• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಮಂಗಳೂರು ದಕ್ಷಿಣದಲ್ಲಿ ಯೋಗೀಶ್ ಭಟ್ಟರ ಸಾಧನೆಗಳಿಗೆ ಲೋಬೋ ಫ್ಲೆಕ್ಸ್!!

Tulunadu News Posted On March 5, 2018
0


0
Shares
  • Share On Facebook
  • Tweet It

ಮಂಗಳೂರು ನಗರ ದಕ್ಷಿಣದಲ್ಲಿ ಇನ್ನು ಎರಡು ತಿಂಗಳು ಯಾವುದೇ ಉತ್ಪನ್ನಗಳಿಗೆ ಫ್ಲೆಕ್ಸ್, ಹೋರ್ಡಿಂಗ್ಸ್ ಹಾಕಲು ಜಾಗ ಸಿಗುವುದಿಲ್ಲ. ಯಾಕೆಂದರೆ ಮಂಗಳೂರು ನಗರ ದಕ್ಷಿಣ ಶಾಸಕ ಜೆ ಆರ್ ಲೋಬೋ ಅವರು ಕಳೆದ ಡಿಸೆಂಬರ್ ನಿಂದಲೇ ಇದ್ದಬದ್ದ ಎಲ್ಲಾ ಹೋರ್ಡಿಂಗ್ಸ್ ಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.

