ಭಾರತ ಡ್ರೋನ್ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿದ್ದರೂ ಪಾಕ್ ಗೆ ನಡುಕ
ಇಸ್ಲಾಮಾಬಾದ್: ಭಾರತ ಡ್ರೋನ್ ತಂತ್ರಜ್ಞಾನ ಅಭಿವೃದ್ಧಿ ಪಡಿಸುತ್ತಿರುವುದು ಪಾಕಿಸ್ತಾನದ ಪ್ರಾದೇಶಿಕ ವ್ಯೂಹಾತ್ಮಕ ಸ್ಥಿರತೆ ಮೇಲೆ ಒತ್ತಡ ಬೀಳುತ್ತಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ಮಹಮ್ಮದ್ ಫೈಸಲ್ ಆತಂಕ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಭಾರತದಲ್ಲಿ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದರೂ ತನಗೆ ನಡುಕು ಹುಟ್ಟುತ್ತಿದೆ ಎಂಬುದನ್ನು ಜಗತ್ತಿಗೆ ಸಾರಿದೆ.
ಭಾರತ ಡ್ರೋನ್ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವ ಮೂಲಕ ಸೈನ್ಯಕ್ಕೆ ಹೆಚ್ಚಿನ ಖರ್ಚು ಮಾಡುತ್ತಿದೆ. ಅಲ್ಲದೇ ಸುತ್ತಲಿನ ದೇಶಗಳ ಪ್ರದೇಶಗಳ ಮೇಲೆ ಹಿಡಿತ ಸಾಧಿಸಲು, ಆಕ್ರಮಣ ಮಾಡಲು ಇದು ಪೂರಕವಾಗಲಿದೆ. ಇದರಿಂದ ಯುದ್ಧ ಘೋಷಣೆಯಾಗುವ ಭೀತಿ ಉಂಟಾಗಿದೆ. ಭಾರತ ಈ ಕ್ರಮ ಸರಿಯಾದುದಲ್ಲ ಎಂದು ಫೈಸಲ್ ತಿಳಿಸಿದ್ದಾರೆ.
ಡ್ರೋನ್ ತಂತ್ರಜ್ಞಾನದ ಬಳಕೆ ಅಂತಾರಾಷ್ಟ್ರೀಯ ಮಾನವೀಯ ಕಾನೂನು ನಿಮಯಗಳಂತೆ ಇರಬೇಕು. ಸ್ಥಾಪಿತ ಕಾನೂಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದ್ದಾರೆ.
ಭಾರತ ಡ್ರೋನ್ ತಂತ್ರಜ್ಞಾನ ಅಭಿವೃದ್ಧಿ ಪಡಿಸುತ್ತಿರುವುದು ಪಾಕಿಸ್ತಾನ ಸರ್ಕಾರಕ್ಕೆ ಆತಂಕ ಮೂಡಿಸಿರುವುದು ನಿಶ್ಚಿತವಾಗಿದೆ. ತನಗೆ ತಾಕತ್ತು ಇಲ್ಲದ ಪಾಕಿಸ್ತಾನ ಇದೀಗ ಭಾರತ ತಂತ್ರಜ್ಞಾನ ಅಭಿವೃದ್ಧಿ ಪಡಿಸುವುದನ್ನು ವಿರೋಧಿಸುವ ಮೂಲಕ ತನ್ನ ಆತಂಕವನ್ನು ಹೊರ ಹಾಕಿದೆ.
Leave A Reply