ಕೋಯಿಂಬತ್ತೂರ್ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ
ಕೋಯಿಂಬತ್ತೂರ್: ಕೇರಳಕ್ಕೆ ಸಿಮೀತವಾಗಿದ್ದ ಬಿಜೆಪಿ ವಿರೋಧಿಗಳ ವಿಕೃತ ಮನಸ್ಥಿತಿ ಇದೀಗ ತಮಿಳುನಾಡಿಗೂ ಚಾಚಿಕೊಂಡಿದ್ದು, ವೆಲ್ಲೂರು ಜಿಲ್ಲೆಯ ಕೋಯಿಂಬತ್ತೂರ್ ನಲ್ಲಿ ಭಾರತೀಯ ಜನತಾ ಪಕ್ಷದ ಕಚೇರಿ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ.
ದುಷ್ಕರ್ಮಿಗಳು ನಡೆಸಿರುವ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಇತ್ತೀಚೆಗೆ ಕೆಲವು ಕಿಡಿಗೇಡಿಗಳು ಪೇರಿಯಾರ್ ಮೂರ್ತಿಗೆ ಅವಮಾನ ಮಾಡಿದ್ದನ್ನು ಬಿಜೆಪಿಯೇ ಮಾಡಿದೆ ಎಂದು ವಿನಾಕಾರಣ ಆರೋಪಿಸಿ, ಈ ಕೃತ್ಯ ಎಸಗಲಾಗಿದೆ ಎನ್ನಲಾಗುತ್ತಿದೆ.
ಭಾರತೀಯ ಜನತಾ ಪಕ್ಷದ ಕಚೇರಿ ಮೇಲೆ ದುಷ್ಕರ್ಮಿಗಳು ನಡೆಸಿರುವ ದಾಳಿ ವೇಳೆ ಯಾವುದೇ ಅಘಾತಕಾರಿ, ಅಪಾಯಕಾರಿ ಘಟನೆಗಳು ನಡೆದಿಲ್ಲ. ಅಲ್ಲದೇ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕೃತ್ಯವನ್ನು ಖಂಡಿಸಿರುವ ಬಿಜೆಪಿ ಮುಖಂಡರು, ದೇಶದಲ್ಲಿ ಬಿಜೆಪಿ ಸರ್ಕಾರದ ಅಲೆ ಬೀಸುತ್ತಿರುವುದರಿಂದ ಸಹಿಸದೇ ವಿರೋಧಿ ಪಕ್ಷಗಳು ಈ ರೀತಿಯ ಕೃತ್ಯಗಳನ್ನು ಎಸಗುತ್ತಿದ್ದಾರೆ. ಇಂತಹ ಕೃತ್ಯಗಳು ನಡೆಸಿ ಕಾರ್ಯಕರ್ತರ ಧೈರ್ಯ ಕುಂದಿಸುವ ಕಾರ್ಯಕ್ಕೆ ಕೈ ಹಾಕಲಾಗುತ್ತಿದೆ. ಆದರೆ ಬೆದರಿಕೆಗಳಿಗೆ ಬಗ್ಗಿ ಯಾವುದೇ ಕಾರಣಕ್ಕೂ ನಾವು ಬಿಜೆಪಿ ಸಂಘಟನೆ ಬಲ ಪಡಿಸುವ ಕಾರ್ಯದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.
Leave A Reply