ಎಲ್ಲಾ ಕಡೆ ಅವರದ್ದೇ ಜಾಹೀರಾತು. ನಾವು ಹೇಗೆ ಒಂದು ವಸ್ತುವನ್ನು ಖರೀದಿಸುವಾಗ ಅದರ ಜಾಹೀರಾತು ಫಲಕ ನೋಡಿ ಮರಳು ಆಗಿ ವಸ್ತು ಖರೀದಿಸುತ್ತೇವೆಯೋ ಹಾಗೆ ಲೋಬೋ ಅವರು ತಮ್ಮ ಜಾಹೀರಾತುಗಳನ್ನು ಅಲ್ಲಲ್ಲಿ ಹಾಕಿ ತಮ್ಮನ್ನು ಪಬ್ಲಿಸಿಟಿ ಮಾಡುತ್ತಿದ್ದಾರೆ. ಕೆಳಗೆ ಯಾರ್ಯಾರದ್ದೋ ಹೆಸರು ಬೇರೆ. ಅವರು ಪಬ್ಲಿಸಿಟಿ ಮಾಡುವುದು ತಪ್ಪಲ್ಲ. ಆದರೆ ಸುಳ್ಳು ಜಾಹೀರಾತು ಕೊಟ್ಟು ಉತ್ಪನ್ನಗಳನ್ನು ಮಾರುವಂತೆ ಇವರು ತಮ್ಮದಲ್ಲದ ಸಾಧನೆಗಳನ್ನು ಹಾಕಿ ತಮ್ಮ ಜಾಹೀರಾತು ಕೊಡುತ್ತಿರುವುದೇ ಹಾಸ್ಯಾಸ್ಪದ. ಕೆಲವು ಸುಳ್ಳು ಜ್ಯೋತಿಷಿಗಳು ಜಾಹೀರಾತು ಕೊಟ್ಟು ಅದನ್ನು ಪರಿಹಾರ ಮಾಡುತ್ತೇವೆ, ಇದಕ್ಕೆ ಪರಿಹಾರ ಹೇಳುತ್ತೇವೆ ಎಂದು ಹೇಳುತ್ತಾರಲ್ಲ, ಹಾಗೆ ಕಾಣುತ್ತೀವೆ ಶಾಸಕರ ಹೋರ್ಡಿಂಗ್ಸ್ ಅಥವಾ ಪೆಕ್ಸ್ ಗಳು. ಬೇಕಾದರೆ ಜೆ ಆರ್ ಲೋಬೋ ಅವರ ಹೋರ್ಡಿಂಗ್ಸ್ ನೋಡಿ. ತಾರಾಲಯ ಅಥವಾ ತ್ರಿಡಿ ಮಂಗಳೂರಿಗೆ ಬಂದದ್ದು ತಮ್ಮ ಕೊಡುಗೆ ಎನ್ನುವಂತೆ ಬರೆದು ಅಲ್ಲಲ್ಲಿ ಜಾಹೀರಾತು ಕೊಟ್ಟಿದ್ದಾರೆ. ಅವರಿಗೆ ಚೆನ್ನಾಗಿ ಗೊತ್ತು. ತಾರಾಲಯ ಅವರು ಮಂಗಳೂರಿಗೆ ತಂದದ್ದೇ ಅಲ್ಲ. ಅದನ್ನು ತಂದದ್ದು ನಿಕಟಪೂರ್ವ ಶಾಸಕರಾದ ಎನ್ ಯೋಗೀಶ್ ಭಟ್. ಭಟ್ ಆವತ್ತು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಬೆನ್ನತ್ತಿ ಇದನ್ನು ಪಿಲಿಕುಳಕ್ಕೆ ತಂದದ್ದು. ಆಗ ಇದರ ಬಜೆಟ್ ಇದ್ದದ್ದು ಹನ್ನೊಂದು ಕೋಟಿ. ಯೋಗೀಶ್ ಭಟ್ಟರು ಸ್ವತ: ಆಗ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಅವರನ್ನು ಮಂಗಳೂರಿಗೆ ಕರೆಸಿ ಪಿಲಿಕುಳಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಮಾಧ್ಯಮದವರ ಮತ್ತು ಗಣ್ಯರ ಎದುರು ನಾಮಫಲಕ ಕೂಡ ಅನಾವರಣ ಮಾಡಿದ್ದರು. ನಂತರ ಅಲ್ಲಿರುವ ಗುತ್ತು ಮನೆಯಲ್ಲಿ ಬಂದವರಿಗೆ ಎಲ್ಲಾ ಊಟದ ವ್ಯವಸ್ಥೆ ಇತ್ತು. ಆದರೆ ಮೊನ್ನೆ ನೋಡಿದ್ರೆ ಆಗ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಅವರು ಅನಾವರಣಗೊಳಿಸಿದ ನಾಮಫಲಕ ಅಲ್ಲಿ ಇಲ್ಲವೇ ಇಲ್ಲ. ಇದಕ್ಕಿಂತ ದೊಡ್ಡ ರಾಜಕೀಯ ಕಾಂಗ್ರೆಸ್ ಅಥವಾ ಜೆ ಆರ್ ಲೋಬೋ ಅವರು ಮಾಡಲು ಸಾಧ್ಯವಿದೆಯಾ? ಅಲ್ಲಿ ಫಲಕವೇ ಮಾಯವಾಗಿದೆ ಎಂದರೆ ಏನರ್ಥ? ಹಾಗಾದರೆ ಆವತ್ತು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪಿಲಿಕುಳಕ್ಕೆ ಬಂದದ್ದೇ ಸುಳ್ಳಾ? ಮಾಧ್ಯಮದವರ ಮತ್ತು ಗಣ್ಯರ ಎದುರು ಫಲಕ ಅನಾವರಣ ಮಾಡಿದ್ದು ಕನಸಾ? ಇದೆಲ್ಲಾ ಗೊತ್ತಿಲ್ಲದ ಸಚಿವ ಸೀತಾರಾಂ ಅವರು ಮಂಗಳೂರಿಗೆ ಬಂದಾಗ ಹಿಂದಿನ ದಿನ ಯೋಗೀಶ್ ಭಟ್ ಅವರ ಸುದ್ದಿಗೋಷ್ಟಿಯನ್ನು ಮಾಧ್ಯಮದವರು ಅವರಿಗೆ ನೆನಪಿಸಿದಾಗ ” ಯೋಗೀಶ್ ಭಟ್ ಅವರು ಹಾಗೆ ಹೇಳಿದ್ದೇ ಆಶ್ಚರ್ಯವಾಗಿದೆ” ಎಂದು ಹೇಳಿದ್ದಾರೆ. ಕನಿಷ್ಟ ಜೆ ಆರ್ ಲೋಬೋ ಅವರು ಸಚಿವರಿಗೆ “ಇಲ್ಲಾ ಸರ್, ಜಗದೀಶ್ ಶೆಟ್ಟರ್ ಫಲಕ ಅನಾವರಣ ಮಾಡಿದ್ದು ಹೌದು” ಎನ್ನಬಹುದಿತ್ತು. ಫಲಕವನ್ನೇ ಮಾಯಾ ಮಾಡಿದವರಿಂದ ಅದೆಲ್ಲ ನಿರೀಕ್ಷೆ ಮಾಡಲು ಹೇಗೆ ಸಾಧ್ಯ. ಈಗ ಇಡೀ ತಾರಾಲಯ ಲೋಬೋ ಅವರ ಪ್ರಯತ್ನದಿಂದ ಮಂಗಳೂರಿಗೆ ಬಂದಿದೆ ಎಂದೇ ಜನರನ್ನು ನಂಬಿಸಲು ಇದು ಸಹಕಾರಿಯಾಗಿದೆ.

