ದಲಿತ ಮಹಿಳೆಯ ಮತಾಂತರಕ್ಕೆ ಒತ್ತಾಯಿಸಿದ್ದ ಮುಸ್ಲಿಂ ನ್ಯಾಯಾಧೀಶನ ಅಮಾನತು!
ರಾಂಚಿ: ದೇಶದಲ್ಲಿ ಮುಸ್ಲಿಂ ಕುಟುಂಬಗಳಲ್ಲಿ ಮತಾಂತರ ಪ್ರಕರಣ ಜಾಸ್ತಿಯಾಗುತ್ತಿವೆ ಎಂಬ ಮಾತು ಕೇಳಿಬರುತ್ತಿರುವ ಬೆನ್ನಲ್ಲೇ, ಈ ಮತಾಂತರ ಪಿಡುಗು ನ್ಯಾಯಾಲಯಕ್ಕೂ ಕಾಲಿಟ್ಟಿದ್ದು ಆತಂಕ ಹುಟ್ಟಿಸಿದೆ.
ಹೌದು, ಜಾರ್ಖಂಡಿನ ಗರ್ವಾ ಜಿಲ್ಲಾ ನ್ಯಾಯಾಲಯದಲ್ಲಿ ಉಪ ನ್ಯಾಯಾಧೀಶನಾಗಿರುವ ನಯೀಮ್ ಅನ್ಸಾರಿ ಎಂಬಾತ ಅರೆ ಕಾನೂನು ಸ್ವಯಂ ಸೇವಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಚಂದಾ ದೇವಿ ಎಂಬ ಮಹಿಳೆಗೆ ಕರೆ ಮಾಡಿ, ತನ್ನನ್ನು ಮದುವೆಯಾಗು, ಇಸ್ಲಾಮಿಗೆ ಮತಾಂತರವಾಗು ಎಂದು ಪೀಡಿಸಿದ್ದಾನೆ ಎಂದು ತಿಳಿದುಬಂದಿದೆ.
ಇದರಿಂದ ಬೇಸತ್ತ ಮಹಿಳೆ ಜಿಲ್ಲಾ ಪ್ರಧಾನ ನ್ಯಾಯಾಧೀಶರಿಗೆ ತಿಳಿಸಿದ್ದಾರೆ. ಈ ವಿಷಯ ಸಾಮಾಜಿಕ ಜಾಲತಾಣ ಸೇರಿ ಎಲ್ಲೆಡೆ ವೈರಲ್ ಆಗುತ್ತಲೇ ಜಾರ್ಖಂಡ್ ಹೈಕೋರ್ಟ್ ನಯೀಮ್ ಅನ್ಸಾರಿಯನ್ನು ಅಮಾನತುಗೊಳಿಸಿ ಆದೇಶಿಸಿದೆ.
ನಯೀಮ್ ಅನ್ಸಾರಿ ಪದೇಪದೆ ಕರೆ ಮಾಡಿ ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದು, ಮದುವೆಯಾಗುತ್ತೇನೆ, ಮುಂದೆ ಮತಾಂತರವಾಗುವೆ ಎಂದು ಪೀಡಿಸುತ್ತಿದ್ದ ಎಂದು ಮಹಿಳೆ ತಿಳಿಸಿದ್ದಾರೆ.
ನ್ಯಾಯಾಲಯದಲ್ಲಿ ನ್ಯಾಯದ ಪರ ವಕಾಲತ್ತು ವಹಿಸಬೇಕಾದ ನ್ಯಾಯಾಧೀಶರೇ ನ್ಯಾಯಾಲಯ ಎಂಬ ಪವಿತ್ರ ಆವರಣದಲ್ಲಿ ಮತಾಂತರದ ಬಾವುಟ ಹಾರಿಸುತ್ತಾರೆ ಎಂದರೆ ನಾವೆಲ್ಲರೂ ಇದನ್ನು ಖಂಡಿಸಲೇಬೇಕು.
Leave A Reply