ಧನ್ಯವಾದ ಹೇಳಿದ್ದು, ರಾಜ್ಯದ ಹಿಂದೂಗಳ ಭಾವನೆಗಳಿಗೆ ಬೆಲೆ ನೀಡಿ, ಹಬ್ಬದ ಆಚರಣೆಗೆ ಸಹಕಾರ ನೀಡಿದ್ದು, ಹಿಂದೂಗಳ ಸಂತೋಷ ಹೆಚ್ಚಿಸಿದೆ ಎಂದು ಹಿಂದೂಗಳು ಹರ್ಷ ವ್ಯಕ್ತಪಡಿಸಿದ್ದಾರೆ.
Leave A Reply