ಅನುದಾನ ಯಡಿಯೂರಪ್ಪ ಕೊಟ್ಟಿದ್ದು, ಮೈಲೇಜ್ ಸಿದ್ದುಗೆ…

ಇನ್ನೊಂದು ತಮಾಷೆ ನೋಡಿ. ಮಣ್ಣಗುಡ್ಡೆಯ ಕಾಂಗ್ರೆಸ್ಸಿನ ನಾಮನಿರ್ದೇಶಿತ ಸದಸ್ಯರೊಬ್ಬರು ಒಂದು ಫ್ಲೆಕ್ಸ್ ಹಾಕಿದ್ದಾರೆ. ಅದರ ಒಕ್ಕಣೆ ಹೇಗಿದೆ ಎಂದರೆ ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಯವರ ನೂರು ಕೋಟಿ ಅನುದಾನದಿಂದ ರೂಪಾಯಿ 11 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕುದ್ರೋಳಿ-ಅಳಕೆ ಮುಖ್ಯ ರಸ್ತೆಯ ಕಾಂಕ್ರೀಟಿಕರಣ ಹಾಗೂ ಸೇತುವೆ ಕಾಮಗಾರಿಗಾಗಿ ಶ್ರಮಿಸಿರುವ ಹೀಗಿಗೆ ಬರೆದು ಲೋಬೋ ಅವರ ಹೆಸರು ಬರೆದು ಹೃದಯಸ್ಪರ್ಶೀ ಅಭಿನಂದನೆ ಹಾಕಿದ್ದಾರೆ. ಫ್ಲೆಕ್ಸ್ ಮೇಲೆ ಸಿದ್ಧರಾಮಯ್ಯನವರ ಫೋಟೊ ಹಾಕಿರುವುದರಿಂದ ಎಲ್ಲರೂ ಸಿದ್ಧರಾಮಯ್ಯನವರೇ ಅನುದಾನ ಬಿಡುಗಡೆಗೊಳಿಸಿದ್ದಾರೆ ಎನ್ನುವ ಭ್ರಮೆ ಬರುವಂತೆ ಇಲ್ಲಿ ಮಾಡಲಾಗಿದೆ. ಬಹುಶ: ಆ ನಾಮ ನಿರ್ದೇಶಿತ ಸದಸ್ಯರಿಗೆ ಗೊತ್ತಿಲ್ಲವೋ ಅಥವಾ ಲೋಬೋ ಹೀಗೆ ಹಾಕಲು ಹೇಳಿದರೋ ಯಾರಿಗೆ ಗೊತ್ತು. ಆದರೆ ಒಂದು ವಿಷಯ ಹೇಳುತ್ತೇನೆ. ಕುದ್ರೋಳಿ-ಅಳಕೆ ಸೇತುವೆ ಮತ್ತು ದುರ್ಗಾಮಹಾಲ್ ನಿಂದ ಶ್ರೀನಿವಾಸ್ ಥಿಯೇಟರ್ ತನಕದ ರಸ್ತೆಗೆ ಅನುದಾನ ಇಟ್ಟಿದ್ದು ಹಿಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ. ಅವರ ಎರಡನೇ ನೂರು ಕೋಟಿ ಅನುದಾನದಿಂದ ಹನ್ನೊಂದುವರೆ ಕೋಟಿ ಬಿಡುಗಡೆಗೊಂಡಿದೆ. ಲೋಬೋ ಅವರು ಚುನಾವಣೆ ಹತ್ತಿರ ಇರುವುದರಿಂದ ಹೀಗೆ ಫ್ಲೆಕ್ಸ್ ಹಾಕಿಸುತ್ತಿದ್ದಾರೆ, ಕೆಳಗೆ ಯಾರದ್ದಾರದ್ದೋ ಹೆಸರು ಬರೆಸುತ್ತಿದ್ದಾರೆ.

ಇನ್ನು ಮಂಗಳೂರು ಮಹಾನಗರ ಪಾಲಿಕೆ ಎಸ್ ಎಫ್ ಸಿ ಫಂಡ್ ಎನ್ನುವುದು ಇದೆ. ಅದರಿಂದ ರಸ್ತೆಯೊಂದಕ್ಕೆ ಡಾಮರ್ ಅಥವಾ ಕಾಂಕ್ರೀಟಿಕರಣ ಮಾತ್ರ ಮಾಡಬೇಕು. ಅದು ಬಿಟ್ಟು ರಸ್ತೆಯ ಡಾಮರಿನ ಹಣವನ್ನು ತೆಗೆದು ಇವರು ಡ್ರೈನೇಜ್ ಮಾಡಿಸುತ್ತಾರೆ. ಕುದ್ಮುಲ್ ರಂಗರಾವ್ ರಸ್ತೆ ಅಂದರೆ ಪಿವಿಎಸ್ ನಿಂದ ಕರಂಗಲಪಾಡಿ-ಬಂಟ್ಸ್ ಹಾಸ್ಟೆಲ್ ತನಕದ ಈ ರಸ್ತೆಯಲ್ಲಿ ಡ್ರೈನೇಜ್ ಗೆ ಹಣ ಹಾಕಿದ್ದು ಎಸ್ ಎಫ್ ಸಿ ಫಂಡ್ ನಿಂದ.

ಫ್ಲೆಕ್ಸ್ ಮೆಟೆರಿಯಲ್ ನಿಷೇಧ ಮಾಡಿದ್ದು ಕಾಂಗ್ರೆಸ್…

ಒಟ್ಟಿನಲ್ಲಿ ಯಾರೋ ಮಾಡಿದ ಸಾಧನೆಯನ್ನು ತನ್ನದು ಎನ್ನುವುದು, ಬಿಜೆಪಿ ಸರಕಾರ ಬಿಡುಗಡೆಗೊಳಿಸಿದ ಅನುದಾನವನ್ನು ತಮ್ಮ ಪಕ್ಷದ ಮುಖ್ಯಮಂತ್ರಿ ಮಾಡಿದ್ರು ಎನ್ನುವುದು ನಂತರ ಅದನ್ನು ಬರೆದು ಹೋರ್ಡಿಂಗ್ ಹಾಕುವುದು, ಫ್ಲೆಕ್ಸ್ ನಿಲ್ಲಿಸುವುದು ಇದೇ ಕಳೆದ ಮೂರು ತಿಂಗಳುಗಳಿಂದ ನಡೆಯುತ್ತದೆ.

ಎಲ್ಲದಕ್ಕಿಂತ ಇನ್ನೊಂದು ದೊಡ್ಡ ವಿಷಯ ಎಂದರೆ ಲೋಬೋ ಅವರು ಇಷ್ಟು ಫ್ಲೆಕ್ಸ್ ಅಥವಾ ಹೋರ್ಡಿಂಗ್ಸ್ ಎಲ್ಲಾ ಕಡೆ ಹಾಕುತ್ತಿರುವುದೇ ಕಾನೂನು ಪ್ರಕಾರ ತಪ್ಪು. ಫ್ಲೆಕ್ಸ್ ಮತ್ತು ಹೋರ್ಡಿಂಗ್ ಗಳಿಗೆ ಬಳಸುವ ಪ್ಲಾಸ್ಟಿಕ್ ಅನ್ನು ಇವರದ್ದೇ ರಾಜ್ಯ ಸರಕಾರ ನಿಷೇಧಿಸಿದೆ. ಆದರೆ ಆ ನಿಷೇಧವನ್ನು ನಮ್ಮ ರಾಜ್ಯದಲ್ಲಿಯೇ ಅತೀ ಹೆಚ್ಚು ಉಲ್ಲಂಘಿಸುತ್ತಿರುವುದೆಂದರೆ ಬಹುಶ: ಮಂಗಳೂರು ನಗರ ದಕ್ಷಿಣದ ಶಾಸಕ ಜೆ ಆರ್ ಲೋಬೋ ಅವರೇ ಇರಬೇಕು. ರಾಜ್ಯ ಸರಕಾರ ನಿಷೇಧಿಸಿದ್ದನ್ನು ಬಳಸಿ ಯಾರದ್ದೋ ಸಾಧನೆಯನ್ನು ತಮ್ಮದೆಂದು ಬಿಂಬಿಸುವ ಕೆಲಸದಲ್ಲಿ ಸದ್ಯ ಲೋಬೋ ಬ್ಯುಸಿಯಾಗಿದ್ದಾರೆ. ಒಂದು ವೇಳೆ ಇವರು ಹಾಕುವ ಸಾಧನೆ ಎಲ್ಲಾ ಇವರದ್ದೇ ಆದರೆ ದುರ್ಗಾ ಮಹಾಲ್- ಶ್ರೀನಿವಾಸ ಥಿಯೇಟರ್ ರಸ್ತೆ ಮುಗಿಯಲು ಐದು ವರ್ಷ ಯಾಕೆ? ಆ ರಸ್ತೆಯನ್ನು ಮೊದಲು ತಯಾರಿಸಿದ ರೂಪುರೇಶೆಯಲ್ಲಿಯೇ ಯಾಕೆ ಕಂಪ್ಲೀಟ್ ಮಾಡಿಲ್ಲ? ತಾರಾಲಯ ಮಾಡಲು ಐದು ವರ್ಷ ಯಾಕೆ ಹಿಡಿಯಿತು? ಆಶ್ರಯ ಮನೆ ಫಲಕ ಕೇವಲ ಅನಾವರಣ ಮಾಡಲು ಐದು ವರ್ಷ ಯಾಕೆ ಹಿಡಿಯಿತು? ಯಾಕೆಂದರೆ ಎಲ್ಲವನ್ನು ಮಾಡಿದ್ದು ಹಿಂದಿನ ಶಾಸಕರು. ಇವರು ಮಾಡಿದ್ದು ಯಾವುದು ಎನ್ನುವುದನ್ನು ಇವರು ಹೇಳಬೇಕು, ಒಂದು ವೇಳೆ ಮಾಡಿದ್ದರೆ!!

0
Shares
  • Share On Facebook
  • Tweet It




Trending Now
ಸಣ್ಣಪುಟ್ಟ ಅಂಗಡಿಗಳಿಗೂ ಈಗ ತೆರಿಗೆ ಅಧಿಕಾರಿಗಳ ನೋಟಿಸ್ ಯಾಕೆ? ಇಲ್ಲಿದೆ ಸುಲಭ ಲೆಕ್ಕಾಚಾರ!
Tulunadu News July 19, 2025
ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
Tulunadu News July 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸಣ್ಣಪುಟ್ಟ ಅಂಗಡಿಗಳಿಗೂ ಈಗ ತೆರಿಗೆ ಅಧಿಕಾರಿಗಳ ನೋಟಿಸ್ ಯಾಕೆ? ಇಲ್ಲಿದೆ ಸುಲಭ ಲೆಕ್ಕಾಚಾರ!
    • ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
    • ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
    • ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ
    • ಗಂಡ ತಲೆಹಿಡುಕ ಎಂದ ಸಂತ್ರಸ್ತೆಗೆ ಪೊಲೀಸ್ ಪೇದೆಯೇ ಮುಕ್ಕಿದ ಮಂಗಳೂರಿನ ನೋವಿನ ಕಥೆ!
    • ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
  • Popular Posts

    • 1
      ಸಣ್ಣಪುಟ್ಟ ಅಂಗಡಿಗಳಿಗೂ ಈಗ ತೆರಿಗೆ ಅಧಿಕಾರಿಗಳ ನೋಟಿಸ್ ಯಾಕೆ? ಇಲ್ಲಿದೆ ಸುಲಭ ಲೆಕ್ಕಾಚಾರ!
    • 2
      ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
    • 3
      ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
    • 4
      ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • 5
      ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ

  • Privacy Policy
  • Contact
© Tulunadu Infomedia.

Press enter/return to begin your search